ಸಂಕ್ರಾಂತಿ ಎಂದರೆ ಸೂರ್ಯ ಒಂದು ರಾಶಿಯಿಂದ ಮುಂದಿನದಕ್ಕೆ ದಾಟುವ ಕ್ಷಣ. ರಾಶಿಗಳು ಹನ್ನೆರಡು, ಆದ್ದರಿಂದ ವರ್ಷದಲ್ಲಿ ಹನ್ನೆರಡು ಸಂಕ್ರಾಂತಿಗಳು, ಸುಮಾರು ಮೂವತ್ತು ದಿನಕ್ಕೊಂದು. ಇವೇ ಸೇರಿ ಚಾಂದ್ರಮಾನದ ಪಕ್ಕದಲ್ಲಿ ನಡೆಯುವ ಸೌರಮಾನದ ಪಂಚಾಂಗ.
ಇವು ಅಲುಗಾಡದೆ ಉಳಿದವು ಅಲುಗಾಡುವುದೇಕೆ
ಈ ಪಂಚಾಂಗದ ಬಹುತೇಕ ಹಬ್ಬಗಳು ತಿಥಿಗೆ ಕಟ್ಟಿದವು, ಮತ್ತು ತಿಥಿ ಚಂದ್ರನ ಲೆಕ್ಕ. ಚಾಂದ್ರ ವರ್ಷ ಸೌರ ವರ್ಷಕ್ಕಿಂತ ಸುಮಾರು ಹನ್ನೊಂದು ದಿನ ಕಡಿಮೆ. ಆದ್ದರಿಂದಲೇ ಯುಗಾದಿ, ದೀಪಾವಳಿ, ಶಿವರಾತ್ರಿ ಪ್ರತಿ ವರ್ಷ ಬೇರೆ ಇಂಗ್ಲಿಷ್ ದಿನಾಂಕದಂದು ಬರುತ್ತವೆ; ಹನ್ನೊಂದು ದಿನ ಹಿಂದೆ ಸರಿದು, ಅಧಿಕ ಮಾಸ ಬಂದಾಗ ಮುಂದಕ್ಕೆ ಜಿಗಿಯುತ್ತವೆ.
ಸಂಕ್ರಾಂತಿಗೆ ಚಂದ್ರನ ಸಂಬಂಧವೇ ಇಲ್ಲ. ಅದು ಸೂರ್ಯನ ಚಲನೆಯ ಘಟನೆ, ಮತ್ತು ಇಂಗ್ಲಿಷ್ ಪಂಚಾಂಗವೂ ಸೌರವೇ; ಹಾಗಾಗಿ ಎರಡೂ ಒಟ್ಟಿಗೆ ಹೆಜ್ಜೆ ಹಾಕುತ್ತವೆ. ಮಕರ ಸಂಕ್ರಾಂತಿ ವರ್ಷದಿಂದ ವರ್ಷಕ್ಕೆ ಬಹುಮಟ್ಟಿಗೆ ಒಂದೇ ಇಂಗ್ಲಿಷ್ ದಿನಾಂಕಕ್ಕೆ ಬರುತ್ತದೆ, ವ್ಯತ್ಯಾಸ ಒಂದು ದಿನಕ್ಕಿಂತ ಹೆಚ್ಚಿಲ್ಲ. ಒಂದು ಹಬ್ಬ ಮಾತ್ರ ಸ್ಥಿರವಾಗಿದ್ದು ಉಳಿದವು ಅಲೆದಾಡುತ್ತವೆ ಎಂದು ಗಮನಿಸಿದವರು ಸರಿಯಾಗಿಯೇ ಗಮನಿಸಿದ್ದಾರೆ; ಕಾರಣ ಇದೇ.
ಅಯನಾಂಶ, ಮತ್ತು ಮಕರ ಜನವರಿಯಲ್ಲಿ ಏಕೆ
ಮಕರ ಸಂಕ್ರಾಂತಿಯನ್ನು ಉತ್ತರಾಯಣದ ಆರಂಭ ಎನ್ನುತ್ತಾರೆ, ಅಂದರೆ ಸೂರ್ಯ ಉತ್ತರಕ್ಕೆ ತಿರುಗುವುದು. ಖಗೋಳದ ಪ್ರಕಾರ ಸೂರ್ಯ ಉತ್ತರಕ್ಕೆ ತಿರುಗುವುದು ಡಿಸೆಂಬರ್ ಕೊನೆಯ ಅಯನ ಬಿಂದುವಿನಲ್ಲಿ, ಜನವರಿಯ ಮಧ್ಯದಲ್ಲಿ ಅಲ್ಲ. ಈ ಅಂತರಕ್ಕೆ ಕಾರಣವಿದೆ.
ಭಾರತೀಯ ಗಣಿತ ನಿರಯನ ಅಥವಾ ನಕ್ಷತ್ರ ಆಧಾರಿತ ರಾಶಿಚಕ್ರವನ್ನು ಬಳಸುತ್ತದೆ, ಅಂದರೆ ನಕ್ಷತ್ರಗಳ ನಡುವಿನ ಸ್ಥಿರ ಬಿಂದುವಿನಿಂದ ಅಳೆದದ್ದು. ಪಾಶ್ಚಾತ್ಯ ಗಣಿತ ವಿಷುವತ್ ಬಿಂದುವಿನಿಂದ ಅಳೆಯುತ್ತದೆ. ವಿಷುವತ್ ಬಿಂದು ಸ್ಥಿರವಲ್ಲ; ಅದು ನಕ್ಷತ್ರಗಳ ನಡುವೆ ಎಪ್ಪತ್ತೆರಡು ವರ್ಷಕ್ಕೆ ಒಂದು ಡಿಗ್ರಿಯಂತೆ ನಿಧಾನವಾಗಿ ಹಿಂದಕ್ಕೆ ಸರಿಯುತ್ತದೆ; ಇದೇ ಅಯನ ಚಲನೆ. ಸುಮಾರು ಹದಿನೇಳು ಶತಮಾನಗಳ ಹಿಂದೆ ಎರಡೂ ಚಕ್ರಗಳು ಒಂದೇ ಕಡೆ ಇದ್ದವು; ಆಗ ಸೂರ್ಯ ಅಯನ ಬಿಂದುವಿನಲ್ಲಿಯೇ ಮಕರವನ್ನು ಪ್ರವೇಶಿಸುತ್ತಿದ್ದ, ಹಬ್ಬ ಮತ್ತು ಖಗೋಳ ಒಪ್ಪುತ್ತಿದ್ದವು. ಅಂದಿನಿಂದ ಅವು ಸುಮಾರು ಇಪ್ಪತ್ತನಾಲ್ಕು ಡಿಗ್ರಿ ದೂರ ಸರಿದಿವೆ. ಸಂಗ್ರಹವಾದ ಆ ವ್ಯತ್ಯಾಸವೇ ಅಯನಾಂಶ, ಮತ್ತು ಅದರಿಂದಲೇ ನಿರಯನ ಮಕರ ಪ್ರವೇಶ ಅಯನ ಬಿಂದುವಿಗಿಂತ ಸುಮಾರು ಇಪ್ಪತ್ತನಾಲ್ಕು ದಿನ ತಡವಾಗಿ ಬರುತ್ತದೆ.
ಇದರಿಂದ ದಿನಾಂಕ ಮೆಲ್ಲಗೆ ಮುಂದಕ್ಕೆ ಸರಿಯುತ್ತದೆ. ಹಿರಿಯರ ನೆನಪಿನಲ್ಲಿಯೇ ಹಬ್ಬ ಒಂದು ದಿನ ಮುಂದಕ್ಕೆ ಹೋಗಿದೆ, ಮತ್ತು ಶತಮಾನಕ್ಕೆ ಸುಮಾರು ಒಂದು ದಿನದಂತೆ ಹೋಗುತ್ತಲೇ ಇರುತ್ತದೆ. ಅಯನಾಂಶಕ್ಕೆ ಒಂದಕ್ಕಿಂತ ಹೆಚ್ಚು ಮಾನ್ಯ ಮೌಲ್ಯಗಳಿರುವುದರಿಂದ ಪ್ರವೇಶದ ಕ್ಷಣ ಕೆಲವು ತಾಸು ಹಿಂದೆಮುಂದೆ ಆಗಬಹುದು; ಅಂಚಿನ ವರ್ಷಗಳಲ್ಲಿ ಬೇರೆ ಬೇರೆ ಪಂಚಾಂಗಗಳು ಬೇರೆ ದಿನ ಕೊಡುವುದು ಅದರಿಂದಲೇ. ಅನುದಿನ ಸಂಕ್ರಾಂತಿಯ ಕ್ಷಣವನ್ನೇ ಕೊಡುತ್ತದೆ, ಅದು ಸೂರ್ಯಾಸ್ತದ ಯಾವ ಕಡೆ ಬೀಳುತ್ತದೆ ಎಂದು ಓದುಗ ನೋಡಬಹುದು.
ಕರ್ನಾಟಕದ ಮಕರ ಸಂಕ್ರಾಂತಿ
ಇದು ಸುಗ್ಗಿಯ ಹಬ್ಬ. ಕಬ್ಬು ಬಂದಿದೆ, ಶೇಂಗಾ ಬಂದಿದೆ, ಮತ್ತು ದಿನವಿಡೀ ನೆಲದಿಂದ ಬಂದದ್ದನ್ನು ಹಂಚುವುದೇ ಕೆಲಸ. ಮನೆಗಳಲ್ಲಿ ಎಳ್ಳು ಬೆಲ್ಲ ಸಿದ್ಧವಾಗುತ್ತದೆ: ಬಿಳಿ ಎಳ್ಳು, ಸಣ್ಣಗೆ ಹೆಚ್ಚಿದ ಬೆಲ್ಲ, ಒಣ ಕೊಬ್ಬರಿ, ಹುರಿದ ಶೇಂಗಾ ಮತ್ತು ಹುರಿಗಡಲೆ. ಸಕ್ಕರೆ ಅಚ್ಚು ಮತ್ತು ಕಬ್ಬಿನ ತುಂಡುಗಳ ಜೊತೆಗೆ ಅದನ್ನು ಮನೆಮನೆಗೆ ಹಂಚುತ್ತಾರೆ. ಜೊತೆಗೆ ಹೇಳುವ ಮಾತು ಶುಭಾಶಯವಷ್ಟೇ ಅಲ್ಲ, ಒಂದು ಕೋರಿಕೆ: ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು. ಹೆಣ್ಣುಮಕ್ಕಳು ತಟ್ಟೆ ಹಿಡಿದು ಮನೆಗಳ ನಡುವೆ ಹೋಗುತ್ತಾರೆ, ಹಿರಿಯ ಹೆಂಗಸರು ಅರಿಶಿನ ಕುಂಕುಮದೊಂದಿಗೆ ಎಳ್ಳು ಬೀರುತ್ತಾರೆ.
ದನಕರುಗಳಿಗೆ ತಮ್ಮದೇ ದಿನ. ಅವುಗಳನ್ನು ತೊಳೆದು, ಕೊಂಬಿಗೆ ಬಣ್ಣ ಹಚ್ಚಿ, ದಕ್ಷಿಣ ಕರ್ನಾಟಕದ ಹಳ್ಳಿಗಳಲ್ಲಿ ಸಂಜೆ ಬೆಂಕಿಯ ಸಾಲನ್ನು ದಾಟಿಸುತ್ತಾರೆ; ಅದೇ ಕಿಚ್ಚು ಹಾಯಿಸುವುದು.
ಇದೇ ಸಂಕ್ರಾಂತಿ ತಮಿಳುನಾಡಿನಲ್ಲಿ ಪೊಂಗಲ್, ಹಲವು ದಿನಗಳ ಹಬ್ಬ, ಹೊಸ ಅಕ್ಕಿ ಉಕ್ಕಿ ಹರಿಯುವುದು ಅದರ ಕೇಂದ್ರ; ಅಸ್ಸಾಮಿನಲ್ಲಿ ಮಾಘ ಬಿಹು; ಪಂಜಾಬಿನಲ್ಲಿ ಮಾಘಿ; ಗುಜರಾತಿನಲ್ಲಿ ಗಾಳಿಪಟದ ಉತ್ತರಾಯಣ. ಎಲ್ಲವೂ ಒಂದೇ ಸೌರ ಕ್ಷಣ.
ಉಳಿದ ಸಂಕ್ರಾಂತಿಗಳು
ಇನ್ನೂ ಮೂರಕ್ಕೆ ವಿಶೇಷ ಮಹತ್ವ. ಮೇಷ ಸಂಕ್ರಾಂತಿ ಸೌರಮಾನ ಹೊಸ ವರ್ಷ; ಕೇರಳದಲ್ಲಿ ವಿಷು, ತಮಿಳುನಾಡಿನಲ್ಲಿ ಪುತ್ತಾಂಡು, ಪಂಜಾಬಿನಲ್ಲಿ ಬೈಸಾಖಿ, ಅಸ್ಸಾಮಿನಲ್ಲಿ ಬೊಹಾಗ್ ಬಿಹು. ದಕ್ಷಿಣ ಮತ್ತು ಪೂರ್ವದ ಹೊಸ ವರ್ಷಗಳು ಬಹುಮಟ್ಟಿಗೆ ಸ್ಥಿರ ದಿನಾಂಕಕ್ಕೆ ಬಂದು ಯುಗಾದಿ ಮಾತ್ರ ಚಲಿಸುವುದು ಇದರಿಂದಲೇ. ಕರ್ಕ ಸಂಕ್ರಾಂತಿ ದಕ್ಷಿಣಾಯನವನ್ನು ಆರಂಭಿಸುತ್ತದೆ ಮತ್ತು ಕೇರಳದ ಕರ್ಕಿಡಕ ಮಾಸವನ್ನು ತೆರೆಯುತ್ತದೆ; ಆ ತಿಂಗಳು ರಾಮಾಯಣ ಪಾರಾಯಣದ್ದು. ತುಲಾ ಸಂಕ್ರಾಂತಿ ಕೊಡಗಿನ ತಲಕಾವೇರಿಯ ತುಲಾ ಸಂಕ್ರಮಣ; ನಿಗದಿತ ಕ್ಷಣದಲ್ಲಿ ಕುಂಡಿಕೆಯಲ್ಲಿ ತೀರ್ಥ ಉಕ್ಕಿ ಕಾವೇರಿ ಜನಿಸಿದಳೆಂದು ನಂಬಿಕೆ; ಮುಂದಿನ ತಿಂಗಳು ನದೀಸ್ನಾನದ ತುಲಾ ಮಾಸ.
ಪ್ರತಿ ಸಂಕ್ರಾಂತಿಗೂ ಒಂದು ಪುಣ್ಯ ಕಾಲ ಇದೆ; ಪ್ರವೇಶದ ಕ್ಷಣದ ಸುತ್ತಲಿನ ಆ ಅವಧಿಯಲ್ಲಿಯೇ ಸ್ನಾನ ಮತ್ತು ದಾನ. ಸಂಕ್ರಾಂತಿ ರಾತ್ರಿ ಬಿದ್ದರೆ ಪುಣ್ಯ ಕಾಲವನ್ನು ಪಕ್ಕದ ಹಗಲಿಗೆ ಸರಿಸುತ್ತಾರೆ. ಇದನ್ನು ತಿಳಿದಿರುವುದು ಒಳ್ಳೆಯದು; ಸೂರ್ಯ ರಾಶಿ ಬದಲಿಸಿದ ಮರುದಿನ ಹಬ್ಬ ಆಚರಿಸುವುದಕ್ಕೆ ಇದೇ ಕಾರಣ.
A sankranti is the moment the sun crosses from one rashi into the next. There are twelve signs, so twelve sankrantis in a year, and together they make the solar calendar that runs alongside the lunar one.
Why these do not move and everything else does
Almost every festival in this calendar is fixed to a tithi, a lunar quantity, and the lunar year is about eleven days shorter than the solar one. That is why Ugadi, Deepavali and Shivaratri fall on a different Gregorian date every year, sliding back and then jumping forward when an intercalary month is inserted.
A sankranti has nothing to do with the moon. It is an event in the sun’s own motion, and the Gregorian calendar is also solar, so the two keep step. Makara Sankranti therefore falls on virtually the same Gregorian date year after year, varying by no more than a day. Anyone who has noticed that one Hindu festival seems fixed while the rest wander has noticed something real.
The ayanamsa, and why Makara is in January
Makara Sankranti is called the beginning of uttarayana, the sun turning north. Astronomically the sun turns north at the winter solstice, in late December, not in the middle of January. The gap has a cause.
Indian astronomy uses the nirayana or sidereal zodiac, measured from a fixed point among the stars. Western astronomy uses the tropical zodiac, measured from the equinox, and the equinox is not fixed: it moves backwards through the stars a degree in about seventy-two years, which is precession. The two zodiacs coincided roughly seventeen centuries ago, and then the sun did enter sidereal Makara at the solstice. They have drifted apart since by about twenty-four degrees. That accumulated difference is the ayanamsa, and it is why the sidereal Makara entry now lags the solstice by some twenty-four days.
It also means the date creeps, by about a day a century. And because more than one value of the ayanamsa is in use, calculations can place the instant of entry a few hours apart, which in a borderline year puts the festival on different days in different almanacs. Anudina prints the instant itself.
Makara Sankranti in Karnataka
This is the harvest festival. The sugarcane is in, the groundnut is in, and the day is given to sharing what has come out of the ground. Households prepare ellu bella: white sesame, jaggery cut small, dry copra, roasted groundnut and fried gram, carried house to house with sugar moulded into figures, sakkare acchu, and lengths of sugarcane. What is said with it is a request as much as a greeting: eat the sesame and the jaggery and speak well.
The cattle have their own day: washed, their horns painted, and in villages across southern Karnataka driven over a line of fire, the kichchu haisodu.
The same sankranti is Pongal in Tamil Nadu, with the boiling over of the new rice; Magh Bihu in Assam; Maghi in Punjab; and the kites of Uttarayan in Gujarat. All are the same solar moment.
The other sankrantis
Three more carry weight. Mesha Sankranti is the solar new year, kept as Vishu in Kerala, Puthandu in Tamil Nadu and Baisakhi in Punjab, and it is why the southern and eastern new years fall on nearly a fixed date while Ugadi moves. Karka Sankranti begins dakshinayana and opens the Karkidaka month of Kerala in which the Ramayana is read. Tula Sankranti is the Tula Sankramana at Talakaveri in Kodagu, when the spring rises at the appointed instant and the Kaveri is held to be born.
Every sankranti carries a punya kala, a window around the instant of entry within which bathing and dana are done. When the sankranti falls at night the punya kala moves to the adjoining daylight, which is why a festival can be kept on the day after the sun actually changed sign.
