ಅಂಗಿ ಹರಿದರೆ ನಾನು ಹರಿದುಹೋದೆ ಎಂದು ಯಾರೂ ಅಳುವುದಿಲ್ಲ. ಹಳೆಯದಾಯಿತು ಎಂದು ತೆಗೆದಿಟ್ಟು ಬೇರೊಂದನ್ನು ಹಾಕಿಕೊಳ್ಳುತ್ತೇವೆ.
ಗೀತೆಯ ಎರಡನೇ ಅಧ್ಯಾಯದಲ್ಲಿ ಕೃಷ್ಣ ಅರ್ಜುನನಿಗೆ ಹೇಳುವುದೂ ಇದನ್ನೇ.
ಸಂದರ್ಭವನ್ನು ಒಮ್ಮೆ ನೆನಪಿಸಿಕೊಳ್ಳಿ. ಕುರುಕ್ಷೇತ್ರ, ಎರಡೂ ಕಡೆ ಸೈನ್ಯ ನಿಂತಿದೆ, ಶಂಖನಾದ ಮೊಳಗಿದೆ. ಅರ್ಜುನ ಮಾತ್ರ ಸ್ತಬ್ಧನಾಗಿ ನಿಂತಿದ್ದಾನೆ. ಕೈಕಾಲು ಸೋಲುತ್ತಿವೆ, ಅದಕ್ಕೂ ಮೊದಲೇ ಮನಸ್ಸು ಸೋತಿದೆ. ಎದುರಿಗಿರುವವರ ಸಾವನ್ನು ಕಲ್ಪಿಸಿಕೊಂಡೇ ಆತನ ಕೈಯಿಂದ ಬಿಲ್ಲು ಜಾರುತ್ತಿದೆ.
ಆತ್ಮದ ನಿತ್ಯತೆಯ ಬಗ್ಗೆ ಹೇಳುತ್ತಿರುವಾಗಲೇ ಕೃಷ್ಣ ಆ ತತ್ವವನ್ನು ಎಲ್ಲರಿಗೂ ಅರ್ಥವಾಗುವ ಬಟ್ಟೆಯ ಉದಾಹರಣೆಗೆ ಇಳಿಸಿದ.
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಽಪರಾಣಿ । ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ॥
ಮನುಷ್ಯ ಹಳೆಯ ಬಟ್ಟೆಯನ್ನು ಬಿಟ್ಟು ಹೊಸದನ್ನು ಹಾಕಿಕೊಳ್ಳುವ ಹಾಗೆಯೇ, ದೇಹೀ ಜೀರ್ಣವಾದ ಶರೀರವನ್ನು ಬಿಟ್ಟು ಬೇರೊಂದನ್ನು ಸೇರುತ್ತಾನೆ.
ದೇಹ ಮತ್ತು ದೇಹೀ
ಶ್ಲೋಕದಲ್ಲಿ ಗಮನಿಸದೆ ದಾಟಿ ಹೋಗಬಾರದ ಒಂದು ಪದ ಇದೆ: ದೇಹೀ.
ದೇಹ ಎಂದರೆ ಮನೆ. ದೇಹೀ ಎಂದರೆ ಆ ಮನೆಯಲ್ಲಿ ವಾಸಿಸುವವನು. ಬರವಣಿಗೆಯಲ್ಲಿ ಈ ಎರಡು ಪದಗಳ ನಡುವೆ ಇರುವುದು ಒಂದು ಸಣ್ಣ ದೀರ್ಘ ಮಾತ್ರ. ಆದರೆ ಅರ್ಥದಲ್ಲಿ ಇಡೀ ಬದುಕಿನಷ್ಟು ಅಂತರವಿದೆ.
ಮನೆ ಹಳೆಯದಾಗುತ್ತದೆ, ಗೋಡೆ ಬಿರುಕು ಬಿಡುತ್ತದೆ, ಛಾವಣಿ ಸೋರುತ್ತದೆ. ಅದನ್ನು ನೋಡಿ ಮನೆಯಲ್ಲಿದ್ದವನೂ ಬಿರುಕು ಬಿಟ್ಟ ಎಂದು ಯಾರೂ ಹೇಳುವುದಿಲ್ಲ.
ಬಟ್ಟೆ ಹೊಲಿಯುವ ಕೆಲಸ
ವೈದ್ಯನಾಗಿ ನಾನು ಮಾಡುತ್ತಿರುವುದೇನು ಎಂದು ಕೇಳಿದರೆ, ಈ ಶ್ಲೋಕದ ಭಾಷೆಯಲ್ಲಿ ಉತ್ತರ ಸುಲಭ. ಬಟ್ಟೆಯನ್ನು ಹೊಲಿಯುವ ಕೆಲಸ.
ದಿನವಿಡೀ ದೇಹಗಳ ಜೊತೆ ಕೆಲಸ. ರೋಗ ಪತ್ತೆ, ಔಷಧ, ರಕ್ತದೊತ್ತಡ, ಸಕ್ಕರೆ, ಗಾಯ, ಹೊಲಿಗೆ. ಬಟ್ಟೆಯನ್ನು ಸಾಧ್ಯವಾದಷ್ಟು ಜಾಗ್ರತೆಯಿಂದ, ಸಾಧ್ಯವಾದಷ್ಟು ಕಾಲ ಬಾಳಿಕೆ ಬರುವಂತೆ ಇಟ್ಟುಕೊಳ್ಳುವುದು.
ಆದರೆ ಒಳಗಿದ್ದವನು ಯಾವ ವರದಿಯಲ್ಲೂ ಕಾಣುವುದಿಲ್ಲ. ಇಸಿಜಿಯಲ್ಲಿ ಇಲ್ಲ. ಸಿಟಿ ಸ್ಕ್ಯಾನಿನಲ್ಲಿ ಇಲ್ಲ. ರಕ್ತ ಪರೀಕ್ಷೆಯ ಯಾವ ಸಾಲಿನಲ್ಲೂ ಇಲ್ಲ.
ಇದರಿಂದ ನನ್ನ ಕೆಲಸ ಇನ್ನಷ್ಟು ದೊಡ್ಡದಾಗುತ್ತದೆ. ಏಕೆಂದರೆ ನಾನು ನೋಡಿಕೊಳ್ಳುತ್ತಿರುವುದು ಬರೀ ಮಾಂಸ ಮತ್ತು ಮೂಳೆಯನ್ನಲ್ಲ, ಯಾರೋ ಒಬ್ಬರು ತಾತ್ಕಾಲಿಕವಾಗಿ ಇಳಿದುಕೊಂಡಿರುವ ಮನೆಯನ್ನು.
ಆದರೆ ಈ ಶ್ಲೋಕವನ್ನು ಯಾವಾಗ ಹೇಳಬಾರದು
ಇಲ್ಲಿ ಒಂದು ಎಚ್ಚರ ಬೇಕು. ಈ ಶ್ಲೋಕ ಸಾಂತ್ವನಕ್ಕೆಂದು ಹುಟ್ಟಿದ್ದು ನಿಜ. ಆದರೆ ಅದನ್ನು ಹೇಳುವ ಸಮಯ ಸರಿಯಿಲ್ಲದಿದ್ದರೆ ಅದು ಸಾಂತ್ವನವಾಗುವುದಿಲ್ಲ.
ತಾಯಿ ತೀರಿಕೊಂಡ ಒಂದು ಗಂಟೆಯಲ್ಲೇ ಮಗನ ಪಕ್ಕದಲ್ಲಿ ನಿಂತು ಬಟ್ಟೆ ಬದಲಾಯಿತು ಅಷ್ಟೇ ಎಂದು ಹೇಳುವುದರಿಂದ ಸಮಾಧಾನ ಸಿಗುವುದಿಲ್ಲ. ಅದು ಆತನ ದುಃಖಕ್ಕೆ ಬಾಗಿಲು ಹಾಕಿದಂತಾಗುತ್ತದೆ.
ದುಃಖಕ್ಕೆ ಅದರದೇ ಕಾಲ ಬೇಕು. ಕೃಷ್ಣ ಕೂಡ ಈ ಮಾತನ್ನು ಅರ್ಜುನ ಅತ್ತು ಮುಗಿಸಿದ ಮೇಲೆಯೇ ಹೇಳಿದ್ದು.
ಕೊನೆಗೆ
ಹರಿದ ಅಂಗಿಯನ್ನು ನಾವು ಬಿಸಾಡುತ್ತೇವೆ. ಆದರೆ ಹೋದವರ ಪೆಟ್ಟಿಗೆಯಲ್ಲಿದ್ದ ಸೀರೆಯನ್ನು, ಶಲ್ಯವನ್ನು, ಕನ್ನಡಕವನ್ನು ಯಾವ ಮನೆಯಲ್ಲೂ ಯಾರೂ ಬೇಗ ಬಿಸಾಡುವುದಿಲ್ಲ. ವರ್ಷಗಳ ನಂತರವೂ ಅವು ಅಲ್ಲೇ ಇರುತ್ತವೆ.
ಹೋದವರಿಗೆ ಅದು ಬರೀ ಬಟ್ಟೆ. ಉಳಿದವರಿಗೆ ಅದು ಬರೀ ಬಟ್ಟೆಯಲ್ಲ.
ಕೃಷ್ಣನ ಮಾತು ಸಾಯುವವರಿಗಾಗಿ. ಉಳಿಯುವವರಿಗಾಗಿ ಬೇರೊಂದು ಮಾತು ಬೇಕು. ಹೆಚ್ಚಿನ ಸಲ ಅದು ಮೌನ.
ಇಂಗ್ಲಿಷ್ ಆವೃತ್ತಿ
There’s a moment in the Bhagavad Gita that stops me every time I read it.
It’s in the second chapter, right there on the battlefield of Kurukshetra… the two armies drawn up and waiting. Arjuna is paralysed. His limbs give way, but it is his mind that has collapsed first. He’s staring at his kinsmen across the field, and the thought of their death terrifies him to the point where he can’t move.
Krishna sees this. And what does he do? He offers one of the most comforting metaphors in all of spiritual literature. He talks about changing clothes.
That’s it. Changing clothes.
The Verse
Bhagavad Gita, shloka 2.22. I’ll give it to you in multiple scripts because the sound of it matters.
In Kannada:
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಽಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾ-
ನ್ಯನ್ಯಾನಿ ಸಂಯಾತಿ ನವಾನಿ ದೇಹೀ ॥ 2.22 ॥
In Devanagari:
वासांसि जीर्णानि यथा विहाय
नवानि गृह्णाति नरोऽपराणि ।
तथा शरीराणि विहाय जीर्णा-
न्यन्यानि संयाति नवानि देही ॥ 2.22 ॥
In English IAST Format:
vāsāṃsi jīrṇāni yathā vihāya
navāni gṛhṇāti naro’parāṇi |
tathā śarīrāṇi vihāya jīrṇā-
nyanyāni saṃyāti navāni dehī || 2.22 ||
Breaking It Down Word by Word
I find that Sanskrit rewards patience. Each word carries weight. Let’s take this in detail:
ವಾಸಾಂಸಿ (vāsāṃsi): clothes, garments
ಜೀರ್ಣಾನಿ (jīrṇāni): worn out, old, torn
ಯಥಾ (yathā): just as
ವಿಹಾಯ (vihāya): casting off, discarding, letting go
ನವಾನಿ (navāni): new
ಗೃಹ್ಣಾತಿ (gṛhṇāti): accepts, takes, puts on
ನರಃ (naraḥ): a person, a human being
ಅಪರಾಣಿ (aparāṇi): others, different ones
ತಥಾ (tathā): in the same way, similarly
ಶರೀರಾಣಿ (śarīrāṇi): bodies
ವಿಹಾಯ (vihāya): casting off
ಜೀರ್ಣಾನಿ (jīrṇāni): worn out
ಅನ್ಯಾನಿ (anyāni): others
ಸಂಯಾತಿ (saṃyāti): enters into, takes on
ನವಾನಿ (navāni): new
ದೇಹೀ (dehī): the embodied soul, the dweller in the body
What It Actually Means
In Kannada:
ಹೇಗೆ ಒಬ್ಬ ಮನುಷ್ಯನು ಹಳೆಯದಾದ ಮತ್ತು ಹರಿದುಹೋದ ಬಟ್ಟೆಗಳನ್ನು ತ್ಯಜಿಸಿ ಹೊಸ ಬಟ್ಟೆಗಳನ್ನು ಧರಿಸುತ್ತಾನೋ, ಹಾಗೆಯೇ ದೇಹಧಾರಿಯಾದ ಈ ಆತ್ಮನು ಜೀರ್ಣವಾದ ಹಳೆಯ ದೇಹಗಳನ್ನು ತ್ಯಜಿಸಿ, ಹೊಸದಾದ ಬೇರೆ ದೇಹಗಳನ್ನು ಪಡೆಯುತ್ತಾನೆ.
In English:
Just as you discard worn-out clothes and put on new ones, the soul casts off worn-out bodies and enters into new ones.
That’s it. A simple image with a deep meaning.
Why This Matters
Here’s what Krishna is addressing: the core human fear. The fear of death. The terror that death means the end of everything.
He’s telling Arjuna… and us… that the Dehi (the dweller, the soul) is different from the Deha (the body, the dwelling place).
Think about it. When your shirt tears, you don’t cry “I am torn.” You don’t identify with the shirt. You just recognize the covering isn’t useful anymore, and you replace it. Krishna is saying that death works the same way. It’s simply a change of external covering for the eternal soul.
For me, as a physician, this perspective is grounding.
I spend my days treating bodies. That’s what I do. I diagnose diseases, prescribe medications, monitor vital signs. I care for the “garment” with everything I have: the utmost skill, the best evidence, and genuine concern.
But this verse reminds me there’s something else. Something that doesn’t show up on an ECG or a CT scan. The essence of the life within is indestructible. Eternal.
If anything, that makes my work more meaningful. I’m caring for the temporary home of something timeless.

