ಅನ್ನಪೂರ್ಣಾ ಸ್ತೋತ್ರ ಕಾಶಿಯ ಅಧಿದೇವತೆ ಅನ್ನಪೂರ್ಣೇಶ್ವರಿಯ ಸ್ತುತಿ. ಹತ್ತು ಶ್ಲೋಕಗಳೂ “ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ” ಎಂಬ ಬೇಡಿಕೆಯಲ್ಲಿ ಮುಗಿಯುತ್ತವೆ. ದೇವಿಯ ರೂಪ, ಆಭರಣ, ಶಕ್ತಿ ಮತ್ತು ಕರುಣೆಯನ್ನು ವರ್ಣಿಸುತ್ತ ಭಕ್ತನು ಅವಳ ಮುಂದೆ ಭಿಕ್ಷುಕನಾಗಿ ನಿಲ್ಲುತ್ತಾನೆ.
The Annapurna Stotra praises Annapurneshvari, the presiding goddess of Kashi. All ten long verses close with the plea “Mother Annapurneshvari, who gives the support of your grace, give me alms”. Describing her form, her ornaments, her power and her compassion, the devotee stands before her as a mendicant.
ಕೊನೆಯ ಎರಡು ಚಿಕ್ಕ ಶ್ಲೋಕಗಳು ಬಹಳ ಪ್ರಸಿದ್ಧ. “ಅನ್ನಪೂರ್ಣೇ ಸದಾಪೂರ್ಣೇ” ಎಂಬ ಶ್ಲೋಕವನ್ನು ಹಲವು ಮನೆಗಳಲ್ಲಿ ಊಟಕ್ಕೆ ಮೊದಲು ಹೇಳುತ್ತಾರೆ. ಪ್ರತಿ ಶ್ಲೋಕದ ಕನ್ನಡ ಮತ್ತು ಇಂಗ್ಲಿಷ್ ಅರ್ಥವನ್ನು ಕೆಳಗೆ ಕೊಟ್ಟಿದ್ದೇವೆ.
The two short verses at the end are especially well known. Many households say the verse “Annapurne sadapurne” before a meal. We give the meaning of each verse in Kannada and English below.
ಪಾಠ (ಕನ್ನಡ)
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯರತ್ನಾಕರೀ
ನಿರ್ಧೂತಾಖಿಲದೋಷಪಾವನಕರೀ ಪ್ರತ್ಯಕ್ಷಮಾಹೇಶ್ವರೀ ।
ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 1 ॥
ನಾನಾರತ್ನವಿಚಿತ್ರಭೂಷಣಕರೀ ಹೇಮಾಂಬರಾಡಂಬರೀ
ಮುಕ್ತಾಹಾರವಿಡಂಬಮಾನವಿಲಸದ್ವಕ್ಷೋಜಕುಂಭಾಂತರೀ ।
ಕಾಶ್ಮೀರಾಗರುವಾಸಿತಾಂಗರುಚಿರಾ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 2 ॥
ಯೋಗಾನಂದಕರೀ ರಿಪುಕ್ಷಯಕರೀ ಧರ್ಮೈಕನಿಷ್ಠಾಕರೀ
ಚಂದ್ರಾರ್ಕಾನಲಭಾಸಮಾನಲಹರೀ ತ್ರೈಲೋಕ್ಯರಕ್ಷಾಕರೀ ।
ಸರ್ವೈಶ್ವರ್ಯಕರೀ ತಪಃಫಲಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 3 ॥
ಕೈಲಾಸಾಚಲಕಂದರಾಲಯಕರೀ ಗೌರೀ ಹ್ಯುಮಾಶಾಂಕರೀ
ಕೌಮಾರೀ ನಿಗಮಾರ್ಥಗೋಚರಕರೀ ಹ್ಯೋಂಕಾರಬೀಜಾಕ್ಷರೀ ।
ಮೋಕ್ಷದ್ವಾರಕವಾಟಪಾಟನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 4 ॥
ದೃಶ್ಯಾದೃಶ್ಯವಿಭೂತಿವಾಹನಕರೀ ಬ್ರಹ್ಮಾಂಡಭಾಂಡೋದರೀ
ಲೀಲಾನಾಟಕಸೂತ್ರಖೇಲನಕರೀ ವಿಜ್ಞಾನದೀಪಾಂಕುರೀ ।
ಶ್ರೀವಿಶ್ವೇಶಮನಃಪ್ರಸಾದನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 5 ॥
ಆದಿಕ್ಷಾಂತಸಮಸ್ತವರ್ಣನಕರೀ ಶಂಭುಪ್ರಿಯಾ ಶಾಂಕರೀ
ಕಾಶ್ಮೀರತ್ರಿಪುರೇಶ್ವರೀ ತ್ರಿನಯನೀ ವಿಶ್ವೇಶ್ವರೀ ಶರ್ವರೀ ।
ಸ್ವರ್ಗದ್ವಾರಕವಾಟಪಾಟನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 6 ॥
ಉರ್ವೀಸರ್ವಜನೇಶ್ವರೀ ಜಯಕರೀ ಮಾತಾ ಕೃಪಾಸಾಗರೀ
ನಾರೀನೀಲಸಮಾನಕುಂತಲಧರೀ ನಿತ್ಯಾನ್ನದಾನೇಶ್ವರೀ ।
ಸಾಕ್ಷಾನ್ಮೋಕ್ಷಕರೀ ಸದಾ ಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 7 ॥
ದೇವೀ ಸರ್ವವಿಚಿತ್ರರತ್ನರಚಿತಾ ದಾಕ್ಷಾಯಣೀ ಸುಂದರೀ
ವಾಮಾ ಸ್ವಾದುಪಯೋಧರಾ ಪ್ರಿಯಕರೀ ಸೌಭಾಗ್ಯಮಾಹೇಶ್ವರೀ ।
ಭಕ್ತಾಭೀಷ್ಟಕರೀ ಸದಾ ಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 8 ॥
ಚಂದ್ರಾರ್ಕಾನಲಕೋಟಿಕೋಟಿಸದೃಶೀ ಚಂದ್ರಾಂಶುಬಿಂಬಾಧರೀ
ಚಂದ್ರಾರ್ಕಾಗ್ನಿಸಮಾನಕುಂಡಲಧರೀ ಚಂದ್ರಾರ್ಕವರ್ಣೇಶ್ವರೀ ।
ಮಾಲಾಪುಸ್ತಕಪಾಶಸಾಂಕುಶಧರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 9 ॥
ಕ್ಷತ್ರತ್ರಾಣಕರೀ ಮಹಾಭಯಹರೀ ಮಾತಾ ಕೃಪಾಸಾಗರೀ
ಸರ್ವಾನಂದಕರೀ ಸದಾ ಶಿವಕರೀ ವಿಶ್ವೇಶ್ವರೀ ಶ್ರೀಧರೀ ।
ದಕ್ಷಾಕ್ರಂದಕರೀ ನಿರಾಮಯಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 10 ॥
ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ ।
ಜ್ಞಾನವೈರಾಗ್ಯಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ ॥ 11 ॥
ಮಾತಾ ಚ ಪಾರ್ವತೀ ದೇವೀ ಪಿತಾ ದೇವೋ ಮಹೇಶ್ವರಃ ।
ಬಾಂಧವಾಃ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್ ॥ 12 ॥
ದೇವನಾಗರಿ ಲಿಪಿಯಲ್ಲಿ ಪಾಠText in Devanagari
नित्यानंदकरी वराभयकरी सौंदर्यरत्नाकरी
निर्धूताखिलदोषपावनकरी प्रत्यक्षमाहेश्वरी ।
प्रालेयाचलवंशपावनकरी काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 1 ॥
नानारत्नविचित्रभूषणकरी हेमांबराडंबरी
मुक्ताहारविडंबमानविलसद्वक्षोजकुंभांतरी ।
काश्मीरागरुवासितांगरुचिरा काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 2 ॥
योगानंदकरी रिपुक्षयकरी धर्मैकनिष्ठाकरी
चंद्रार्कानलभासमानलहरी त्रैलोक्यरक्षाकरी ।
सर्वैश्वर्यकरी तपःफलकरी काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 3 ॥
कैलासाचलकंदरालयकरी गौरी ह्युमाशांकरी
कौमारी निगमार्थगोचरकरी ह्योंकारबीजाक्षरी ।
मोक्षद्वारकवाटपाटनकरी काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 4 ॥
दृश्यादृश्यविभूतिवाहनकरी ब्रह्मांडभांडोदरी
लीलानाटकसूत्रखेलनकरी विज्ञानदीपांकुरी ।
श्रीविश्वेशमनःप्रसादनकरी काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 5 ॥
आदिक्षांतसमस्तवर्णनकरी शंभुप्रिया शांकरी
काश्मीरत्रिपुरेश्वरी त्रिनयनी विश्वेश्वरी शर्वरी ।
स्वर्गद्वारकवाटपाटनकरी काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 6 ॥
उर्वीसर्वजनेश्वरी जयकरी माता कृपासागरी
नारीनीलसमानकुंतलधरी नित्यान्नदानेश्वरी ।
साक्षान्मोक्षकरी सदा शुभकरी काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 7 ॥
देवी सर्वविचित्ररत्नरचिता दाक्षायणी सुंदरी
वामा स्वादुपयोधरा प्रियकरी सौभाग्यमाहेश्वरी ।
भक्ताभीष्टकरी सदा शुभकरी काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 8 ॥
चंद्रार्कानलकोटिकोटिसदृशी चंद्रांशुबिंबाधरी
चंद्रार्काग्निसमानकुंडलधरी चंद्रार्कवर्णेश्वरी ।
मालापुस्तकपाशसांकुशधरी काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 9 ॥
क्षत्रत्राणकरी महाभयहरी माता कृपासागरी
सर्वानंदकरी सदा शिवकरी विश्वेश्वरी श्रीधरी ।
दक्षाक्रंदकरी निरामयकरी काशीपुराधीश्वरी
भिक्षां देहि कृपावलंबनकरी मातान्नपूर्णेश्वरी ॥ 10 ॥
अन्नपूर्णे सदापूर्णे शंकरप्राणवल्लभे ।
ज्ञानवैराग्यसिद्ध्यर्थं भिक्षां देहि च पार्वति ॥ 11 ॥
माता च पार्वती देवी पिता देवो महेश्वरः ।
बांधवाः शिवभक्ताश्च स्वदेशो भुवनत्रयम् ॥ 12 ॥
IAST ಲಿಪ್ಯಂತರದಲ್ಲಿ ಪಾಠText in IAST transliteration
nityānaṃdakarī varābhayakarī sauṃdaryaratnākarī
nirdhūtākhiladoṣapāvanakarī pratyakṣamāheśvarī |
prāleyācalavaṃśapāvanakarī kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 1 ||
nānāratnavicitrabhūṣaṇakarī hemāṃbarāḍaṃbarī
muktāhāraviḍaṃbamānavilasadvakṣojakuṃbhāṃtarī |
kāśmīrāgaruvāsitāṃgarucirā kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 2 ||
yogānaṃdakarī ripukṣayakarī dharmaikaniṣṭhākarī
caṃdrārkānalabhāsamānalaharī trailokyarakṣākarī |
sarvaiśvaryakarī tapaḥphalakarī kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 3 ||
kailāsācalakaṃdarālayakarī gaurī hyumāśāṃkarī
kaumārī nigamārthagocarakarī hyoṃkārabījākṣarī |
mokṣadvārakavāṭapāṭanakarī kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 4 ||
dṛśyādṛśyavibhūtivāhanakarī brahmāṃḍabhāṃḍodarī
līlānāṭakasūtrakhelanakarī vijñānadīpāṃkurī |
śrīviśveśamanaḥprasādanakarī kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 5 ||
ādikṣāṃtasamastavarṇanakarī śaṃbhupriyā śāṃkarī
kāśmīratripureśvarī trinayanī viśveśvarī śarvarī |
svargadvārakavāṭapāṭanakarī kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 6 ||
urvīsarvajaneśvarī jayakarī mātā kṛpāsāgarī
nārīnīlasamānakuṃtaladharī nityānnadāneśvarī |
sākṣānmokṣakarī sadā śubhakarī kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 7 ||
devī sarvavicitraratnaracitā dākṣāyaṇī suṃdarī
vāmā svādupayodharā priyakarī saubhāgyamāheśvarī |
bhaktābhīṣṭakarī sadā śubhakarī kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 8 ||
caṃdrārkānalakoṭikoṭisadṛśī caṃdrāṃśubiṃbādharī
caṃdrārkāgnisamānakuṃḍaladharī caṃdrārkavarṇeśvarī |
mālāpustakapāśasāṃkuśadharī kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 9 ||
kṣatratrāṇakarī mahābhayaharī mātā kṛpāsāgarī
sarvānaṃdakarī sadā śivakarī viśveśvarī śrīdharī |
dakṣākraṃdakarī nirāmayakarī kāśīpurādhīśvarī
bhikṣāṃ dehi kṛpāvalaṃbanakarī mātānnapūrṇeśvarī || 10 ||
annapūrṇe sadāpūrṇe śaṃkaraprāṇavallabhe |
jñānavairāgyasiddhyarthaṃ bhikṣāṃ dehi ca pārvati || 11 ||
mātā ca pārvatī devī pitā devo maheśvaraḥ |
bāṃdhavāḥ śivabhaktāśca svadeśo bhuvanatrayam || 12 ||
ಶ್ಲೋಕಗಳ ಅರ್ಥ
- 1 ನಿತ್ಯಾನಂದವನ್ನು ಕೊಡುವವಳು, ವರ ಮತ್ತು ಅಭಯದ ಮುದ್ರೆ ಹಿಡಿದವಳು, ಸೌಂದರ್ಯದ ರತ್ನಾಕರ. ಎಲ್ಲ ದೋಷಗಳನ್ನು ತೊಳೆದು ಪಾವನಗೊಳಿಸುವವಳು, ಕಣ್ಣಿಗೆ ಕಾಣುವ ಮಹೇಶ್ವರಿ, ಹಿಮವಂತನ ವಂಶವನ್ನು ಪವಿತ್ರಗೊಳಿಸಿದವಳು, ಕಾಶೀಪುರದ ಒಡತಿ. ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
She gives unending joy, her hands grant boons and fearlessness, she is an ocean of beauty. She washes away every fault and makes pure, Maheshvari made manifest, who sanctified the line of the snow mountain, sovereign of Kashi. Mother Annapurneshvari, who gives the support of your grace, give me alms. - 2 ಬಗೆಬಗೆಯ ರತ್ನಗಳ ಸುಂದರ ಆಭರಣ ತೊಟ್ಟವಳು, ಚಿನ್ನದ ವಸ್ತ್ರದಿಂದ ಶೋಭಿಸುವವಳು, ಮುತ್ತಿನ ಹಾರಗಳು ತೂಗಾಡುವ ವಕ್ಷಸ್ಥಳದವಳು. ಕೇಸರಿ ಮತ್ತು ಅಗರುವಿನ ಪರಿಮಳದಿಂದ ದೇಹ ಕಂಗೊಳಿಸುವ ಕಾಶೀಪುರದ ಒಡತಿ. ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
She wears lovely ornaments of many gems and shines in golden garments, pearl necklaces swaying upon her breast. Her body glows, fragrant with saffron and aloewood, sovereign of Kashi. Mother Annapurneshvari, who gives the support of your grace, give me alms. - 3 ಯೋಗಾನಂದವನ್ನು ಕೊಡುವವಳು, ಶತ್ರುಗಳನ್ನು ನಾಶಮಾಡುವವಳು, ಧರ್ಮದಲ್ಲಿ ಏಕನಿಷ್ಠೆ ಹುಟ್ಟಿಸುವವಳು. ಚಂದ್ರ, ಸೂರ್ಯ, ಅಗ್ನಿಗಳಂತೆ ಬೆಳಗುವ ಕಾಂತಿಯ ಅಲೆಗಳುಳ್ಳವಳು, ಮೂರು ಲೋಕಗಳನ್ನು ರಕ್ಷಿಸುವವಳು. ಎಲ್ಲ ಐಶ್ವರ್ಯವನ್ನೂ ತಪಸ್ಸಿನ ಫಲವನ್ನೂ ಕೊಡುವ ಕಾಶೀಪುರದ ಒಡತಿ, ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
She gives the bliss of yoga, destroys enemies and makes one single-minded in dharma. Waves of radiance flow from her like moon, sun and fire, and she protects the three worlds. Sovereign of Kashi, who grants all prosperity and the fruit of austerity, Mother Annapurneshvari, who gives the support of your grace, give me alms. - 4 ಕೈಲಾಸ ಪರ್ವತದ ಗುಹೆಯಲ್ಲಿ ನೆಲೆಸಿರುವವಳು, ಗೌರಿ, ಉಮೆ, ಶಂಕರನ ಪತ್ನಿ. ಕೌಮಾರಿ, ವೇದಗಳ ಅರ್ಥವನ್ನು ತಿಳಿಯುವಂತೆ ಮಾಡುವವಳು, ಓಂಕಾರವೇ ಬೀಜಾಕ್ಷರವಾಗಿರುವವಳು. ಮೋಕ್ಷದ ಬಾಗಿಲಿನ ಕದವನ್ನು ತೆರೆಯುವ ಕಾಶೀಪುರದ ಒಡತಿ, ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
She dwells in the caves of Mount Kailasa, Gauri, Uma, the consort of Shankara. She is Kaumari, who makes the meaning of the Vedas known, whose seed syllable is Om. Sovereign of Kashi, who throws open the doors of liberation, Mother Annapurneshvari, who gives the support of your grace, give me alms. - 5 ಕಾಣುವ ಮತ್ತು ಕಾಣದ ವೈಭವಗಳನ್ನು ಹೊತ್ತವಳು, ಬ್ರಹ್ಮಾಂಡವನ್ನೇ ಪಾತ್ರೆಯಂತೆ ಒಡಲಲ್ಲಿ ಇಟ್ಟುಕೊಂಡವಳು. ಲೀಲೆಯೆಂಬ ನಾಟಕದ ಸೂತ್ರವನ್ನು ಹಿಡಿದು ಆಡಿಸುವವಳು, ಜ್ಞಾನದೀಪದ ಮೊಳಕೆ. ಕಾಶಿಯ ವಿಶ್ವೇಶ್ವರನ ಮನಸ್ಸನ್ನು ಸಂತೋಷಪಡಿಸುವ ಕಾಶೀಪುರದ ಒಡತಿ, ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
She bears powers seen and unseen and holds the cosmic egg within her like a vessel. She pulls the strings of the play of her lila, the first flame of the lamp of wisdom. Sovereign of Kashi, who delights the heart of Vishvesha, Mother Annapurneshvari, who gives the support of your grace, give me alms. - 6 ಅಕಾರದಿಂದ ಕ್ಷಕಾರದವರೆಗಿನ ಎಲ್ಲ ಅಕ್ಷರಗಳನ್ನು ಹೊರಹೊಮ್ಮಿಸುವವಳು, ಶಂಭುವಿನ ಪ್ರಿಯೆ, ಶಾಂಕರಿ. ಕಾಶ್ಮೀರದಲ್ಲಿ ಪೂಜಿತಳಾದ ತ್ರಿಪುರೇಶ್ವರಿ, ಮೂರು ಕಣ್ಣುಳ್ಳವಳು, ವಿಶ್ವೇಶ್ವರಿ, ಶರ್ವನ ಪತ್ನಿ ಶರ್ವರಿ. ಸ್ವರ್ಗದ ಬಾಗಿಲಿನ ಕದವನ್ನು ತೆರೆಯುವ ಕಾಶೀಪುರದ ಒಡತಿ, ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
She brings forth every letter from a to ksha, beloved of Shambhu, Shankari. She is Tripureshvari worshipped in Kashmir, the three-eyed one, Vishveshvari, Sharvari the consort of Sharva. Sovereign of Kashi, who throws open the doors of heaven, Mother Annapurneshvari, who gives the support of your grace, give me alms. - 7 ಭೂಮಿಗೂ ಎಲ್ಲ ಜನರಿಗೂ ಒಡತಿ, ಜಯವನ್ನು ಕೊಡುವವಳು, ಕರುಣೆಯ ಸಾಗರವಾದ ತಾಯಿ. ನೀಲಮಣಿಯಂತೆ ಕಪ್ಪಾದ ಕೇಶವುಳ್ಳ ಸ್ತ್ರೀರೂಪಿಣಿ, ನಿತ್ಯವೂ ಅನ್ನದಾನ ಮಾಡುವ ಒಡತಿ. ನೇರವಾಗಿ ಮೋಕ್ಷವನ್ನು ಕೊಡುವ, ಸದಾ ಮಂಗಳ ಮಾಡುವ ಕಾಶೀಪುರದ ಒಡತಿ, ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
Queen of the earth and of all its people, giver of victory, a mother who is an ocean of compassion. She has the form of a woman with hair dark as sapphire, and she presides over the unending gift of food. Sovereign of Kashi, who grants liberation directly and ever does good, Mother Annapurneshvari, who gives the support of your grace, give me alms. - 8 ಎಲ್ಲ ಬಗೆಯ ಅಪೂರ್ವ ರತ್ನಗಳಿಂದ ಅಲಂಕೃತಳಾದ ದೇವಿ, ದಕ್ಷನ ಮಗಳು ದಾಕ್ಷಾಯಣಿ, ಸುಂದರಿ. ಶಿವನ ಎಡಭಾಗದಲ್ಲಿರುವ ವಾಮೆ, ಸಿಹಿಯಾದ ಹಾಲು ತುಂಬಿದ ಸ್ತನಗಳುಳ್ಳ ತಾಯಿ, ಪ್ರಿಯವನ್ನು ಮಾಡುವವಳು, ಸೌಭಾಗ್ಯದ ಮಹೇಶ್ವರಿ. ಭಕ್ತರ ಇಷ್ಟಾರ್ಥವನ್ನು ಪೂರೈಸುವ, ಸದಾ ಮಂಗಳ ಮಾಡುವ ಕಾಶೀಪುರದ ಒಡತಿ, ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
The goddess adorned with every kind of rare gem, Dakshayani the daughter of Daksha, the beautiful one. She is Vama, at Shiva’s left side, a mother whose breasts are full of sweet milk, who does what is dear, the Maheshvari of good fortune. Sovereign of Kashi, who fulfils the wishes of devotees and ever does good, Mother Annapurneshvari, who gives the support of your grace, give me alms. - 9 ಕೋಟಿ ಕೋಟಿ ಚಂದ್ರ, ಸೂರ್ಯ, ಅಗ್ನಿಗಳಿಗೆ ಸಮಾನವಾದ ಕಾಂತಿಯವಳು, ತೊಂಡೆಹಣ್ಣಿನಂತೆ ಕೆಂಪಾಗಿ ಚಂದ್ರಕಿರಣದಂತೆ ಹೊಳೆಯುವ ತುಟಿಯವಳು. ಚಂದ್ರ, ಸೂರ್ಯ, ಅಗ್ನಿಗಳಂತೆ ಬೆಳಗುವ ಕುಂಡಲಗಳನ್ನು ಧರಿಸಿದವಳು, ಚಂದ್ರಸೂರ್ಯರ ಬಣ್ಣದ ಒಡತಿ. ಜಪಮಾಲೆ, ಪುಸ್ತಕ, ಪಾಶ, ಅಂಕುಶಗಳನ್ನು ಹಿಡಿದ ಕಾಶೀಪುರದ ಒಡತಿ, ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
Her splendour equals countless millions of moons, suns and fires, her lips are red as the bimba fruit and bright as moonbeams. She wears earrings that shine like moon, sun and fire, a sovereign with the hue of moon and sun. Sovereign of Kashi, holding rosary, book, noose and goad, Mother Annapurneshvari, who gives the support of your grace, give me alms. - 10 ಕ್ಷತ್ರಿಯರನ್ನು ಕಾಪಾಡುವವಳು, ಅಥವಾ ಆಪತ್ತಿನಿಂದ ರಕ್ಷಿಸುವವಳು, ಮಹಾಭಯವನ್ನು ಕಳೆಯುವವಳು, ಕರುಣೆಯ ಸಾಗರವಾದ ತಾಯಿ. ಎಲ್ಲರಿಗೂ ಆನಂದ ಕೊಡುವವಳು, ಸದಾ ಮಂಗಳ ಮಾಡುವವಳು, ವಿಶ್ವೇಶ್ವರಿ, ಶ್ರೀಯನ್ನು ಧರಿಸಿದವಳು. ದಕ್ಷನು ಗೋಳಿಡುವಂತೆ ಮಾಡಿದವಳು, ರೋಗವಿಲ್ಲದಂತೆ ಮಾಡುವ ಕಾಶೀಪುರದ ಒಡತಿ, ಕೃಪೆಯ ಆಸರೆ ಕೊಡುವ ತಾಯಿ ಅನ್ನಪೂರ್ಣೇಶ್ವರಿಯೇ, ನನಗೆ ಭಿಕ್ಷೆ ಕೊಡು.
She protects the kshatriyas, or shelters from harm, dispels great fear, a mother who is an ocean of compassion. She gives joy to all, ever does good, Vishveshvari, bearer of Shri. Sovereign of Kashi, who made Daksha wail and who frees from disease, Mother Annapurneshvari, who gives the support of your grace, give me alms. - 11 ಓ ಅನ್ನಪೂರ್ಣೆಯೇ, ಸದಾ ಪೂರ್ಣಳಾಗಿರುವವಳೇ, ಶಂಕರನಿಗೆ ಪ್ರಾಣದಷ್ಟು ಪ್ರಿಯಳೇ, ಓ ಪಾರ್ವತಿಯೇ, ಜ್ಞಾನ ಮತ್ತು ವೈರಾಗ್ಯಗಳು ಸಿದ್ಧಿಸಲೆಂದು ನನಗೆ ಭಿಕ್ಷೆ ಕೊಡು.
O Annapurna, ever full, beloved of Shankara as his own life, O Parvati, give me alms so that knowledge and detachment may ripen in me. - 12 ನನಗೆ ತಾಯಿ ಪಾರ್ವತೀದೇವಿ, ತಂದೆ ಮಹೇಶ್ವರ ದೇವರು. ಶಿವಭಕ್ತರೇ ನನ್ನ ಬಂಧುಗಳು, ಮೂರು ಲೋಕಗಳೂ ನನ್ನ ಸ್ವದೇಶ.
My mother is the goddess Parvati, my father the Lord Maheshvara. The devotees of Shiva are my kin, and the three worlds are my homeland.
ಈ ಸ್ತೋತ್ರದ ಬಗ್ಗೆAbout this hymn
ಈ ಸ್ತೋತ್ರವನ್ನು ಆದಿ ಶಂಕರಾಚಾರ್ಯರು ಕಾಶಿಯಲ್ಲಿ ರಚಿಸಿದರು ಎಂದು ಪರಂಪರೆ ಹೇಳುತ್ತದೆ. ಶಂಕರರ ಹೆಸರಿನಲ್ಲಿರುವ ಹಲವು ಸ್ತೋತ್ರಗಳಂತೆ ಇದರ ಕರ್ತೃತ್ವವನ್ನು ಇತಿಹಾಸದ ದೃಷ್ಟಿಯಿಂದ ಖಚಿತವಾಗಿ ಹೇಳಲು ಆಗುವುದಿಲ್ಲ.
Tradition holds that Adi Shankaracharya composed this hymn in Kashi. As with many hymns under his name, the authorship cannot be settled with historical certainty.
ಕಾಶಿಯಲ್ಲಿ ವಿಶ್ವನಾಥ ದೇವಾಲಯದ ಬಳಿಯೇ ಅನ್ನಪೂರ್ಣೆಯ ದೇವಾಲಯವಿದೆ. ಭಿಕ್ಷಾಟನ ರೂಪದ ಶಿವನೇ ಅನ್ನಪೂರ್ಣೆಯಿಂದ ಭಿಕ್ಷೆ ಪಡೆಯುತ್ತಾನೆ ಎಂಬ ಕಥೆ ಪ್ರಸಿದ್ಧ. ಅದೇ ಭಾವದಲ್ಲಿ ಭಕ್ತನೂ ಕೈ ಚಾಚಿ “ಭಿಕ್ಷಾಂ ದೇಹಿ” ಎನ್ನುತ್ತಾನೆ. ಆದರೆ ಹನ್ನೊಂದನೇ ಶ್ಲೋಕ ತಿಳಿಸುವಂತೆ ಅವನು ಕೊನೆಗೆ ಬೇಡುವುದು ಜ್ಞಾನ ಮತ್ತು ವೈರಾಗ್ಯದ ಸಿದ್ಧಿಗಾಗಿ.
In Kashi the Annapurna temple stands close to the Vishvanatha temple. A well known story tells of Shiva himself, as the mendicant Bhikshatana, receiving alms from Annapurna. In the same spirit the devotee holds out his hands and says “give me alms”. Yet, as verse 11 makes clear, what he finally begs for is the ripening of knowledge and detachment.
ಮೊದಲ ಹತ್ತು ಶ್ಲೋಕಗಳು ಶಾರ್ದೂಲವಿಕ್ರೀಡಿತ ಛಂದಸ್ಸಿನಲ್ಲಿವೆ. ಪ್ರತಿ ಶ್ಲೋಕದ ಮೂರನೇ ಸಾಲು “ಕಾಶೀಪುರಾಧೀಶ್ವರೀ” ಎಂದೂ ನಾಲ್ಕನೇ ಸಾಲು ಭಿಕ್ಷೆಯ ಬೇಡಿಕೆಯಾಗಿಯೂ ಮುಗಿಯುತ್ತವೆ. ಕೊನೆಯ ಎರಡು ಶ್ಲೋಕಗಳು ಅನುಷ್ಟುಭ್ ಛಂದಸ್ಸಿನಲ್ಲಿವೆ, ಇವನ್ನು ಬಿಡಿಯಾಗಿಯೂ ಪಠಿಸುತ್ತಾರೆ.
The first ten verses are in the Shardulavikridita metre. In each, the third line ends “Kashipuradhishvari” and the fourth is the plea for alms. The last two verses are in anushtubh and are often recited on their own.
ಪಾಠವನ್ನು stotranidhi ಆವೃತ್ತಿಯಿಂದ ತೆಗೆದುಕೊಂಡಿದ್ದೇವೆ. ಹನ್ನೊಂದನೇ ಶ್ಲೋಕ “ಅನ್ನಪೂರ್ಣೇ ಸದಾಪೂರ್ಣೇ” ಎಂಬ ಪ್ರಸಿದ್ಧ ಶ್ಲೋಕ. ಅದಕ್ಕೆ ನಮ್ಮ ತಾಣದಲ್ಲಿ ಬೇರೆಯೇ ಪುಟವೂ ಇದೆ.
We follow the stotranidhi text. Verse 11 is the well known verse “Annapurne sadapurne”, which also has a separate page of its own on our site.
ಆಧಾರ: ಹಲವು ಮೂಲಗಳು. ಆವೃತ್ತಿಗಳು ಭಿನ್ನವಾಗಿರುವಲ್ಲಿ ಅದನ್ನು ಇಲ್ಲಿ ಸೂಚಿಸಿದ್ದೇವೆ. · Sources: several. Where readings differ, the difference is noted here.
ಇಂದಿನ ಬದುಕಿಗೆFor life today
ಅಡುಗೆಮನೆಯಲ್ಲಿ ಒಂದು ತಟ್ಟೆ ಅನ್ನ ಬಡಿಸುವುದರ ಹಿಂದೆ ಹೊಲದ ರೈತ, ಸಾಗಿಸಿದವರು, ಬೇಯಿಸಿದವರು ಹೀಗೆ ಹಲವರ ದುಡಿಮೆ ಇದೆ. ಊಟಕ್ಕೆ ಮೊದಲು “ಅನ್ನಪೂರ್ಣೇ ಸದಾಪೂರ್ಣೇ” ಎಂದು ಹೇಳುವುದು ಆ ಋಣವನ್ನು ಒಂದು ಕ್ಷಣ ನೆನೆಯುವ ಅವಕಾಶ. ಹನ್ನೆರಡನೇ ಶ್ಲೋಕ ಹೇಳುವಂತೆ ಮೂರು ಲೋಕವೇ ಸ್ವದೇಶವಾದರೆ, ಹಸಿದವರೆಲ್ಲ ನಮ್ಮ ಬಂಧುಗಳೇ.
Behind a single plate of rice served in the kitchen lies the labour of many: the farmer in the field, those who carried it, those who cooked it. Saying “Annapurne sadapurne” before a meal is a moment to remember that debt. And if, as verse 12 says, the three worlds are our homeland, then everyone who is hungry is our kin.
ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.





ಪ್ರತಿಕ್ರಿಯೆ ಬರೆಯಿರಿ