ಶ್ರಿಯಃ ಪ್ರದುಗ್ಧೇ ವಿಪದೋ ರುಣದ್ಧಿ: ಶುದ್ಧ ಬುದ್ಧಿಯೇ ಕಾಮಧೇನು

ಶ್ರಿಯಃ ಪ್ರದುಗ್ಧೇ ವಿಪದೋ ರುಣದ್ಧಿ ಸುಭಾಷಿತ: ಶುದ್ಧವಾದ ಬುದ್ಧಿಯೇ ನಿಜವಾದ ಕಾಮಧೇನು. ಕನ್ನಡ, ದೇವನಾಗರಿ ಮತ್ತು English IAST ಪಾಠ, ಪದಶಃ ಅರ್ಥ ಮತ್ತು ವಿವರಣೆ.

ಶ್ರಿಯಃ ಪ್ರದುಗ್ಧೇ, ಸುಭಾಷಿತ ರತ್ನಗಳು, ಜೀವನ ಸೂತ್ರ

ಕಾಮಧೇನು ಎಂದರೆ ಬೇಡಿದ್ದನ್ನು ಕೊಡುವ ಹಸು. ಪುರಾಣದ ಚಿತ್ರ.

ಆ ಹಸು ಎಲ್ಲೋ ಸ್ವರ್ಗದಲ್ಲಿಲ್ಲ, ನಮ್ಮ ತಲೆಯೊಳಗೇ ಇದೆ ಎನ್ನುತ್ತದೆ ಈ ಶ್ಲೋಕ. ಅದು ಶುದ್ಧವಾದ ಬುದ್ಧಿ.

ಮೂಲ: ಸುಭಾಷಿತರತ್ನಭಾಂಡಾಗಾರ, ಸಾಮಾನ್ಯ ಪ್ರಕರಣ, ವಿದ್ಯಾಪ್ರಶಂಸಾ, ಶ್ಲೋಕ 12 · Subhashitaratnabhandagara, Samanya Prakarana, In Praise of Learning, verse 12

ವಿಷಯ: ಶುದ್ಧ ಬುದ್ಧಿಯ ಐದು ಕೆಲಸಗಳು · The five works of a clear intellect

ಛಂದಸ್ಸು: ಉಪಜಾತಿ · Upajati


ಸುಭಾಷಿತ (ಕನ್ನಡ)

ಶ್ರಿಯಃ ಪ್ರದುಗ್ಧೇ ವಿಪದೋ ರುಣದ್ಧಿ
ಯಶಾಂಸಿ ಸೂತೇ ಮಲಿನಂ ಪ್ರಮಾರ್ಷ್ಟಿ ।
ಸಂಸ್ಕಾರಶೌಚೇನ ಪರಂ ಪುನೀತೇ
ಶುದ್ಧಾ ಹಿ ಬುದ್ಧಿಃ ಕಿಲ ಕಾಮಧೇನುಃ ॥

ಸುಭಾಷಿತ (ದೇವನಾಗರಿ)

श्रियः प्रदुग्धे विपदो रुणद्धि
यशांसि सूते मलिनं प्रमार्ष्टि ।
संस्कारशौचेन परं पुनीते
शुद्धा हि बुद्धिः किल कामधेनुः ॥

ಸುಭಾಷಿತ (English IAST)

śriyaḥ pradugdhe vipado ruṇaddhi
yaśāṃsi sūte malinaṃ pramārṣṭi |
saṃskāraśaucena paraṃ punīte
śuddhā hi buddhiḥ kila kāmadhenuḥ ||

ಪದಶಃ ಅರ್ಥ

  • ಶ್ರಿಯಃ (श्रियः, śriyaḥ) = ಸಂಪತ್ತುಗಳನ್ನು (riches)
  • ಪ್ರದುಗ್ಧೇ (प्रदुग्धे, pradugdhe) = ಹಿಂಡಿ ಕೊಡುತ್ತದೆ (milks out)
  • ವಿಪದಃ (विपदः, vipadaḥ) = ಆಪತ್ತುಗಳನ್ನು (misfortunes)
  • ರುಣದ್ಧಿ (रुणद्धि, ruṇaddhi) = ತಡೆಯುತ್ತದೆ (holds back)
  • ಯಶಾಂಸಿ (यशांसि, yaśāṃsi) = ಕೀರ್ತಿಯನ್ನು (fame)
  • ಸೂತೇ (सूते, sūte) = ಹಡೆಯುತ್ತದೆ (brings forth)
  • ಮಲಿನಮ್ (मलिनम्, malinam) = ಕಲೆಯನ್ನು, ಕೊಳೆಯನ್ನು (the stain)
  • ಪ್ರಮಾರ್ಷ್ಟಿ (प्रमार्ष्टि, pramārṣṭi) = ಒರೆಸಿ ಹಾಕುತ್ತದೆ (wipes away)
  • ಸಂಸ್ಕಾರಶೌಚೇನ (संस्कारशौचेन, saṃskāraśaucena) = ಸಂಸ್ಕಾರದ ಶುದ್ಧಿಯಿಂದ (by the cleanness of good training)
  • ಪರಮ್ (परम्, param) = ಇನ್ನೊಬ್ಬರನ್ನು (another)
  • ಪುನೀತೇ (पुनीते, punīte) = ಪವಿತ್ರಗೊಳಿಸುತ್ತದೆ (purifies)
  • ಶುದ್ಧಾ ಹಿ ಬುದ್ಧಿಃ (शुद्धा हि बुद्धिः, śuddhā hi buddhiḥ) = ಶುದ್ಧವಾದ ಬುದ್ಧಿಯೇ (a clear intellect indeed)
  • ಕಿಲ ಕಾಮಧೇನುಃ (किल कामधेनुः, kila kāmadhenuḥ) = ನಿಜಕ್ಕೂ ಕಾಮಧೇನು (is truly the wish granting cow)

ಸಂಪೂರ್ಣ ಅರ್ಥ (ಕನ್ನಡ)

ಅದು ಸಂಪತ್ತುಗಳನ್ನು ಹಿಂಡಿ ಕೊಡುತ್ತದೆ, ಆಪತ್ತುಗಳನ್ನು ತಡೆಯುತ್ತದೆ, ಕೀರ್ತಿಯನ್ನು ಹಡೆಯುತ್ತದೆ, ಕಲೆಯನ್ನು ಒರೆಸಿ ಹಾಕುತ್ತದೆ, ಸಂಸ್ಕಾರದ ಶುದ್ಧಿಯಿಂದ ಬೇರೆಯವರನ್ನೂ ಪವಿತ್ರಗೊಳಿಸುತ್ತದೆ. ಶುದ್ಧವಾದ ಬುದ್ಧಿಯೇ ನಿಜವಾದ ಕಾಮಧೇನು.

ಸಂಪೂರ್ಣ ಅರ್ಥ (ಇಂಗ್ಲಿಷ್)

It milks out riches, holds back misfortunes, brings forth fame, wipes away stains, and by the cleanness of its training purifies others as well. A clear intellect is indeed the wish granting cow.

ಈ ಸುಭಾಷಿತದ ಬಗ್ಗೆAbout this subhashita

ಪ್ರದುಗ್ಧೇ ಎಂಬ ಕ್ರಿಯಾಪದ ಹಾಲು ಹಿಂಡುವುದನ್ನು ಸೂಚಿಸುತ್ತದೆ. ಅಲ್ಲಿಂದಲೇ ಕೊನೆಯ ಸಾಲಿನ ಕಾಮಧೇನುವಿನ ಚಿತ್ರ ಹುಟ್ಟುತ್ತದೆ. ಮೊದಲ ಪದವೇ ಕೊನೆಯ ರೂಪಕವನ್ನು ಸಿದ್ಧಪಡಿಸಿದೆ.

The verb pradugdhe refers to milking. The image of the wish granting cow in the last line grows from it. The first word has already prepared the closing metaphor.

ಸಂಸ್ಕಾರ ಎಂದರೆ ಇಲ್ಲಿ ತಿದ್ದಿ ಬೆಳೆಸಿದ ನಡವಳಿಕೆ. ಬುದ್ಧಿ ಶುದ್ಧವಾಗಿದ್ದರೆ ಅದು ತನ್ನನ್ನು ಮಾತ್ರವಲ್ಲ ಸುತ್ತಲಿನವರನ್ನೂ ತಿದ್ದುತ್ತದೆ ಎಂಬುದು ಈ ಸಾಲಿನ ಅರ್ಥ.

Samskara here means conduct that has been shaped and refined. The line means that a clear intellect corrects not only itself but those around it.

ಆಧಾರ: ಸುಭಾಷಿತರತ್ನಭಾಂಡಾಗಾರ, ಸಾಮಾನ್ಯ ಪ್ರಕರಣ (ನಿರ್ಣಯಸಾಗರ ಮುದ್ರಣಾಲಯ, ಮುಂಬಯಿ), ಪುಟ 30. ಶ್ಲೋಕದ ಪಾಠವನ್ನು ಮುದ್ರಿತ ಪ್ರತಿಯ ಸ್ಕ್ಯಾನ್‌ನೊಂದಿಗೆ ಅಕ್ಷರಶಃ ಹೋಲಿಸಿದ್ದೇವೆ. ಅರ್ಥ ಮತ್ತು ವಿವರಣೆ ನಮ್ಮದು.

Source: Subhashitaratnabhandagara, Samanya Prakarana (Nirnaya Sagar Press, Bombay), page 30. The text of the verse was checked letter by letter against a scan of the printed book. The meaning and notes are ours.

ಇಂದಿನ ಬದುಕಿಗೆFor life today

ಇಲ್ಲಿ ಹೊಗಳುತ್ತಿರುವುದು ಚುರುಕುತನವನ್ನಲ್ಲ, ಶುದ್ಧತೆಯನ್ನು. ಪೂರ್ವಗ್ರಹ, ಸಿಟ್ಟು, ಭಯ ಇವು ಇಲ್ಲದ ಬುದ್ಧಿ ಮಾತ್ರ ಸರಿಯಾದ ತೀರ್ಮಾನ ಕೊಡುತ್ತದೆ.

What is praised here is not cleverness but clearness. Only a mind free of prejudice, anger and fear gives a sound decision.

ದೊಡ್ಡ ತೀರ್ಮಾನಗಳನ್ನು ಸಿಟ್ಟಿನಲ್ಲಿ, ಆತಂಕದಲ್ಲಿ, ನಿದ್ದೆಗೆಟ್ಟ ರಾತ್ರಿಯ ಮಾರನೆಯ ದಿನ ತೆಗೆದುಕೊಳ್ಳದಿರುವುದು ಈ ಶ್ಲೋಕದ ಪ್ರಾಯೋಗಿಕ ಪಾಠ.

The practical lesson of this verse is not to take big decisions in anger, in anxiety, or on the day after a sleepless night.


ಸುಭಾಷಿತರತ್ನಭಾಂಡಾಗಾರದ ಸುಭಾಷಿತಗಳು, ಪುಸ್ತಕದ ಕ್ರಮದಲ್ಲಿ: ಸುಭಾಷಿತ ರತ್ನಗಳು

Fine sayings from the Subhashitaratnabhandagara, in the order of the book

ಸುಭಾಷಿತ ಎಂದರೇನು ಎಂಬ ಪರಿಚಯಕ್ಕೆ: ಬದುಕನ್ನು ಹಿಡಿದಿಡುವ ನುಡಿಗನ್ನಡಿ

For an introduction to what a subhashita is: our opening essay


ಹೊಸ ಬರಹ ಬಂದಾಗ ತಿಳಿಯಿರಿ

ಅನಗತ್ಯ ಸಂದೇಶ ಕಳುಹಿಸುವುದಿಲ್ಲ. ವಿವರಕ್ಕೆ ಗೌಪ್ಯತಾ ನೀತಿ ನೋಡಿ.

ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.

ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸ ಪ್ರಕಟವಾಗುವುದಿಲ್ಲ. ಅಗತ್ಯವಿರುವ ಕಡೆ * ಗುರುತಿದೆ

ಮೇಲಕ್ಕೆ