ಪರೀಕ್ಷೆಗೆ ಓದುವಾಗ ನೋಟ್ಸ್ ಪುಸ್ತಕದಲ್ಲಿ ಎಲ್ಲವೂ ಇರುತ್ತದೆ. ಆದರೆ ಪರೀಕ್ಷೆಯ ಕೊಠಡಿಯಲ್ಲಿ ಬೇಕಾದಾಗ ತಲೆಯಲ್ಲಿ ಇಲ್ಲದಿದ್ದರೆ ಆ ನೋಟ್ಸ್ ಯಾವ ಕೆಲಸಕ್ಕೂ ಬರುವುದಿಲ್ಲ.
ಅದೇ ಮಾತನ್ನು ಈ ಶ್ಲೋಕ ನಾಲ್ಕು ಉದಾಹರಣೆಗಳೊಂದಿಗೆ ಹೇಳುತ್ತದೆ. ಅನುಷ್ಟುಪ್ ಛಂದಸ್ಸಿನ ಈ ಪದ್ಯದಲ್ಲಿ ವೃಥಾ ಎಂಬ ಪದ ನಾಲ್ಕು ಕಡೆ ಬರುತ್ತದೆ.
ಸುಭಾಷಿತ (ಕನ್ನಡ)
ಪರಾಧೀನಂ ವೃಥಾ ಜನ್ಮ ಪರಸ್ತ್ರೀಷು ವೃಥಾ ಸುಖಮ್
ಪರಗೇಹೇ ವೃಥಾ ಲಕ್ಷ್ಮೀರ್ವಿದ್ಯಾ ಯಾ ಪುಸ್ತಕೇ ವೃಥಾ
ಸುಭಾಷಿತ (ದೇವನಾಗರಿ)
पराधीनं वृथा जन्म परस्त्रीषु वृथा सुखम्
परगेहे वृथा लक्ष्मीर्विद्या या पुस्तके वृथा
ಸುಭಾಷಿತ (IAST)
parādhīnaṃ vṛthā janma parastrīṣu vṛthā sukham
paragehe vṛthā lakṣmīrvidyā yā pustake vṛthā
ಪದಶಃ ಅರ್ಥ
- ಪರಾಧೀನಂ (पराधीनं, parādhīnaṃ) = ಪರರ ಅಧೀನದಲ್ಲಿರುವ (dependent on others)
- ವೃಥಾ (वृथा, vṛthā) = ವ್ಯರ್ಥ (in vain)
- ಜನ್ಮ (जन्म, janma) = ಬದುಕು (life)
- ಪರಸ್ತ್ರೀಷು (परस्त्रीषु, parastrīṣu) = ಇತರರ ಪತ್ನಿಯರ ವಿಷಯದಲ್ಲಿ (where it concerns other men’s wives)
- ವೃಥಾ (वृथा, vṛthā) = ವ್ಯರ್ಥ (in vain)
- ಸುಖಮ್ (सुखम्, sukham) = ಸುಖ (pleasure)
- ಪರಗೇಹೇ (परगेहे, paragehe) = ಪರರ ಮನೆಯಲ್ಲಿ (in another’s house)
- ವೃಥಾ (वृथा, vṛthā) = ವ್ಯರ್ಥ (in vain)
- ಲಕ್ಷ್ಮೀರ್ವಿದ್ಯಾ (लक्ष्मीर्विद्या, lakṣmīrvidyā) = ಸಂಪತ್ತು ಮತ್ತು ವಿದ್ಯೆ (ಲಕ್ಷ್ಮೀಃ + ವಿದ್ಯಾ) (wealth and learning (lakshmih + vidya))
- ಯಾ (या, yā) = ಯಾವುದು (which)
- ಪುಸ್ತಕೇ (पुस्तके, pustake) = ಪುಸ್ತಕದಲ್ಲಿ ಮಾತ್ರ ಇರುವುದು (lies in a book)
- ವೃಥಾ (वृथा, vṛthā) = ವ್ಯರ್ಥ (in vain)
ಸಂಪೂರ್ಣ ಅರ್ಥ (ಕನ್ನಡ)
ಪರರ ಅಧೀನದ ಬದುಕು ವ್ಯರ್ಥ. ಪರಸ್ತ್ರೀಯಲ್ಲಿ ಹುಡುಕುವ ಸುಖ ವ್ಯರ್ಥ. ಪರರ ಮನೆಯಲ್ಲಿರುವ ಸಂಪತ್ತು ವ್ಯರ್ಥ. ಪುಸ್ತಕದಲ್ಲೇ ಉಳಿದ ವಿದ್ಯೆಯೂ ವ್ಯರ್ಥ.
ಸಂಪೂರ್ಣ ಅರ್ಥ (ಇಂಗ್ಲಿಷ್)
A life lived under another’s control is wasted. Pleasure sought in another man’s wife is wasted. Wealth that sits in another’s house is wasted. And learning that stays in a book is wasted too.
ಈ ಸುಭಾಷಿತದ ಬಗ್ಗೆAbout this subhashita
ವೃಥಾ ಎಂದರೆ ವ್ಯರ್ಥ ಅಥವಾ ಪ್ರಯೋಜನವಿಲ್ಲದ. ಪದ್ಯ ಈ ಒಂದೇ ಪದವನ್ನು ನಾಲ್ಕು ಬಾರಿ ಹೇಳಿ ಪ್ರತಿ ವಾಕ್ಯಕ್ಕೂ ಮುದ್ರೆ ಒತ್ತುತ್ತದೆ.
Vritha means in vain or of no use. The verse says this one word four times and stamps each clause with it.
ಕೊನೆಯ ಉದಾಹರಣೆಯೇ ಪದ್ಯದ ಚುರುಕು. ಮೊದಲ ಮೂರು ಬೇರೆಯವರ ಮೇಲಿನ ಅವಲಂಬನೆಯನ್ನು ಹೇಳುತ್ತವೆ. ನಾಲ್ಕನೆಯದು ವಿದ್ಯೆ ಇದ್ದರೂ ಬೇಕಾದಾಗ ಕೈಗೆ ಸಿಗದ ಸ್ಥಿತಿಯನ್ನು ಹೇಳುತ್ತದೆ. ಅಂದರೆ ನಮ್ಮದೇ ವಿದ್ಯೆ ಪುಸ್ತಕದಲ್ಲೇ ಇದ್ದರೆ ಅದೂ ಪರರ ಮನೆಯ ಸಂಪತ್ತಿನಂತೆ.
The last example carries the sting. The first three speak of dependence on others. The fourth speaks of learning that is there but out of reach when needed. Learning left in the book is, in effect, wealth in someone else’s house.
ಆಧಾರ: ಸುಭಾಷಿತರತ್ನಭಾಂಡಾಗಾರ, ರಾಜ ಪ್ರಕರಣ (ನಿರ್ಣಯಸಾಗರ ಮುದ್ರಣಾಲಯ, ಮುಂಬಯಿ), ಪುಟ 160. ಶ್ಲೋಕದ ಪಾಠವನ್ನು ಮುದ್ರಿತ ಪ್ರತಿಯ ಸ್ಕ್ಯಾನ್‌ನೊಂದಿಗೆ ಅಕ್ಷರಶಃ ಹೋಲಿಸಿದ್ದೇವೆ. ಅರ್ಥ ಮತ್ತು ವಿವರಣೆ ನಮ್ಮದು.
Source: Subhashitaratnabhandagara, Raja Prakarana (Nirnaya Sagar Press, Bombay), page 160. The text of the verse was checked letter by letter against a scan of the printed book. The meaning and notes are ours.
ಇಂದಿನ ಬದುಕಿಗೆFor life today
ವೈದ್ಯಕೀಯ ವಿದ್ಯಾರ್ಥಿ ಪುಸ್ತಕದಲ್ಲಿ ಓದಿದ್ದನ್ನು ರೋಗಿಯ ಮುಂದೆ ನೆನಪಿಸಿಕೊಳ್ಳಲಾಗದಿದ್ದರೆ ಆ ಜ್ಞಾನ ಇನ್ನೂ ಅವನದಾಗಿಲ್ಲ. ರೆಸಿಡೆಂಟರಿಗೆ ಕಲಿಸುವಾಗ ಇದನ್ನು ಆಗಾಗ ನೆನಪಿಸುತ್ತೇವೆ.
If a medical student cannot recall what the book says when the patient is in front of them, that knowledge is not yet theirs. We keep reminding ourselves of this when teaching residents.
ಪರಸ್ಪರ ಅವಲಂಬನೆ ಕುಟುಂಬದಲ್ಲಿ ಮತ್ತು ಕೆಲಸದಲ್ಲಿ ಸಹಜ. ಶ್ಲೋಕ ಹೇಳುತ್ತಿರುವುದು ತನ್ನ ಬದುಕಿನ ಹಿಡಿತವೇ ಇಲ್ಲದ ಸ್ಥಿತಿಯನ್ನು. ಪರಸ್ತ್ರೀಯ ಮಾತನ್ನು ಇಂದು ಇತರರ ಬದುಕಿನ ಗಡಿಯನ್ನು ಗೌರವಿಸಬೇಕು ಎಂದು ಓದಬಹುದು.
Mutual dependence is natural in a family and at work. The verse speaks of having no hold at all on one’s own life. The line on another man’s wife can be read today as a call to respect the boundaries of other people’s lives.
ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.





ಪ್ರತಿಕ್ರಿಯೆ ಬರೆಯಿರಿ