ಶಾಸ್ತ್ರೀಯ ವರ್ಷವನ್ನು ಸಮಶೀತೋಷ್ಣ ಯೂರೋಪಿನ ನಾಲ್ಕು ಋತುಗಳ ಬದಲು ತಲಾ ಎರಡು ಮಾಸಗಳ ಆರು ಋತುಗಳಾಗಿ ಹಂಚಲಾಗಿದೆ. ಈ ಜೋಡಣೆ ಉಪಖಂಡಕ್ಕೆ ಹೆಚ್ಚು ಸರಿಹೊಂದುತ್ತದೆ: “ಬೇಸಿಗೆ” ಎಂಬ ಒಂದೇ ಪದ ಮಳೆಗೆ ಮೊದಲಿನ ಒಣ ಸೆಕೆಯನ್ನೂ ಮಳೆಯ ನಂತರದ ತೇವದ ಸೆಕೆಯನ್ನೂ ಒಟ್ಟಿಗೆ ಹೊರಬೇಕಾಗುತ್ತಿತ್ತು, ಆದರೆ ಬದುಕಿ ಅನುಭವಿಸುವವರಿಗೆ ಅವು ತೀರಾ ಬೇರೆ ಬೇರೆ ಸಂಗತಿಗಳು.
- ವಸಂತ, ಚಿಗುರಿನ ಕಾಲ: ಚೈತ್ರ ಮತ್ತು ವೈಶಾಖ, ಸ್ಥೂಲವಾಗಿ ಮಾರ್ಚ್ ನಿಂದ ಮೇ.
- ಗ್ರೀಷ್ಮ, ಬೇಸಿಗೆ: ಜ್ಯೇಷ್ಠ ಮತ್ತು ಆಷಾಢ, ಸ್ಥೂಲವಾಗಿ ಮೇ ಯಿಂದ ಜುಲೈ.
- ವರ್ಷ, ಮಳೆಗಾಲ: ಶ್ರಾವಣ ಮತ್ತು ಭಾದ್ರಪದ, ಸ್ಥೂಲವಾಗಿ ಜುಲೈನಿಂದ ಸೆಪ್ಟೆಂಬರ್.
- ಶರತ್, ಮಳೆ ನಿಂತ ತಿಳಿಗಾಲ: ಆಶ್ವಯುಜ ಮತ್ತು ಕಾರ್ತಿಕ, ಸ್ಥೂಲವಾಗಿ ಸೆಪ್ಟೆಂಬರ್ ನಿಂದ ನವೆಂಬರ್.
- ಹೇಮಂತ, ತಂಪಿನ ಕಾಲ: ಮಾರ್ಗಶಿರ ಮತ್ತು ಪುಷ್ಯ, ಸ್ಥೂಲವಾಗಿ ನವೆಂಬರ್ ನಿಂದ ಜನವರಿ.
- ಶಿಶಿರ, ಚಳಿಗಾಲ: ಮಾಘ ಮತ್ತು ಫಾಲ್ಗುಣ, ಸ್ಥೂಲವಾಗಿ ಜನವರಿಯಿಂದ ಮಾರ್ಚ್.
ಋತುಗಳು ಮತ್ತು ಹಬ್ಬಗಳು
ಹಬ್ಬಗಳ ವರ್ಷ ಋತುಗಳನ್ನು ಎಷ್ಟು ಹತ್ತಿರದಿಂದ ಅನುಸರಿಸುತ್ತದೆಂದರೆ ಆ ಸಂಬಂಧವನ್ನು ಕಾಣದಿರುವುದೇ ಕಷ್ಟ. ಮಳೆಗಾಲ ಮನೆಯೊಳಗೇ ನಡೆಯುವ ವ್ರತಗಳನ್ನು ತರುತ್ತದೆ: ನಾಗ ಪಂಚಮಿ, ವರಮಹಾಲಕ್ಷ್ಮಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ. ಆಕಾಶ ತಿಳಿಯಾದಂತೆ ಶರತ್ ದೊಡ್ಡ ಸಾರ್ವಜನಿಕ ಹಬ್ಬಗಳನ್ನು ತರುತ್ತದೆ: ನವರಾತ್ರಿ, ವಿಜಯದಶಮಿ, ದೀಪಾವಳಿ. ಹೇಮಂತ ಮತ್ತು ಶಿಶಿರ ಸುಗ್ಗಿಯನ್ನೂ ಸೂರ್ಯನ ಉತ್ತರಾಭಿಮುಖ ತಿರುವನ್ನೂ ತರುತ್ತವೆ: ಮಕರ ಸಂಕ್ರಾಂತಿ, ರಥ ಸಪ್ತಮಿ. ವಸಂತ ಯುಗಾದಿಯ ಹೊಸ ವರ್ಷವನ್ನೂ ರಾಮ ನವಮಿಯನ್ನೂ ತರುತ್ತದೆ.
ಆಯುರ್ವೇದದಲ್ಲಿ ಋತು
ಆರು ಋತುಗಳೇ ಋತುಚರ್ಯೆಯ ಚೌಕಟ್ಟು; ಇದು ಶಾಸ್ತ್ರೀಯ ಭಾರತೀಯ ವೈದ್ಯದ ಋತುವಾರು ಪಥ್ಯ, ಮತ್ತು ಪ್ರತಿ ಋತುವಿಗೂ ಬೇರೆ ಆಹಾರ, ಬೇರೆ ನಿದ್ರೆಯ ಕ್ರಮ, ಬೇರೆ ಚಿಕಿತ್ಸೆಗಳನ್ನು ಹೇಳುತ್ತದೆ. ದೋಷಗಳು ಒಂದು ಋತುವಿನಲ್ಲಿ ಸಂಚಯವಾಗಿ, ಮುಂದಿನದರಲ್ಲಿ ಪ್ರಕೋಪಗೊಂಡು, ಮೂರನೆಯದರಲ್ಲಿ ಶಮನವಾಗುತ್ತವೆ ಎಂಬ ನಂಬಿಕೆಯ ಸುತ್ತ ಪಥ್ಯವನ್ನು ಜೋಡಿಸಲಾಗಿದೆ. ಅದರಲ್ಲೂ ಪಂಚಕರ್ಮವನ್ನು ಋತುಗಳ ಸಂಧಿಗೆ ಹೊಂದಿಸಿ ಮಾಡುತ್ತಾರೆ.
ದಿನಾಂಕಗಳ ಬಗ್ಗೆ ಒಂದು ಮಾತು
ಮಾಸಗಳು ಚಾಂದ್ರವಾದ್ದರಿಂದ ಪಂಚಾಂಗದಲ್ಲಿ ಮುದ್ರಿತವಾದ ಋತುಗಳು ಇಂಗ್ಲಿಷ್ ಕ್ಯಾಲೆಂಡರಿಗೆ ಹೋಲಿಸಿದರೆ ಎರಡೂ ಕಡೆ ಒಂದು ಪಕ್ಷದಷ್ಟು ಸರಿಯುತ್ತವೆ, ಮತ್ತು ಅಧಿಕ ಮಾಸವಿರುವ ವರ್ಷದಲ್ಲಿ ಒಂದು ಇಡೀ ಮಾಸದಷ್ಟು. ಸೂರ್ಯ ಕೆಲವು ರಾಶಿಗಳನ್ನು ಪ್ರವೇಶಿಸುವುದಕ್ಕೆ ಕಟ್ಟಿದ ಪ್ರತ್ಯೇಕ ಸೌರ ಋತು ಎಣಿಕೆಯೂ ಇದೆ, ಮತ್ತು ಕೆಲವು ಪಂಚಾಂಗಗಳು ಅದನ್ನೇ ಮುದ್ರಿಸುತ್ತವೆ. ಎರಡೂ ಒಂದೆರಡು ವಾರಗಳ ಒಳಗೆ ಒಪ್ಪುತ್ತವೆ.
ಈ ಜೋಡಣೆಯನ್ನು ಉತ್ತರ ಮತ್ತು ಮಧ್ಯ ಭಾರತದ ಅಕ್ಷಾಂಶಗಳಿಗೆ ಬರೆದಿಟ್ಟದ್ದು. ಕರಾವಳಿ ಕರ್ನಾಟಕದಲ್ಲಿ ಮಳೆ ಜೂನ್ ಆರಂಭದಲ್ಲೇ, ಅಂದರೆ ವರ್ಷ ಋತು ಔಪಚಾರಿಕವಾಗಿ ಶುರುವಾಗುವ ಮೊದಲೇ ಬರುತ್ತದೆ, ಮತ್ತು ತಂಪಿನ ಕಾಲ ಚಳಿಗಾಲ ಎನ್ನುವುದಕ್ಕಿಂತ ತಾಪಮಾನದ ಒಂದೆರಡು ಡಿಗ್ರಿಯ ಪ್ರಶ್ನೆ.
The classical year is divided into six seasons of two months each, rather than the four of temperate Europe. The scheme fits the subcontinent better: a single word for “summer” would have to cover both the dry heat before the monsoon and the wet heat after it, which are quite different things to live through.
- Vasanta, spring: Chaitra and Vaishakha, roughly March to May.
- Grishma, summer: Jyeshtha and Ashadha, roughly May to July.
- Varsha, the rains: Shravana and Bhadrapada, roughly July to September.
- Sharad, autumn: Ashwayuja and Kartika, roughly September to November.
- Hemanta, the cool season: Margashira and Pushya, roughly November to January.
- Shishira, winter: Magha and Phalguna, roughly January to March.
The ritus and the festivals
The festival year follows the seasons closely enough that the connection is hard to miss. The rains bring the domestic vratas kept indoors: Naga Panchami, Varalakshmi, Krishna Janmashtami, Ganesha Chaturthi. Sharad brings the great public festivals as the skies clear: Navaratri, Vijayadashami, Deepavali. Hemanta and Shishira bring the harvest and the sun’s turn north: Makara Sankranti, Ratha Saptami. Vasanta brings the new year at Ugadi and Rama Navami.
Ritu in Ayurveda
The six seasons are the frame for ritucharya, the seasonal regimen of classical Indian medicine, which prescribes different diets, sleep patterns and therapies for each. The doshas are held to accumulate in one season, become aggravated in the next and subside in a third, and the regimen is arranged around that cycle. Panchakarma in particular is timed to the seasonal junctions.
A note on the dates
The months are lunar, so the seasons as printed in a panchanga shift by up to a fortnight either way against the Gregorian calendar, and by a whole month in a year with an intercalary month. There is also a separate solar reckoning of the seasons, tied to the sun’s entry into particular signs, which some almanacs print instead. The two agree to within a couple of weeks.
The scheme was set down for the latitudes of northern and central India. In coastal Karnataka the monsoon arrives in early June, before Varsha formally begins, and the cool season is a matter of degrees rather than winter.