ಕಾಮದಾ ಏಕಾದಶಿ | Kamada Ekadashi

The ekadashi of the bright fortnight of Chaitra, and in the amanta reckoning the first ekadashi of the lunar year.

ಚೈತ್ರ ಶುಕ್ಲ ಪಕ್ಷದ ಏಕಾದಶಿಯೇ ಕಾಮದಾ ಏಕಾದಶಿ. ಕರ್ನಾಟಕದಲ್ಲಿ ರೂಢಿಯಾದ ಅಮಾಂತ ಲೆಕ್ಕದಲ್ಲಿ ಚೈತ್ರವೇ ವರ್ಷದ ಮೊದಲ ಮಾಸ. ಆದರಿಂದ ವರ್ಷದ ಹೆಸರಿನ ಏಕಾದಶಿಗಳಲ್ಲಿ ಇದೇ ಮೊದಲದದ್ದು. ರಾಮ ನವಮಿ ಇದೇ ಪಕ್ಷದಲ್ಲಿ, ಎರಡು ತಿಥಿ ಮೊದಲು ಬರುತ್ತದೆ.

ಹೆಸರು

ಕಾಮ ಎಂದರೆ ಇಚ್ಛೆ, ದಾ ಎಂದರೆ ಕೊಡುವವನು. ಇಚ್ಛೆಯನ್ನು ಮನ್ನಿಸುವ ವ್ರತ ಎಂದು ಅರ್ಥ. ಬಹುಪಾಲು ಏಕಾದಶಿಗಳ ಹೆಸರುಗಳು ಹೀಗೆಯೇ: ಆ ದಿನದ ವಿಶೇಷವನ್ನಲ್ಲ, ವ್ರತದ ಫಲವನ್ನು ಹೆಸರು ಹೇಳುತ್ತದೆ.

ಮಾಹಾತ್ಮ್ಯ

ಇದರ ಕಥೆ ವರಾಹ ಪುರಾಣದಲ್ಲಿದೆ, ವಸಿಷ್ಟರು ದಿಲೀಪ ರಾಜನಿಗೆ ಹೇಳಿದದ್ದು ಎಂದು. ಪುಂಡರೀಕ ಎಂಬ ನಾಗರಾಜನ ಸಭೆಯಲ್ಲಿ ಹಾಡುತ್ತಿದ್ದ ಲಲಿತ ಎಂಬ ಗಂಧರ್ವನ ಮನಸ್ಸು ತನ್ನ ಪತ್ನಿ ಲಲಿತೆಯ ಮೇಲಿದ್ದುದರಿಂದ ಹಾಡು ತಪ್ಪಿತು. ರಾಜ ಅವನನ್ನು ರಾಕ್ಷಸನಾಗು ಎಂದು ಶಪಿಸಿದ. ಲಲಿತೆ ಈ ವ್ರತ ಮಾಡಿ ಅದರ ಫಲವನ್ನು ಗಂಡನಿಗೆ ಅರ್ಪಿಸಿದಳು, ಅವನಿಗೆ ಮೊದಲಿನ ರೂಪ ಮರಳಿತು.

ಹಾಗಾಗಿ ಶಾಪದಿಂದ ಬಿಡುಗಡೆ, ಮತ್ತು ಬಹುಕಾಲದ ಇಚ್ಛೆಯ ಈಡೇರಿಕೆ, ಈ ವ್ರತದ ಫಲ ಎಂದು ಹೇಳಲಾಗಿದೆ. ವ್ರತದ ಫಲವನ್ನು ಮತ್ತೊಬ್ಬರಿಗೆ ಕೊಡಬಹುದು ಎಂಬ ಅಂಶವನ್ನು ಹೇಳಲೆಂದೇ ಕಥೆಯನ್ನು ಕಟ್ಟಲಾಗಿದೆ. ಇದು ಪುರಾಣ ಹೇಳುವುದು, ಹೆಸರು ಬಂದ ದಾರಿಯನ್ನು ತಿಳಿಯಲು ಇಲ್ಲಿ ಕೊಟ್ಟಿದ್ದೇವೆ.

ಆಚರಣೆಯಲ್ಲಿ

ಆಚರಣೆಯ ದೃಷ್ಟಿಯಿಂದ ಕಾಮದಾ ಏಕಾದಶಿಯನ್ನು ಬೇರೆ ಮಾಡುವ ಯಾವುದೇ ವಿಶೇಷವಿಲ್ಲ. ಉಪವಾಸ, ತಿಥಿಯ ನಿರ್ಧಾರ, ದಶಮಿವಿದ್ಧ ಏಕಾದಶಿಯ ಪ್ರಶ್ನೆ, ಪಾರಣೆಯ ಸಮಯ, ಇವೆಲ್ಲವನ್ನೂ ಏಕಾದಶಿಯ ಪುಟದಲ್ಲಿ ಕೊಡಲಾಗಿದೆ. ಈ ದಿನಕ್ಕಿರುವುದು ಆಚರಣೆಯ ವಿಶೇಷವಲ್ಲ, ಸ್ಥಾನದ ವಿಶೇಷ. ವ್ರತವನ್ನು ಹೊಸದಾಗಿ ಆರಂಭಿಸುವ ಮನೆಗಳು ಸಾಮಾನ್ಯವಾಗಿ ಇಲ್ಲಿಂದಲೇ ಶುರು ಮಾಡುತ್ತವೆ, ಏಕೆಂದರೆ ವರ್ಷದ ಲೆಕ್ಕ ಆರಂಭವಾಗುವುದೇ ಇಲ್ಲಿ.

Kamada Ekadashi is the eleventh tithi of the bright fortnight of Chaitra. In the amanta reckoning followed in Karnataka, Chaitra opens the lunar year, so this is the first of the year’s named ekadashis, falling in the same fortnight as Rama Navami two tithis earlier.

The name

Kamada is read as the giver of what is wished for, from kama, a desire, and da, one who gives. Almost every ekadashi name is of this shape: it names the fruit the vrata is said to yield rather than anything about the day itself.

The mahatmya

The account usually printed with it comes from the Varaha Purana, where it is told to King Dilipa by Vasishtha. A gandharva named Lalit, singing in the court of the naga king Pundarika, lost the thread of his song because his mind was on his wife Lalita, and the king cursed him into the body of a rakshasa. Lalita kept this vrata and made over its merit to her husband, and he was returned to his own form.

The phala said to follow is accordingly the lifting of a curse and the release from a rakshasa birth, and beyond that the granting of a desire long held. The text also allows the merit to be assigned to another person, which is the point the story is built to make. None of this is the writer’s claim; it is what the mahatmya says, and it is repeated here because it is the reason the day carries the name it does.

In practice

There is nothing in the observance that sets Kamada apart from any other ekadashi. The fast, the reckoning of the tithi, the question of an ekadashi pierced by dashami and the timing of the parana are the general rules, and they are given on the Ekadashi page. What this one has is a position rather than a practice. A household taking up the vrata for the first time usually begins here, because it is where the count of the year begins.

ಹೊಸ ಬರಹ ಬಂದಾಗ ತಿಳಿಯಿರಿ

ಅನಗತ್ಯ ಸಂದೇಶ ಕಳುಹಿಸುವುದಿಲ್ಲ. ವಿವರಕ್ಕೆ ಗೌಪ್ಯತಾ ನೀತಿ ನೋಡಿ.

ಮೇಲಕ್ಕೆ