ಸುಭಾಷಿತರತ್ನಭಾಂಡಾಗಾರದಲ್ಲಿ ಸುಭಾಷಿತಗಳ ಪ್ರಶಂಸೆಯ ನಂತರ ವಿದ್ಯೆಯ ಪ್ರಶಂಸೆ ಆರಂಭವಾಗುತ್ತದೆ. ಆ ಭಾಗದ ಮೊದಲ ಶ್ಲೋಕ ಇದು.
ಅದು ಸರಸ್ವತಿಯನ್ನು ನೇರವಾಗಿ ಕರೆದು ಅವಳ ಭಂಡಾರದ ವಿಚಿತ್ರ ಲೆಕ್ಕವನ್ನು ಹೇಳುತ್ತದೆ.
ಸುಭಾಷಿತ (ಕನ್ನಡ)
ಅಪೂರ್ವಃ ಕೋಽಪಿ ಕೋಶೋಽಯಂ ವಿದ್ಯತೇ ತವ ಭಾರತಿ ।
ವ್ಯಯತೋ ವೃದ್ಧಿಮಾಯಾತಿ ಕ್ಷಯಮಾಯಾತಿ ಸಂಚಯಾತ್ ॥
ಸುಭಾಷಿತ (ದೇವನಾಗರಿ)
अपूर्वः कोऽपि कोशोऽयं विद्यते तव भारति ।
व्ययतो वृद्धिमायाति क्षयमायाति संचयात् ॥
ಸುಭಾಷಿತ (English IAST)
apūrvaḥ ko’pi kośo’yaṃ vidyate tava bhārati |
vyayato vṛddhimāyāti kṣayamāyāti saṃcayāt ||
ಪದಶಃ ಅರ್ಥ
- ಅಪೂರ್ವಃ (अपूर्वः, apūrvaḥ) = ಹಿಂದೆಂದೂ ಕಾಣದ, ಅಸಾಧಾರಣ (unprecedented)
- ಕಃ ಅಪಿ (कः अपि, kaḥ api) = ಯಾವುದೋ ಒಂದು (a certain)
- ಕೋಶಃ (कोशः, kośaḥ) = ಭಂಡಾರ, ಖಜಾನೆ (treasury)
- ಅಯಮ್ (अयम्, ayam) = ಈ (this)
- ವಿದ್ಯತೇ (विद्यते, vidyate) = ಇದೆ (there is)
- ತವ (तव, tava) = ನಿನ್ನ (your)
- ಭಾರತಿ (भारति, bhārati) = ಓ ಸರಸ್ವತಿ (O Bharati, Sarasvati)
- ವ್ಯಯತಃ (व्ययतः, vyayataḥ) = ಖರ್ಚು ಮಾಡುವುದರಿಂದ (by spending)
- ವೃದ್ಧಿಮ್ (वृद्धिम्, vṛddhim) = ಬೆಳವಣಿಗೆಯನ್ನು (growth)
- ಆಯಾತಿ (आयाति, āyāti) = ಹೊಂದುತ್ತದೆ (comes to)
- ಕ್ಷಯಮ್ (क्षयम्, kṣayam) = ಕ್ಷಯವನ್ನು, ಕರಗುವಿಕೆಯನ್ನು (decline)
- ಸಂಚಯಾತ್ (संचयात्, saṃcayāt) = ಕೂಡಿಡುವುದರಿಂದ (from hoarding)
ಸಂಪೂರ್ಣ ಅರ್ಥ (ಕನ್ನಡ)
ಓ ಸರಸ್ವತಿ, ನಿನ್ನ ಈ ಭಂಡಾರ ಅಸಾಧಾರಣವಾದುದು. ಇದು ಖರ್ಚು ಮಾಡಿದಷ್ಟೂ ಬೆಳೆಯುತ್ತದೆ, ಕೂಡಿಟ್ಟರೆ ಕರಗುತ್ತದೆ.
ಸಂಪೂರ್ಣ ಅರ್ಥ (ಇಂಗ್ಲಿಷ್)
O Sarasvati, this treasury of yours is like no other. It grows the more it is spent, and dwindles when it is hoarded.
ಈ ಸುಭಾಷಿತದ ಬಗ್ಗೆAbout this subhashita
ಇದೊಂದು ವಿರೋಧಾಭಾಸ ಅಲಂಕಾರದ ಉದಾಹರಣೆ. ಹಣದ ಲೆಕ್ಕದಲ್ಲಿ ಖರ್ಚು ಕಳೆಯುತ್ತದೆ, ಉಳಿತಾಯ ಬೆಳೆಸುತ್ತದೆ. ವಿದ್ಯೆಯ ಲೆಕ್ಕ ಅದಕ್ಕೆ ತಲೆಕೆಳಗು. ಈ ವಿರೋಧ ಮೇಲ್ನೋಟಕ್ಕೆ ಮಾತ್ರ, ಒಳಾರ್ಥದಲ್ಲಿ ಅದು ಸತ್ಯ.
This is an example of virodhabhasa, apparent contradiction. In the accounts of money, spending reduces and saving increases. The accounts of knowledge run the other way. The contradiction is only on the surface. The statement itself holds true.
ಭಾರತೀ ಎಂಬುದು ಸರಸ್ವತಿಯ ಹೆಸರು, ಅದೇ ಪದಕ್ಕೆ ವಾಣಿ ಎಂಬ ಅರ್ಥವೂ ಇದೆ. ಹೀಗಾಗಿ ಈ ಶ್ಲೋಕವನ್ನು ಮಾತಿನ ಭಂಡಾರದ ಬಗ್ಗೆಯೂ ಓದಬಹುದು.
Bharati is a name of Sarasvati, and the same word also means speech. So the verse can also be read as being about the treasury of words.
ಆಧಾರ: ಸುಭಾಷಿತರತ್ನಭಾಂಡಾಗಾರ, ಸಾಮಾನ್ಯ ಪ್ರಕರಣ (ನಿರ್ಣಯಸಾಗರ ಮುದ್ರಣಾಲಯ, ಮುಂಬಯಿ), ಪುಟ 29. ಶ್ಲೋಕದ ಪಾಠವನ್ನು ಮುದ್ರಿತ ಪ್ರತಿಯ ಸ್ಕ್ಯಾನ್ನೊಂದಿಗೆ ಅಕ್ಷರಶಃ ಹೋಲಿಸಿದ್ದೇವೆ. ಅರ್ಥ ಮತ್ತು ವಿವರಣೆ ನಮ್ಮದು.
Source: Subhashitaratnabhandagara, Samanya Prakarana (Nirnaya Sagar Press, Bombay), page 29. The text of the verse was checked letter by letter against a scan of the printed book. The meaning and notes are ours.
ಇಂದಿನ ಬದುಕಿಗೆFor life today
ಕಲಿಸುವವನು ಹಲವೊಮ್ಮೆ ಕಲಿಯುವವನಿಗಿಂತ ಹೆಚ್ಚು ಕಲಿಯುತ್ತಾನೆ. ಕಿರಿಯ ವೈದ್ಯರಿಗೆ ಪಾಠ ಮಾಡುವ ಹಿರಿಯ ವೈದ್ಯರಿಗೆ ಇದು ದಿನನಿತ್ಯದ ಅನುಭವ.
The one who teaches often learns more than the one who is taught. For senior doctors who teach residents this is everyday experience.
ಕಲಿತದ್ದನ್ನು ಬಳಸದೆ ಕೂಡಿಟ್ಟರೆ ಅದು ಮರೆತುಹೋಗುತ್ತದೆ. ಹಳೆಯ ಪಾಠವನ್ನು ಯಾರಿಗಾದರೂ ವಿವರಿಸುವುದೇ ಅದನ್ನು ಉಳಿಸಿಕೊಳ್ಳುವ ಒಂದು ಒಳ್ಳೆಯ ದಾರಿ.
What is learnt and hoarded unused is forgotten. Explaining an old lesson to someone is one of the best ways to keep it.
ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.





ಪ್ರತಿಕ್ರಿಯೆ ಬರೆಯಿರಿ