ಹುಟ್ಟುಹಬ್ಬಕ್ಕೋ ಹೊಸ ಹುದ್ದೆಗೋ ಹಾರೈಸುವಾಗ ದೇವರು ನಿಮ್ಮನ್ನು ಕಾಪಾಡಲಿ ಎನ್ನುವುದು ನಮ್ಮ ಅಭ್ಯಾಸ.
ಈ ಶ್ಲೋಕ ಅಂಥದೇ ಹಾರೈಕೆ. ಆದರೆ ದೇವರ ಹೆಸರುಗಳ ಮೂಲಕವೇ ರಾಜನನ್ನು ಹೊಗಳುತ್ತದೆ. ಇದೊಂದು ಅನುಷ್ಟುಪ್ ಛಂದಸ್ಸಿನ, ಶ್ಲೇಷ ಎಂಬ ಪದದಾಟದ ಪದ್ಯ.
ಸುಭಾಷಿತ (ಕನ್ನಡ)
ಸತ್ಯಭಾಮಾಸಮಾಶ್ಲಿಷ್ಟಃ ಸಾಧುವೃಂದಾವನೇ ರತಃ
ಯಶೋದಯಾಸಮಾಯುಕ್ತಸ್ತ್ವಾಂ ಪಾಯಾತ್ತ್ವಾದೃಶೋ ಹರಿಃ
ಸುಭಾಷಿತ (ದೇವನಾಗರಿ)
सत्यभामासमाश्लिष्टः साधुवृन्दावने रतः
यशोदयासमायुक्तस्त्वां पायात्त्वादृशो हरिः
ಸುಭಾಷಿತ (IAST)
satyabhāmāsamāśliṣṭaḥ sādhuvṛndāvane rataḥ
yaśodayāsamāyuktastvāṃ pāyāttvādṛśo hariḥ
ಪದಶಃ ಅರ್ಥ
- ಸತ್ಯಭಾಮಾಸಮಾಶ್ಲಿಷ್ಟಃ (सत्यभामासमाश्लिष्टः, satyabhāmāsamāśliṣṭaḥ) = ಸತ್ಯಭಾಮೆಯಿಂದ ಆಲಿಂಗಿತನಾದವನು, ಅಥವಾ ಸತ್ಯ, ಕಾಂತಿ ಮತ್ತು ಲಕ್ಷ್ಮಿಯಿಂದ ಕೂಡಿದವನು (embraced by Satyabhama, or joined with truth, radiance and Lakshmi)
- ಸಾಧುವೃಂದಾವನೇ (साधुवृन्दावने, sādhuvṛndāvane) = ಚೆಲುವಾದ ವೃಂದಾವನದಲ್ಲಿ, ಅಥವಾ ಸಜ್ಜನರ ಸಮೂಹವನ್ನು ಕಾಯುವುದರಲ್ಲಿ (in fair Vrindavana, or in guarding the company of the good)
- ರತಃ (रतः, rataḥ) = ಆಸಕ್ತನಾದವನು (delighting, devoted)
- ಯಶೋದಯಾಸಮಾಯುಕ್ತಸ್ತ್ವಾಂ (यशोदयासमायुक्तस्त्वां, yaśodayāsamāyuktastvāṃ) = ಯಶೋದೆಯೊಂದಿಗೆ ಕೂಡಿದವನು, ಅಥವಾ ಕೀರ್ತಿ ಮತ್ತು ದಯೆಯಿಂದ ಕೂಡಿದವನು, ನಿನ್ನನ್ನು (ಯಶೋದಯಾಸಮಾಯುಕ್ತಃ ತ್ವಾಂ) (joined with Yashoda, or with fame and mercy, you)
- ಪಾಯಾತ್ತ್ವಾದೃಶೋ (पायात्त्वादृशो, pāyāttvādṛśo) = ಕಾಪಾಡಲಿ, ನಿನ್ನಂಥವನಾದ (ಪಾಯಾತ್ ತ್ವಾದೃಶಃ) (may he protect, who is like you)
- ಹರಿಃ (हरिः, hariḥ) = ಹರಿ, ಕೃಷ್ಣ (Hari)
ಸಂಪೂರ್ಣ ಅರ್ಥ (ಕನ್ನಡ)
ಸತ್ಯಭಾಮೆಯಿಂದ ಆಲಿಂಗಿತನಾದ, ವೃಂದಾವನದಲ್ಲಿ ಆಸಕ್ತನಾದ, ಯಶೋದೆಯೊಂದಿಗೆ ಕೂಡಿದ ಹರಿ, ನಿನ್ನಂತೆಯೇ ಇರುವ ಹರಿ, ನಿನ್ನನ್ನು ಕಾಪಾಡಲಿ. ಇನ್ನೊಂದು ಓದಿನಲ್ಲಿ ಅದೇ ಪದಗಳು ಸತ್ಯ, ಕಾಂತಿ ಮತ್ತು ಲಕ್ಷ್ಮಿಯಿಂದ ಕೂಡಿದ, ಸಜ್ಜನರ ಸಮೂಹದ ರಕ್ಷಣೆಯಲ್ಲಿ ಆಸಕ್ತನಾದ, ಕೀರ್ತಿ ಮತ್ತು ದಯೆಯಿಂದ ಕೂಡಿದ ರಾಜನನ್ನು ವರ್ಣಿಸುತ್ತವೆ.
ಸಂಪೂರ್ಣ ಅರ್ಥ (ಇಂಗ್ಲಿಷ್)
May Hari, embraced by Satyabhama, delighting in Vrindavana, joined with Yashoda, Hari who is just like you, protect you. Read the other way, the same words describe a king who is joined with truth, radiance and Lakshmi, devoted to guarding the company of the good, and joined with fame and mercy.
ಈ ಸುಭಾಷಿತದ ಬಗ್ಗೆAbout this subhashita
ಶ್ಲೇಷ ಎಂದರೆ ಒಂದೇ ಪದಕ್ಕೆ ಎರಡು ಅರ್ಥ. ಕೃಷ್ಣನ ಪಕ್ಷದಲ್ಲಿ ಸತ್ಯಭಾಮೆ ಅವನ ಪತ್ನಿ, ವೃಂದಾವನ ಅವನ ಬಾಲ್ಯದ ನೆಲ, ಯಶೋದೆ ಅವನ ಸಾಕುತಾಯಿ. ರಾಜನ ಪಕ್ಷದಲ್ಲಿ ಇವೇ ಪದಗಳು ಸತ್ಯ, ಕಾಂತಿ, ಲಕ್ಷ್ಮಿ, ಸಜ್ಜನರ ರಕ್ಷಣೆ, ಕೀರ್ತಿ ಮತ್ತು ದಯೆ ಎಂದು ಬಿಡಿಸಿಕೊಳ್ಳುತ್ತವೆ. ಈ ಬಿಡಿಸುವಿಕೆಗೆ ಮುದ್ರಿತ ಪ್ರತಿಯ ಅಡಿಟಿಪ್ಪಣಿಗಳನ್ನು ಅನುಸರಿಸಿದ್ದೇವೆ.
Shlesha means one word with two meanings. For Krishna, Satyabhama is his wife, Vrindavana the land of his childhood, Yashoda his foster mother. For the king the same words split into truth, radiance, Lakshmi, protection of the good, fame and mercy. We followed the footnotes of the printed book for this splitting.
ತ್ವಾದೃಶೋ ಹರಿಃ ಎಂದರೆ ನಿನ್ನಂಥ ಹರಿ. ಹೀಗೆ ರಾಜನನ್ನೇ ಹರಿಗೆ ಹೋಲಿಸಿ, ಆ ಹರಿಯೇ ನಿನ್ನನ್ನು ಕಾಪಾಡಲಿ ಎನ್ನುವ ಚಮತ್ಕಾರ ಇಲ್ಲಿದೆ. ಪುಸ್ತಕದ ಮುಂದಿನ ಶ್ಲೋಕದಲ್ಲಿ ಇದೇ ಆಟ ಮುಂದುವರಿಯುತ್ತದೆ.
Tvadrsho harih means a Hari like you. The stroke here is to compare the king to Hari and then wish that this very Hari protect him. The next verse in the book carries the same play on.
ಮುದ್ರಿತ ಪುಟದಲ್ಲಿ ಯಶೋದಯಾಸಮಾಯುಕ್ತ ಎಂಬಲ್ಲಿ ಶಾಯಿ ಮಸುಕಾಗಿದೆ. ಅಡಿಟಿಪ್ಪಣಿಯ ಅರ್ಥಕ್ಕೆ ಹೊಂದುವ ಪಾಠವನ್ನು ಇಟ್ಟಿದ್ದೇವೆ, ಆ ಓದು ಸ್ವಲ್ಪ ಅನಿಶ್ಚಿತ.
On the printed page the ink is smudged at yashodayasamayukta. We have kept the reading that fits the footnote, and that reading may be slightly uncertain.
ಆಧಾರ: ಸುಭಾಷಿತರತ್ನಭಾಂಡಾಗಾರ, ರಾಜ ಪ್ರಕರಣ (ನಿರ್ಣಯಸಾಗರ ಮುದ್ರಣಾಲಯ, ಮುಂಬಯಿ), ಪುಟ 102. ಶ್ಲೋಕದ ಪಾಠವನ್ನು ಮುದ್ರಿತ ಪ್ರತಿಯ ಸ್ಕ್ಯಾನ್ನೊಂದಿಗೆ ಅಕ್ಷರಶಃ ಹೋಲಿಸಿದ್ದೇವೆ. ಅರ್ಥ ಮತ್ತು ವಿವರಣೆ ನಮ್ಮದು.
Source: Subhashitaratnabhandagara, Raja Prakarana (Nirnaya Sagar Press, Bombay), page 102. The text of the verse was checked letter by letter against a scan of the printed book. The meaning and notes are ours.
ಇಂದಿನ ಬದುಕಿಗೆFor life today
ಹೊಗಳಿಕೆಗೂ ಹಾರೈಕೆಗೂ ಒಂದೇ ವಾಕ್ಯ ಸಾಕು ಎಂಬುದನ್ನು ಶ್ಲೋಕ ತೋರಿಸುತ್ತದೆ. ಒಬ್ಬರಿಗೆ ಶುಭ ಹೇಳುವಾಗ ಅವರ ಗುಣಗಳನ್ನೇ ಹೆಸರಿಸಿ ಹೇಳಿದರೆ ಹಾರೈಕೆಗೆ ತೂಕ ಬರುತ್ತದೆ.
The verse shows that one sentence can serve both as praise and as a blessing. A good wish carries more weight when it names the person’s own qualities.
ಆದರೆ ಇಂಥ ಹೊಗಳಿಕೆ ರಾಜಾಶ್ರಯದ ಭಾಷೆ. ಇಂದು ಯಾರನ್ನಾದರೂ ದೇವರಿಗೆ ಹೋಲಿಸುವಾಗ ಅದು ಪ್ರೀತಿಯ ಮಾತೋ ಓಲೈಕೆಯ ಮಾತೋ ಎಂದು ಒಮ್ಮೆ ಕೇಳಿಕೊಳ್ಳುವುದು ಒಳ್ಳೆಯದು.
But this kind of praise is the language of the royal court. When we compare someone to a god today, it is wise to ask once whether it is affection or flattery.
ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.





ಪ್ರತಿಕ್ರಿಯೆ ಬರೆಯಿರಿ