ಹಳ್ಳಿಯಲ್ಲಿ ಬಾವಿ ತೋಡುವುದನ್ನು ನೋಡಿದವರಿಗೆ ಗೊತ್ತು. ಮೊದಲ ಅಡಿಗಳಲ್ಲಿ ಬರೀ ಮಣ್ಣು ಬರುತ್ತದೆ, ನೀರಿಗಾಗಿ ತಾಳ್ಮೆ ಬೇಕು.
ಈ ಶ್ಲೋಕ ಅದೇ ಚಿತ್ರವನ್ನು ವಿದ್ಯೆ ಕಲಿಯುವುದಕ್ಕೆ ಹಚ್ಚುತ್ತದೆ. ಇದೊಂದು ಅನುಷ್ಟುಪ್ ಶ್ಲೋಕ, ಮನುಸ್ಮೃತಿಯಲ್ಲಿ ಕಾಣುವ ಮಾತು ಎಂದು ಪ್ರಸಿದ್ಧವಾಗಿದೆ.
ಸುಭಾಷಿತ (ಕನ್ನಡ)
ಯಥಾ ಖನನ್ಖನಿತ್ರೇಣ ನರೋ ವಾರ್ಯಧಿಗಚ್ಛತಿ
ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ
ಸುಭಾಷಿತ (ದೇವನಾಗರಿ)
यथा खनन्खनित्रेण नरो वार्यधिगच्छति
तथा गुरुगतां विद्यां शुश्रूषुरधिगच्छति
ಸುಭಾಷಿತ (IAST)
yathā khanankhanitreṇa naro vāryadhigacchati
tathā gurugatāṃ vidyāṃ śuśrūṣuradhigacchati
ಪದಶಃ ಅರ್ಥ
- ಯಥಾ (यथा, yathā) = ಹೇಗೆ (as)
- ಖನನ್ಖನಿತ್ರೇಣ (खनन्खनित्रेण, khanankhanitreṇa) = ಅಗೆಯುತ್ತಾ ಗುದ್ದಲಿಯಿಂದ (ಖನನ್ ಖನಿತ್ರೇಣ) (digging with a spade (khanan khanitreṇa))
- ನರೋ (नरो, naro) = ಮನುಷ್ಯ (ನರಃ) (a man)
- ವಾರ್ಯಧಿಗಚ್ಛತಿ (वार्यधिगच्छति, vāryadhigacchati) = ನೀರನ್ನು ಪಡೆಯುತ್ತಾನೆ (ವಾರಿ ಅಧಿಗಚ್ಛತಿ) (reaches water (vāri adhigacchati))
- ತಥಾ (तथा, tathā) = ಹಾಗೆಯೇ (so)
- ಗುರುಗತಾಂ (गुरुगतां, gurugatāṃ) = ಗುರುವಿನಲ್ಲಿರುವ (residing in the teacher)
- ವಿದ್ಯಾಂ (विद्यां, vidyāṃ) = ವಿದ್ಯೆಯನ್ನು (knowledge)
- ಶುಶ್ರೂಷುರಧಿಗಚ್ಛತಿ (शुश्रूषुरधिगच्छति, śuśrūṣuradhigacchati) = ಕೇಳಿ ಸೇವಿಸುವವನು ಪಡೆಯುತ್ತಾನೆ (ಶುಶ್ರೂಷುಃ ಅಧಿಗಚ್ಛತಿ) (the attentive learner obtains (śuśrūṣuḥ adhigacchati))
ಸಂಪೂರ್ಣ ಅರ್ಥ (ಕನ್ನಡ)
ಗುದ್ದಲಿಯಿಂದ ಅಗೆಯುತ್ತಾ ಮನುಷ್ಯ ನೀರನ್ನು ತಲುಪುವಂತೆ, ಕೇಳಿ ಸೇವೆ ಮಾಡುವ ಶಿಷ್ಯನು ಗುರುವಿನಲ್ಲಿರುವ ವಿದ್ಯೆಯನ್ನು ಪಡೆಯುತ್ತಾನೆ.
ಸಂಪೂರ್ಣ ಅರ್ಥ (ಇಂಗ್ಲಿಷ್)
As a man reaches water by digging with a spade, so the attentive learner obtains the knowledge that lies in the teacher.
ಈ ಸುಭಾಷಿತದ ಬಗ್ಗೆAbout this subhashita
ಗುರುಗತಾ ವಿದ್ಯಾ ಎಂದರೆ ಗುರುವಿನಲ್ಲಿ ನೆಲೆಸಿರುವ ವಿದ್ಯೆ. ನೀರು ನೆಲದಡಿ ಇರುವಂತೆ ವಿದ್ಯೆ ಗುರುವಿನ ಒಳಗೆ ಇದೆ ಎಂಬ ಕಲ್ಪನೆ. ಅದು ತನ್ನಷ್ಟಕ್ಕೆ ಹೊರಬರುವುದಿಲ್ಲ.
Gurugata vidya means knowledge lodged in the teacher. The idea is that knowledge lies within the teacher as water lies under the ground. It does not come out of itself.
ಶುಶ್ರೂಷು ಎಂದರೆ ಕೇಳಲು ಬಯಸುವವನು, ಸೇವೆ ಮಾಡುವವನು. ರೋಗಿಯ ಆರೈಕೆಗೆ ನಾವು ಹೇಳುವ ಶುಶ್ರೂಷೆ ಎಂಬ ಪದ ಇದೇ ಮೂಲದ್ದು.
Shushrushu means one who wishes to hear, one who serves. The word shushrusha that we use for nursing a patient comes from the same root.
ಆಧಾರ: ಸುಭಾಷಿತರತ್ನಭಾಂಡಾಗಾರ, ರಾಜ ಪ್ರಕರಣ (ನಿರ್ಣಯಸಾಗರ ಮುದ್ರಣಾಲಯ, ಮುಂಬಯಿ), ಪುಟ 167. ಶ್ಲೋಕದ ಪಾಠವನ್ನು ಮುದ್ರಿತ ಪ್ರತಿಯ ಸ್ಕ್ಯಾನ್ನೊಂದಿಗೆ ಅಕ್ಷರಶಃ ಹೋಲಿಸಿದ್ದೇವೆ. ಅರ್ಥ ಮತ್ತು ವಿವರಣೆ ನಮ್ಮದು.
Source: Subhashitaratnabhandagara, Raja Prakarana (Nirnaya Sagar Press, Bombay), page 167. The text of the verse was checked letter by letter against a scan of the printed book. The meaning and notes are ours.
ಇಂದಿನ ಬದುಕಿಗೆFor life today
ಗುರುವಿನ ಬಳಿ ಕುಳಿತರೆ ಸಾಲದು, ಅಗೆಯುವ ಶ್ರಮ ಬೇಕು. ಹಿರಿಯ ವೈದ್ಯರ ಜೊತೆ ರೌಂಡ್ಸ್ ಹೋಗುವ ಕಿರಿಯರಲ್ಲಿ ಪ್ರಶ್ನೆ ಕೇಳಿ ಬರೆದಿಟ್ಟುಕೊಳ್ಳುವವರೇ ಹೆಚ್ಚು ಕಲಿಯುತ್ತಾರೆ.
Sitting by the teacher is not enough, one has to do the digging. Among juniors who go on rounds with a senior doctor, those who ask and write things down learn the most.
ಬಾವಿಯಲ್ಲಿ ನೀರು ಬರುವ ಮೊದಲು ಮಣ್ಣು ಬರುತ್ತದೆ. ಕಲಿಕೆಯ ಆರಂಭದ ದಿನಗಳು ಕಷ್ಟ ಎನ್ನಿಸಿದರೂ ಅದು ನೀರಿನ ದಾರಿಯಲ್ಲಿರುವ ಮಣ್ಣು ಎಂದು ನೆನಪಿಟ್ಟುಕೊಳ್ಳಬಹುದು.
Before water comes in a well, earth comes. Even if the first days of learning feel hard, we may remember that it is the earth on the way to the water.
ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.


ಪ್ರತಿಕ್ರಿಯೆ ಬರೆಯಿರಿ