ಶ್ರೀಶಂಕರಾಚಾರ್ಯ ವಿರಚಿತಾ ಶಿವಾನಂದ ಲಹರೀ
ನೂರು ಶ್ಲೋಕಗಳು, ಶಿವನ ಕಡೆಗೆ ಹರಿಯುವ ಮನಸ್ಸಿನ ಅಲೆಗಳು. ಇಲ್ಲಿ ನೂರೂ ಶ್ಲೋಕಗಳನ್ನು ಒಂದೊಂದು ಚೌಕಟ್ಟಿನಲ್ಲಿ ಕೊಟ್ಟಿದ್ದೇವೆ. ಅರ್ಥದ ಪುಟ ಸಿದ್ಧವಿರುವ ಶ್ಲೋಕದ ಚೌಕಟ್ಟಿನ ಮೇಲೆ ಒತ್ತಿದರೆ ಆ ಪುಟ ತೆರೆಯುತ್ತದೆ. ಪಾಠವನ್ನು ಕನ್ನಡ, ದೇವನಾಗರಿ ಮತ್ತು English IAST ಎಂಬ ಮೂರು ಲಿಪಿಗಳಲ್ಲಿ ನೋಡಬಹುದು.
ಫಲಾಭ್ಯಾಂ ಭಕ್ತೇಷು ಪ್ರಕಟಿತಫಲಾಭ್ಯಾಂ ಭವತು ಮೇ ।
ಶಿವಾಭ್ಯಾಮಸ್ತೋಕತ್ರಿಭುವನಶಿವಾಭ್ಯಾಂ ಹೃದಿ ಪುನ-
ರ್ಭವಾಭ್ಯಾಮಾನಂದಸ್ಫುರದನುಭವಾಭ್ಯಾಂ ನತಿರಿಯಮ್ ॥ 1 ॥ಶ್ಲೋಕ 1ರ ಅರ್ಥ ಓದಿ →2ಗಲಂತೀ ಶಂಭೋ ತ್ವಚ್ಚರಿತಸರಿತಃ ಕಿಲ್ಬಿಷರಜೋ
ದಲಂತೀ ಧೀಕುಲ್ಯಾಸರಣಿಷು ಪತಂತೀ ವಿಜಯತಾಮ್ ।
ದಿಶಂತೀ ಸಂಸಾರಭ್ರಮಣಪರಿತಾಪೋಪಶಮನಂ
ವಸಂತೀ ಮಚ್ಚೇತೋಹ್ರದಭುವಿ ಶಿವಾನಂದಲಹರೀ ॥ 2 ॥ಶ್ಲೋಕ 2ರ ಅರ್ಥ ಓದಿ →3ತ್ರಯೀವೇದ್ಯಂ ಹೃದ್ಯಂ ತ್ರಿಪುರಹರಮಾದ್ಯಂ ತ್ರಿನಯನಂ
ಜಟಾಭಾರೋದಾರಂ ಚಲದುರಗಹಾರಂ ಮೃಗಧರಮ್ ।
ಮಹಾದೇವಂ ದೇವಂ ಮಯಿ ಸದಯಭಾವಂ ಪಶುಪತಿಂ
ಚಿದಾಲಂಬಂ ಸಾಂಬಂ ಶಿವಮತಿವಿಡಂಬಂ ಹೃದಿ ಭಜೇ ॥ 3 ॥ಶ್ಲೋಕ 3ರ ಅರ್ಥ ಓದಿ →4ಸಹಸ್ರಂ ವರ್ತಂತೇ ಜಗತಿ ವಿಬುಧಾಃ ಕ್ಷುದ್ರಫಲದಾ
ನ ಮನ್ಯೇ ಸ್ವಪ್ನೇ ವಾ ತದನುಸರಣಂ ತತ್ಕೃತಫಲಮ್ ।
ಹರಿಬ್ರಹ್ಮಾದೀನಾಮಪಿ ನಿಕಟಭಾಜಾಮಸುಲಭಂ
ಚಿರಂ ಯಾಚೇ ಶಂಭೋ ಶಿವ ತವ ಪದಾಂಭೋಜಭಜನಮ್ ॥ 4 ॥ಶ್ಲೋಕ 4ರ ಅರ್ಥ ಓದಿ →5ಸ್ಮೃತೌ ಶಾಸ್ತ್ರೇ ವೈದ್ಯೇ ಶಕುನಕವಿತಾಗಾನಫಣಿತೌ
ಪುರಾಣೇ ಮಂತ್ರೇ ವಾ ಸ್ತುತಿನಟನಹಾಸ್ಯೇಷ್ವಚತುರಃ ।
ಕಥಂ ರಾಜ್ಞಾಂ ಪ್ರೀತಿರ್ಭವತಿ ಮಯಿ ಕೋಽಹಂ ಪಶುಪತೇ
ಪಶುಂ ಮಾಂ ಸರ್ವಜ್ಞ ಪ್ರಥಿತಕೃಪಯಾ ಪಾಲಯ ವಿಭೋ ॥ 5 ॥ಶ್ಲೋಕ 5ರ ಅರ್ಥ ಓದಿ →6ಘಟೋ ವಾ ಮೃತ್ಪಿಂಡೋಽಪ್ಯಣುರಪಿ ಚ ಧೂಮೋಽಗ್ನಿರಚಲಃ
ಪಟೋ ವಾ ತಂತುರ್ವಾ ಪರಿಹರತಿ ಕಿಂ ಘೋರಶಮನಮ್ ।
ವೃಥಾ ಕಂಠಕ್ಷೋಭಂ ವಹಸಿ ತರಸಾ ತರ್ಕವಚಸಾ
ಪದಾಂಭೋಜಂ ಶಂಭೋರ್ಭಜ ಪರಮಸೌಖ್ಯಂ ವ್ರಜ ಸುಧೀಃ ॥ 6 ॥ಶ್ಲೋಕ 6ರ ಅರ್ಥ ಓದಿ →7ಮನಸ್ತೇ ಪಾದಾಬ್ಜೇ ನಿವಸತು ವಚಃ ಸ್ತೋತ್ರಫಣಿತೌ
ಕರೌ ಚಾಭ್ಯರ್ಚಾಯಾಂ ಶ್ರುತಿರಪಿ ಕಥಾಕರ್ಣನವಿಧೌ ।
ತವ ಧ್ಯಾನೇ ಬುದ್ಧಿರ್ನಯನಯುಗಲಂ ಮೂರ್ತಿವಿಭವೇ
ಪರಗ್ರಂಥಾನ್ ಕೈರ್ವಾ ಪರಮಶಿವ ಜಾನೇ ಪರಮತಃ ॥ 7 ॥ಶ್ಲೋಕ 7ರ ಅರ್ಥ ಓದಿ →8ಯಥಾ ಬುದ್ಧಿಃ ಶುಕ್ತೌ ರಜತಮಿತಿ ಕಾಚಾಶ್ಮನಿ ಮಣಿ-
ರ್ಜಲೇ ಪೈಷ್ಟೇ ಕ್ಷೀರಂ ಭವತಿ ಮೃಗತೃಷ್ಣಾಸು ಸಲಿಲಮ್ ।
ತಥಾ ದೇವಭ್ರಾಂತ್ಯಾ ಭಜತಿ ಭವದನ್ಯಂ ಜಡಜನೋ
ಮಹಾದೇವೇಶಂ ತ್ವಾಂ ಮನಸಿ ಚ ನ ಮತ್ವಾ ಪಶುಪತೇ ॥ 8 ॥ಶ್ಲೋಕ 8ರ ಅರ್ಥ ಓದಿ →9ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ ।
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ॥ 9 ॥ಶ್ಲೋಕ 9ರ ಅರ್ಥ ಓದಿ →10ನರತ್ವಂ ದೇವತ್ವಂ ನಗವನಮೃಗತ್ವಂ ಮಶಕತಾ
ಪಶುತ್ವಂ ಕೀಟತ್ವಂ ಭವತು ವಿಹಗತ್ವಾದಿ ಜನನಮ್ ।
ಸದಾ ತ್ವತ್ಪಾದಾಬ್ಜಸ್ಮರಣಪರಮಾನಂದಲಹರೀ-
ವಿಹಾರಾಸಕ್ತಂ ಚೇದ್ಧೃದಯಮಿಹ ಕಿಂ ತೇನ ವಪುಷಾ ॥ 10 ॥ಶ್ಲೋಕ 10ರ ಅರ್ಥ ಓದಿ →
ನರೋ ವಾ ಯಃ ಕಶ್ಚಿದ್ಭವತು ಭವ ಕಿಂ ತೇನ ಭವತಿ ।
ಯದೀಯಂ ಹೃತ್ಪದ್ಮಂ ಯದಿ ಭವದಧೀನಂ ಪಶುಪತೇ
ತದೀಯಸ್ತ್ವಂ ಶಂಭೋ ಭವಸಿ ಭವಭಾರಂ ಚ ವಹಸಿ ॥ 11 ॥
ಜಲೇ ವಾ ವಹ್ನೌ ವಾ ವಸತು ವಸತೇಃ ಕಿಂ ವದ ಫಲಮ್ ।
ಸದಾ ಯಸ್ಯೈವಾಂತಃಕರಣಮಪಿ ಶಂಭೋ ತವ ಪದೇ
ಸ್ಥಿತಂ ಚೇದ್ಯೋಗೋಽಸೌ ಸ ಚ ಪರಮಯೋಗೀ ಸ ಚ ಸುಖೀ ॥ 12 ॥
ಭ್ರಮಂತಂ ಮಾಮಂಧಂ ಪರಮಕೃಪಯಾ ಪಾತುಮುಚಿತಮ್ ।
ಮದನ್ಯಃ ಕೋ ದೀನಸ್ತವ ಕೃಪಣರಕ್ಷಾತಿನಿಪುಣ-
ಸ್ತ್ವದನ್ಯಃ ಕೋ ವಾ ಮೇ ತ್ರಿಜಗತಿ ಶರಣ್ಯಃ ಪಶುಪತೇ ॥ 13 ॥
ಪ್ರಮುಖ್ಯೋಽಹಂ ತೇಷಾಮಪಿ ಕಿಮುತ ಬಂಧುತ್ವಮನಯೋಃ ।
ತ್ವಯೈವ ಕ್ಷಂತವ್ಯಾಃ ಶಿವ ಮದಪರಾಧಾಶ್ಚ ಸಕಲಾಃ
ಪ್ರಯತ್ನಾತ್ಕರ್ತವ್ಯಂ ಮದವನಮಿಯಂ ಬಂಧುಸರಣಿಃ ॥ 14 ॥
ದುರಾಶಾಭೂಯಿಷ್ಠಾಂ ವಿಧಿಲಿಪಿಮಶಕ್ತೋ ಯದಿ ಭವಾನ್ ।
ಶಿರಸ್ತದ್ವೈಧಾತ್ರಂ ನ ನ ಖಲು ಸುವೃತ್ತಂ ಪಶುಪತೇ
ಕಥಂ ವಾ ನಿರ್ಯತ್ನಂ ಕರನಖಮುಖೇನೈವ ಲುಲಿತಮ್ ॥ 15 ॥
ಶ್ಚತುಷ್ಕಂ ಸಂರಕ್ಷ್ಯಂ ಸ ಖಲು ಭುವಿ ದೈನ್ಯಂ ಲಿಖಿತವಾನ್ ।
ವಿಚಾರಃ ಕೋ ವಾ ಮಾಂ ವಿಶದ ಕೃಪಯಾ ಪಾತಿ ಶಿವ ತೇ
ಕಟಾಕ್ಷವ್ಯಾಪಾರಃ ಸ್ವಯಮಪಿ ಚ ದೀನಾವನಪರಃ ॥ 16 ॥
ಪ್ರಸನ್ನೇಽಪಿ ಸ್ವಾಮಿನ್ ಭವದಮಲಪಾದಾಬ್ಜಯುಗಲಮ್ ।
ಕಥಂ ಪಶ್ಯೇಯಂ ಮಾಂ ಸ್ಥಗಯತಿ ನಮಸ್ಸಂಭ್ರಮಜುಷಾಂ
ನಿಲಿಂಪಾನಾಂ ಶ್ರೇಣಿರ್ನಿಜಕನಕಮಾಣಿಕ್ಯಮಕುಟೈಃ ॥ 17 ॥
ವಹಂತಸ್ತ್ವನ್ಮೂಲಾಂ ಪುನರಪಿ ಭಜಂತೇ ಹರಿಮುಖಾಃ ।
ಕಿಯದ್ವಾ ದಾಕ್ಷಿಣ್ಯಂ ತವ ಶಿವ ಮದಾಶಾ ಚ ಕಿಯತೀ
ಕದಾ ವಾ ಮದ್ರಕ್ಷಾಂ ವಹಸಿ ಕರುಣಾಪೂರಿತದೃಶಾ ॥ 18 ॥
ದುರಂತೇ ಸಂಸಾರೇ ದುರಿತನಿಲಯೇ ದುಃಖಜನಕೇ ।
ಮದಾಯಾಸಂ ಕಿಂ ನ ವ್ಯಪನಯಸಿ ಕಸ್ಯೋಪಕೃತಯೇ
ವದೇಯಂ ಪ್ರೀತಿಶ್ಚೇತ್ತವ ಶಿವ ಕೃತಾರ್ಥಾಃ ಖಲು ವಯಮ್ ॥ 19 ॥
ನಟತ್ಯಾಶಾಶಾಖಾಸ್ವಟತಿ ಝಟಿತಿ ಸ್ವೈರಮಭಿತಃ ।
ಕಪಾಲಿನ್ ಭಿಕ್ಷೋ ಮೇ ಹೃದಯಕಪಿಮತ್ಯಂತಚಪಲಂ
ದೃಢಂ ಭಕ್ತ್ಯಾ ಬದ್ಧ್ವಾ ಶಿವ ಭವದಧೀನಂ ಕುರು ವಿಭೋ ॥ 20 ॥
ವಿಚಿತ್ರಾಂ ಪದ್ಮಾಢ್ಯಾಂ ಪ್ರತಿದಿವಸಸನ್ಮಾರ್ಗಘಟಿತಾಮ್ ।
ಸ್ಮರಾರೇ ಮಚ್ಚೇತಃಸ್ಫುಟಪಟಕುಟೀಂ ಪ್ರಾಪ್ಯ ವಿಶದಾಂ
ಜಯ ಸ್ವಾಮಿನ್ ಶಕ್ತ್ಯಾ ಸಹ ಶಿವ ಗಣೈಃ ಸೇವಿತ ವಿಭೋ ॥ 21 ॥
ಪ್ರವೇಶೋದ್ಯುಕ್ತಃ ಸನ್ ಭ್ರಮತಿ ಬಹುಧಾ ತಸ್ಕರಪತೇ ।
ಇಮಂ ಚೇತಶ್ಚೋರಂ ಕಥಮಿಹ ಸಹೇ ಶಂಕರ ವಿಭೋ
ತವಾಧೀನಂ ಕೃತ್ವಾ ಮಯಿ ನಿರಪರಾಧೇ ಕುರು ಕೃಪಾಮ್ ॥ 22 ॥
ವಿಧಿತ್ವಂ ವಿಷ್ಣುತ್ವಂ ದಿಶಸಿ ಖಲು ತಸ್ಯಾಃ ಫಲಮಿತಿ ।
ಪುನಶ್ಚ ತ್ವಾಂ ದ್ರಷ್ಟುಂ ದಿವಿ ಭುವಿ ವಹನ್ ಪಕ್ಷಿಮೃಗತಾ-
ಮದೃಷ್ಟ್ವಾ ತತ್ಖೇದಂ ಕಥಮಿಹ ಸಹೇ ಶಂಕರ ವಿಭೋ ॥ 23 ॥
ರ್ವಸನ್ ಶಂಭೋರಗ್ರೇ ಸ್ಫುಟಘಟಿತಮೂರ್ಧಾಂಜಲಿಪುಟಃ ।
ವಿಭೋ ಸಾಂಬ ಸ್ವಾಮಿನ್ ಪರಮಶಿವ ಪಾಹೀತಿ ನಿಗದನ್
ವಿಧಾತೄಣಾಂ ಕಲ್ಪಾನ್ ಕ್ಷಣಮಿವ ವಿನೇಷ್ಯಾಮಿ ಸುಖತಃ ॥ 24 ॥
ಗಣಾನಾಂ ಕೇಲೀಭಿರ್ಮದಕಲಮಹೋಕ್ಷಸ್ಯ ಕಕುದಿ ।
ಸ್ಥಿತಂ ನೀಲಗ್ರೀವಂ ತ್ರಿನಯನಮುಮಾಶ್ಲಿಷ್ಟವಪುಷಂ
ಕದಾ ತ್ವಾಂ ಪಶ್ಯೇಯಂ ಕರಧೃತಮೃಗಂ ಖಂಡಪರಶುಮ್ ॥ 25 ॥
ಗೃಹೀತ್ವಾ ಹಸ್ತಾಭ್ಯಾಂ ಶಿರಸಿ ನಯನೇ ವಕ್ಷಸಿ ವಹನ್ ।
ಸಮಾಶ್ಲಿಷ್ಯಾಘ್ರಾಯ ಸ್ಫುಟಜಲಜಗಂಧಾನ್ ಪರಿಮಲಾ-
ನಲಭ್ಯಾಂ ಬ್ರಹ್ಮಾದ್ಯೈರ್ಮುದಮನುಭವಿಷ್ಯಾಮಿ ಹೃದಯೇ ॥ 26 ॥
ಗೃಹಸ್ಥೇ ಸ್ವರ್ಭೂಜಾಽಮರಸುರಭಿಚಿಂತಾಮಣಿಗಣೇ ।
ಶಿರಸ್ಸ್ಥೇ ಶೀತಾಂಶೌ ಚರಣಯುಗಲಸ್ಥೇಽಖಿಲಶುಭೇ
ಕಮರ್ಥಂ ದಾಸ್ಯೇಽಹಂ ಭವತು ಭವದರ್ಥಂ ಮಮ ಮನಃ ॥ 27 ॥
ಸಾಮೀಪ್ಯಂ ಶಿವಭಕ್ತಿಧುರ್ಯಜನತಾಸಾಂಗತ್ಯಸಂಭಾಷಣೇ ।
ಸಾಲೋಕ್ಯಂ ಚ ಚರಾಚರಾತ್ಮಕತನುಧ್ಯಾನೇ ಭವಾನೀಪತೇ
ಸಾಯುಜ್ಯಂ ಮಮ ಸಿದ್ಧಮತ್ರ ಭವತಿ ಸ್ವಾಮಿನ್ ಕೃತಾರ್ಥೋಽಸ್ಮ್ಯಹಮ್ ॥ 28 ॥
ತ್ವಾಮೀಶಂ ಶರಣಂ ವ್ರಜಾಮಿ ವಚಸಾ ತ್ವಾಮೇವ ಯಾಚೇ ವಿಭೋ ।
ವೀಕ್ಷಾಂ ಮೇ ದಿಶ ಚಾಕ್ಷುಷೀಂ ಸಕರುಣಾಂ ದಿವ್ಯೈಶ್ಚಿರಂ ಪ್ರಾರ್ಥಿತಾಂ
ಶಂಭೋ ಲೋಕಗುರೋ ಮದೀಯಮನಸಃ ಸೌಖ್ಯೋಪದೇಶಂ ಕುರು ॥ 29 ॥
ಗಂಧೇ ಗಂಧವಹಾತ್ಮತಾಽನ್ನಪಚನೇ ಬರ್ಹಿರ್ಮುಖಾಧ್ಯಕ್ಷತಾ ।
ಪಾತ್ರೇ ಕಾಂಚನಗರ್ಭತಾಸ್ತಿ ಮಯಿ ಚೇದ್ ಬಾಲೇಂದುಚೂಡಾಮಣೇ
ಶುಶ್ರೂಷಾಂ ಕರವಾಣಿ ತೇ ಪಶುಪತೇ ಸ್ವಾಮಿಂಸ್ತ್ರಿಲೋಕೀಗುರೋ ॥ 30 ॥
ಪಶ್ಯನ್ ಕುಕ್ಷಿಗತಾಂಶ್ಚರಾಚರಗಣಾನ್ ಬಾಹ್ಯಸ್ಥಿತಾನ್ ರಕ್ಷಿತುಮ್ ।
ಸರ್ವಾಮರ್ತ್ಯಪಲಾಯನೌಷಧಮತಿಜ್ವಾಲಾಕರಂ ಭೀಕರಂ
ನಿಕ್ಷಿಪ್ತಂ ಗರಲಂ ಗಲೇ ನ ಗಿಲಿತಂ ನೋದ್ಗೀರ್ಣಮೇವ ತ್ವಯಾ ॥ 31 ॥
ದೃಷ್ಟಃ ಕಿಂ ಚ ಕರೇ ಧೃತಃ ಕರತಲೇ ಕಿಂ ಪಕ್ವಜಂಬೂಫಲಮ್ ।
ಜಿಹ್ವಾಯಾಂ ನಿಹಿತಶ್ಚ ಸಿದ್ಧಘುಟಿಕಾ ವಾ ಕಂಠದೇಶೇ ಭೃತಃ
ಕಿಂ ತೇ ನೀಲಮಣಿರ್ವಿಭೂಷಣಮಯಂ ಶಂಭೋ ಮಹಾತ್ಮನ್ ವದ ॥ 32 ॥
ಪೂಜಾ ವಾ ಸ್ಮರಣಂ ಕಥಾಶ್ರವಣಮಪ್ಯಾಲೋಕನಂ ಮಾದೃಶಾಮ್ ।
ಸ್ವಾಮಿನ್ನಸ್ಥಿರದೇವತಾನುಸರಣಾಯಾಸೇನ ಕಿಂ ಲಭ್ಯತೇ
ಕಾ ವಾ ಮುಕ್ತಿರಿತಃ ಕುತೋ ಭವತಿ ಚೇತ್ ಕಿಂ ಪ್ರಾರ್ಥನೀಯಂ ತದಾ ॥ 33 ॥
ದ್ಧೈರ್ಯಂ ಚೇದೃಶಮಾತ್ಮನಃ ಸ್ಥಿತಿರಿಯಂ ಚಾನ್ಯೈಃ ಕಥಂ ಲಭ್ಯತೇ ।
ಭ್ರಶ್ಯದ್ದೇವಗಣಂ ತ್ರಸನ್ಮುನಿಗಣಂ ನಶ್ಯತ್ಪ್ರಪಂಚಂ ಲಯಂ
ಪಶ್ಯನ್ನಿರ್ಭಯ ಏಕ ಏವ ವಿಹರತ್ಯಾನಂದಸಾಂದ್ರೋ ಭವಾನ್ ॥ 34 ॥
ದೃಷ್ಟಾದೃಷ್ಟಮತೋಪದೇಶಕೃತಿನೋ ಬಾಹ್ಯಾಂತರವ್ಯಾಪಿನಃ ।
ಸರ್ವಜ್ಞಸ್ಯ ದಯಾಕರಸ್ಯ ಭವತಃ ಕಿಂ ವೇದಿತವ್ಯಂ ಮಯಾ
ಶಂಭೋ ತ್ವಂ ಪರಮಾಂತರಂಗ ಇತಿ ಮೇ ಚಿತ್ತೇ ಸ್ಮರಾಮ್ಯನ್ವಹಮ್ ॥ 35 ॥
ಕುಂಭೇ ಸಾಂಬ ತವಾಂಘ್ರಿಪಲ್ಲವಯುಗಂ ಸಂಸ್ಥಾಪ್ಯ ಸಂವಿತ್ಫಲಮ್ ।
ಸತ್ತ್ವಂ ಮಂತ್ರಮುದೀರಯನ್ನಿಜಶರೀರಾಗಾರಶುದ್ಧಿಂ ವಹನ್
ಪುಣ್ಯಾಹಂ ಪ್ರಕಟೀಕರೋಮಿ ರುಚಿರಂ ಕಲ್ಯಾಣಮಾಪಾದಯನ್ ॥ 36 ॥
ಮಂಥಾನಂ ದೃಢಭಕ್ತಿರಜ್ಜುಸಹಿತಂ ಕೃತ್ವಾ ಮಥಿತ್ವಾ ತತಃ ।
ಸೋಮಂ ಕಲ್ಪತರುಂ ಸುಪರ್ವಸುರಭಿಂ ಚಿಂತಾಮಣಿಂ ಧೀಮತಾಂ
ನಿತ್ಯಾನಂದಸುಧಾಂ ನಿರಂತರರಮಾಸೌಭಾಗ್ಯಮಾತನ್ವತೇ ॥ 37 ॥
ಸೋಮಃ ಸದ್ಗುಣಸೇವಿತೋ ಮೃಗಧರಃ ಪೂರ್ಣಸ್ತಮೋಮೋಚಕಃ ।
ಚೇತಃ ಪುಷ್ಕರಲಕ್ಷಿತೋ ಭವತಿ ಚೇದಾನಂದಪಾಥೋನಿಧಿಃ
ಪ್ರಾಗಲ್ಭ್ಯೇನ ವಿಜೃಂಭತೇ ಸುಮನಸಾಂ ವೃತ್ತಿಸ್ತದಾ ಜಾಯತೇ ॥ 38 ॥
ಕಾಮಕ್ರೋಧಮದಾದಯೋ ವಿಗಲಿತಾಃ ಕಾಲಾಃ ಸುಖಾವಿಷ್ಕೃತಾಃ ।
ಜ್ಞಾನಾನಂದಮಹೌಷಧಿಃ ಸುಫಲಿತಾ ಕೈವಲ್ಯನಾಥೇ ಸದಾ
ಮಾನ್ಯೇ ಮಾನಸಪುಂಡರೀಕನಗರೇ ರಾಜಾವತಂಸೇ ಸ್ಥಿತೇ ॥ 39 ॥
ರಾನೀತೈಶ್ಚ ಸದಾಶಿವಸ್ಯ ಚರಿತಾಂಭೋರಾಶಿದಿವ್ಯಾಮೃತೈಃ ।
ಹೃತ್ಕೇದಾರಯುತಾಶ್ಚ ಭಕ್ತಿಕಲಮಾಃ ಸಾಫಲ್ಯಮಾತನ್ವತೇ
ದುರ್ಭಿಕ್ಷಾನ್ಮಮ ಸೇವಕಸ್ಯ ಭಗವನ್ ವಿಶ್ವೇಶ ಭೀತಿಃ ಕುತಃ ॥ 40 ॥
ಸ್ತೋತ್ರಧ್ಯಾನನತಿಪ್ರದಕ್ಷಿಣಸಪರ್ಯಾಲೋಕನಾಕರ್ಣನೇ ।
ಜಿಹ್ವಾಚಿತ್ತಶಿರೋಂಘ್ರಿಹಸ್ತನಯನಶ್ರೋತ್ರೈರಹಂ ಪ್ರಾರ್ಥಿತೋ
ಮಾಮಾಜ್ಞಾಪಯ ತನ್ನಿರೂಪಯ ಮುಹುರ್ಮಾಮೇವ ಮಾ ಮೇಽವಚಃ ॥ 41 ॥
ಸ್ತೋಮಶ್ಚಾಪ್ತಬಲಂ ಘನೇಂದ್ರಿಯಚಯೋ ದ್ವಾರಾಣಿ ದೇಹೇ ಸ್ಥಿತಃ ।
ವಿದ್ಯಾವಸ್ತುಸಮೃದ್ಧಿರಿತ್ಯಖಿಲಸಾಮಗ್ರೀಸಮೇತೇ ಸದಾ
ದುರ್ಗಾತಿಪ್ರಿಯದೇವ ಮಾಮಕಮನೋದುರ್ಗೇ ನಿವಾಸಂ ಕುರು ॥ 42 ॥
ಸ್ವಾಮಿನ್ನಾದಿಕಿರಾತ ಮಾಮಕಮನಃಕಾಂತಾರಸೀಮಾಂತರೇ ।
ವರ್ತಂತೇ ಬಹುಶೋ ಮೃಗಾ ಮದಜುಷೋ ಮಾತ್ಸರ್ಯಮೋಹಾದಯ-
ಸ್ತಾನ್ ಹತ್ವಾ ಮೃಗಯಾವಿನೋದರುಚಿತಾಲಾಭಂ ಚ ಸಂಪ್ರಾಪ್ಸ್ಯಸಿ ॥ 43 ॥
ಘನಶಾರ್ದೂಲವಿಖಂಡನೋಽಸ್ತಜಂತುಃ ।
ಗಿರಿಶೋ ವಿಶದಾಕೃತಿಶ್ಚ ಚೇತಃ-
ಕುಹರೇ ಪಂಚಮುಖೋಸ್ತಿ ಮೇ ಕುತೋ ಭೀಃ ॥ 44 ॥
ಸೌಖ್ಯಾಪಾದಿನಿ ಖೇದಭೇದಿನಿ ಸುಧಾಸಾರೈಃ ಫಲೈರ್ದೀಪಿತೇ ।
ಚೇತಃಪಕ್ಷಿಶಿಖಾಮಣೇ ತ್ಯಜ ವೃಥಾಸಂಚಾರಮನ್ಯೈರಲಂ
ನಿತ್ಯಂ ಶಂಕರಪಾದಪದ್ಮಯುಗಲೀನೀಡೇ ವಿಹಾರಂ ಕುರು ॥ 45 ॥
ರಾಧೌತೇಪಿ ಚ ಪದ್ಮರಾಗಲಲಿತೇ ಹಂಸವ್ರಜೈರಾಶ್ರಿತೇ ।
ನಿತ್ಯಂ ಭಕ್ತಿವಧೂಗಣೈಶ್ಚ ರಹಸಿ ಸ್ವೇಚ್ಛಾವಿಹಾರಂ ಕುರು
ಸ್ಥಿತ್ವಾ ಮಾನಸರಾಜಹಂಸ ಗಿರಿಜಾನಾಥಾಂಘ್ರಿಸೌಧಾಂತರೇ ॥ 46 ॥
ಸ್ರಸ್ತಾ ಭಕ್ತಿಲತಾಚ್ಛಟಾ ವಿಲಸಿತಾಃ ಪುಣ್ಯಪ್ರವಾಲಶ್ರಿತಾಃ ।
ದೀಪ್ಯಂತೇ ಗುಣಕೋರಕಾ ಜಪವಚಃಪುಷ್ಪಾಣಿ ಸದ್ವಾಸನಾ
ಜ್ಞಾನಾನಂದಸುಧಾಮರಂದಲಹರೀ ಸಂವಿತ್ಫಲಾಭ್ಯುನ್ನತಿಃ ॥ 47 ॥
ಸ್ವಚ್ಛಂ ಸದ್ದ್ವಿಜಸೇವಿತಂ ಕಲುಷಹೃತ್ಸದ್ವಾಸನಾವಿಷ್ಕೃತಮ್ ।
ಶಂಭುಧ್ಯಾನಸರೋವರಂ ವ್ರಜ ಮನೋ ಹಂಸಾವತಂಸ ಸ್ಥಿರಂ
ಕಿಂ ಕ್ಷುದ್ರಾಶ್ರಯಪಲ್ವಲಭ್ರಮಣಸಂಜಾತಶ್ರಮಂ ಪ್ರಾಪ್ಸ್ಯಸಿ ॥ 48 ॥
ಸ್ಥೈರ್ಯೋಪಘ್ನಮುಪೇತ್ಯ ಭಕ್ತಿಲತಿಕಾ ಶಾಖೋಪಶಾಖಾನ್ವಿತಾ ।
ಉಚ್ಚೈರ್ಮಾನಸಕಾಯಮಾನಪಟಲೀಮಾಕ್ರಮ್ಯ ನಿಷ್ಕಲ್ಮಷಾ
ನಿತ್ಯಾಭೀಷ್ಟಫಲಪ್ರದಾ ಭವತು ಮೇ ಸತ್ಕರ್ಮಸಂವರ್ಧಿತಾ ॥ 49 ॥
ಸಪ್ರೇಮಭ್ರಮರಾಭಿರಾಮಮಸಕೃತ್ ಸದ್ವಾಸನಾಶೋಭಿತಮ್ ।
ಭೋಗೀಂದ್ರಾಭರಣಂ ಸಮಸ್ತಸುಮನಃಪೂಜ್ಯಂ ಗುಣಾವಿಷ್ಕೃತಂ
ಸೇವೇ ಶ್ರೀಗಿರಿಮಲ್ಲಿಕಾರ್ಜುನಮಹಾಲಿಂಗಂ ಶಿವಾಲಿಂಗಿತಮ್ ॥ 50 ॥
ಹ್ಲಾದೋ ನಾದಯುತೋ ಮಹಾಸಿತವಪುಃ ಪಂಚೇಷುಣಾ ಚಾದೃತಃ ।
ಸತ್ಪಕ್ಷಃ ಸುಮನೋವನೇಷು ಸ ಪುನಃ ಸಾಕ್ಷಾನ್ಮದೀಯೇ ಮನೋ-
ರಾಜೀವೇ ಭ್ರಮರಾಧಿಪೋ ವಿಹರತಾಂ ಶ್ರೀಶೈಲವಾಸೀ ವಿಭುಃ ॥ 51 ॥
ವಿದ್ಯಾಸಸ್ಯಫಲೋದಯಾಯ ಸುಮನಃಸಂಸೇವ್ಯಮಿಚ್ಛಾಕೃತಿಮ್ ।
ನೃತ್ಯದ್ಭಕ್ತಮಯೂರಮದ್ರಿನಿಲಯಂ ಚಂಚಜ್ಜಟಾಮಂಡಲಂ
ಶಂಭೋ ವಾಂಛತಿ ನೀಲಕಂಧರ ಸದಾ ತ್ವಾಂ ಮೇ ಮನಶ್ಚಾತಕಃ ॥ 52 ॥
ಽನುಗ್ರಾಹಿಪ್ರಣವೋಪದೇಶನಿನದೈಃ ಕೇಕೀತಿ ಯೋ ಗೀಯತೇ ।
ಶ್ಯಾಮಾಂ ಶೈಲಸಮುದ್ಭವಾಂ ಘನರುಚಿಂ ದೃಷ್ಟ್ವಾ ನಟಂತಂ ಮುದಾ
ವೇದಾಂತೋಪವನೇ ವಿಹಾರರಸಿಕಂ ತಂ ನೀಲಕಂಠಂ ಭಜೇ ॥ 53 ॥
ಧ್ವಾನೋ ವಾರಿದಗರ್ಜಿತಂ ದಿವಿಷದಾಂ ದೃಷ್ಟಿಚ್ಛಟಾ ಚಂಚಲಾ ।
ಭಕ್ತಾನಾಂ ಪರಿತೋಷಬಾಷ್ಪವಿತತಿರ್ವೃಷ್ಟಿರ್ಮಯೂರೀ ಶಿವಾ
ಯಸ್ಮಿನ್ನುಜ್ಜ್ವಲತಾಂಡವಂ ವಿಜಯತೇ ತಂ ನೀಲಕಂಠಂ ಭಜೇ ॥ 54 ॥
ವಿದ್ಯಾನಂದಮಯಾತ್ಮನೇ ತ್ರಿಜಗತಃ ಸಂರಕ್ಷಣೋದ್ಯೋಗಿನೇ ।
ಧ್ಯೇಯಾಯಾಖಿಲಯೋಗಿಭಿಃ ಸುರಗಣೈರ್ಗೇಯಾಯ ಮಾಯಾವಿನೇ
ಸಮ್ಯಕ್ತಾಂಡವಸಂಭ್ರಮಾಯ ಜಟಿನೇ ಸೇಯಂ ನತಿಃ ಶಂಭವೇ ॥ 55 ॥
ಸತ್ಯಾಯಾದಿಕುಟುಂಬಿನೇ ಮುನಿಮನಃ ಪ್ರತ್ಯಕ್ಷಚಿನ್ಮೂರ್ತಯೇ ।
ಮಾಯಾಸೃಷ್ಟಜಗತ್ತ್ರಯಾಯ ಸಕಲಾಮ್ನಾಯಾಂತಸಂಚಾರಿಣೇ
ಸಾಯಂತಾಂಡವಸಂಭ್ರಮಾಯ ಜಟಿನೇ ಸೇಯಂ ನತಿಃ ಶಂಭವೇ ॥ 56 ॥
ವ್ಯರ್ಥಂ ಪರ್ಯಟನಂ ಕರೋಮಿ ಭವತಃ ಸೇವಾಂ ನ ಜಾನೇ ವಿಭೋ ।
ಮಜ್ಜನ್ಮಾಂತರಪುಣ್ಯಪಾಕಬಲತಸ್ತ್ವಂ ಶರ್ವ ಸರ್ವಾಂತರ-
ಸ್ತಿಷ್ಠಸ್ಯೇವ ಹಿ ತೇನ ವಾ ಪಶುಪತೇ ತೇ ರಕ್ಷಣೀಯೋಽಸ್ಮ್ಯಹಮ್ ॥ 57 ॥
ಭಿತ್ತ್ವಾ ಲೋಚನಗೋಚರೋಽಪಿ ಭವತಿ ತ್ವಂ ಕೋಟಿಸೂರ್ಯಪ್ರಭಃ ।
ವೇದ್ಯಃ ಕಿನ್ನ ಭವಸ್ಯಹೋ ಘನತರಂ ಕೀದೃಗ್ಭವೇನ್ಮತ್ತಮ-
ಸ್ತತ್ಸರ್ವಂ ವ್ಯಪನೀಯ ಮೇ ಪಶುಪತೇ ಸಾಕ್ಷಾತ್ ಪ್ರಸನ್ನೋ ಭವ ॥ 58 ॥
ಕೋಕಃ ಕೋಕನದಪ್ರಿಯಂ ಪ್ರತಿದಿನಂ ಚಂದ್ರಂ ಚಕೋರಸ್ತಥಾ ।
ಚೇತೋ ವಾಂಛತಿ ಮಾಮಕಂ ಪಶುಪತೇ ಚಿನ್ಮಾರ್ಗಮೃಗ್ಯಂ ವಿಭೋ
ಗೌರೀನಾಥ ಭವತ್ಪದಾಬ್ಜಯುಗಲಂ ಕೈವಲ್ಯಸೌಖ್ಯಪ್ರದಮ್ ॥ 59 ॥
ಭೀತಃ ಸ್ವಸ್ಥಗೃಹಂ ಗೃಹಸ್ಥಮತಿಥಿರ್ದೀನಃ ಪ್ರಭುಂ ಧಾರ್ಮಿಕಮ್ ।
ದೀಪಂ ಸಂತಮಸಾಕುಲಶ್ಚ ಶಿಖಿನಂ ಶೀತಾವೃತಸ್ತ್ವಂ ತಥಾ
ಚೇತಃ ಸರ್ವಭಯಾಪಹಂ ವ್ರಜ ಸುಖಂ ಶಂಭೋಃ ಪದಾಂಭೋರುಹಮ್ ॥ 60 ॥
ಸಾಧ್ವೀ ನೈಜವಿಭುಂ ಲತಾ ಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಮ್ ।
ಪ್ರಾಪ್ನೋತೀಹ ಯಥಾ ತಥಾ ಪಶುಪತೇಃ ಪಾದಾರವಿಂದದ್ವಯಂ
ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ ॥ 61 ॥
ವಾಚಾಶಂಖಮುಖೇ ಸ್ಥಿತೈಶ್ಚ ಜಠರಾಪೂರ್ತಿಂ ಚರಿತ್ರಾಮೃತೈಃ ।
ರುದ್ರಾಕ್ಷೈರ್ಭಸಿತೇನ ದೇವ ವಪುಷೋ ರಕ್ಷಾಂ ಭವದ್ಭಾವನಾ-
ಪರ್ಯಂಕೇ ವಿನಿವೇಶ್ಯ ಭಕ್ತಿಜನನೀ ಭಕ್ತಾರ್ಭಕಂ ರಕ್ಷತಿ ॥ 62 ॥
ಗಂಡೂಷಾಂಬುನಿಷೇಚನಂ ಪುರರಿಪೋರ್ದಿವ್ಯಾಭಿಷೇಕಾಯತೇ ।
ಕಿಂಚಿದ್ಭಕ್ಷಿತಮಾಂಸಶೇಷಕಬಲಂ ನವ್ಯೋಪಹಾರಾಯತೇ
ಭಕ್ತಿಃ ಕಿಂ ನ ಕರೋತ್ಯಹೋ ವನಚರೋ ಭಕ್ತಾವತಂಸಾಯತೇ ॥ 63 ॥
ಭೂಭೃತ್ಪರ್ಯಟನಂ ನಮತ್ಸುರಶಿರಃಕೋಟೀರಸಂಘರ್ಷಣಮ್ ।
ಕರ್ಮೇದಂ ಮೃದುಲಸ್ಯ ತಾವಕಪದದ್ವಂದ್ವಸ್ಯ ಕಿಂ ವೋಚಿತಂ
ಮಚ್ಚೇತೋಮಣಿಪಾದುಕಾವಿಹರಣಂ ಶಂಭೋ ಸದಾಂಗೀಕುರು ॥ 64 ॥
ಕೋಟೀರೋಜ್ಜ್ವಲರತ್ನದೀಪಕಲಿಕಾನೀರಾಜನಂ ಕುರ್ವತೇ ।
ದೃಷ್ಟ್ವಾ ಮುಕ್ತಿವಧೂಸ್ತನೋತಿ ನಿಭೃತಾಶ್ಲೇಷಂ ಭವಾನೀಪತೇ
ಯಚ್ಚೇತಸ್ತವ ಪಾದಪದ್ಮಭಜನಂ ತಸ್ಯೇಹ ಕಿಂ ದುರ್ಲಭಮ್ ॥ 65 ॥
ಯತ್ಕರ್ಮಾಚರಿತಂ ಮಯಾ ಚ ಭವತಃ ಪ್ರೀತ್ಯೈ ಭವತ್ಯೇವ ತತ್ ।
ಶಂಭೋ ಸ್ವಸ್ಯ ಕುತೂಹಲಸ್ಯ ಕರಣಂ ಮಚ್ಚೇಷ್ಟಿತಂ ನಿಶ್ಚಿತಂ
ತಸ್ಮಾನ್ಮಾಮಕರಕ್ಷಣಂ ಪಶುಪತೇ ಕರ್ತವ್ಯಮೇವ ತ್ವಯಾ ॥ 66 ॥
ಸ್ಫುಟಪುಲಕಾಂಕಿತಚಾರುಭೋಗಭೂಮಿಮ್ ।
ಚಿರಪದಫಲಕಾಂಕ್ಷಿಸೇವ್ಯಮಾನಾಂ
ಪರಮಸದಾಶಿವಭಾವನಾಂ ಪ್ರಪದ್ಯೇ ॥ 67 ॥
ವಿಮಲಭವತ್ಪದಗೋಷ್ಠಮಾವಸಂತೀಮ್ ।
ಸದಯ ಪಶುಪತೇ ಸುಪುಣ್ಯಪಾಕಾಂ
ಮಮ ಪರಿಪಾಲಯ ಭಕ್ತಿಧೇನುಮೇಕಾಮ್ ॥ 68 ॥
ಕುಟಿಲಚರತ್ವಂ ಚ ನಾಸ್ತಿ ಮಯಿ ದೇವ ।
ಅಸ್ತಿ ಯದಿ ರಾಜಮೌಲೇ
ಭವದಾಭರಣಸ್ಯ ನಾಸ್ಮಿ ಕಿಂ ಪಾತ್ರಮ್ ॥ 69 ॥
ವರಿವಸಿತುಂ ಸುಲಭಃ ಪ್ರಸನ್ನಮೂರ್ತಿಃ ।
ಅಗಣಿತಫಲದಾಯಕಃ ಪ್ರಭುರ್ಮೇ
ಜಗದಧಿಕೋ ಹೃದಿ ರಾಜಶೇಖರೋಽಸ್ತಿ ॥ 70 ॥
ಯುಕ್ತೈಃ ಶಿವಸ್ಮರಣಬಾಣಗಣೈರಮೋಘೈಃ ।
ನಿರ್ಜಿತ್ಯ ಕಿಲ್ಬಿಷರಿಪೂನ್ ವಿಜಯೀ ಸುಧೀಂದ್ರಃ
ಸಾನಂದಮಾವಹತಿ ಸುಸ್ಥಿರರಾಜಲಕ್ಷ್ಮೀಮ್ ॥ 71 ॥
ಭಿತ್ತ್ವಾ ಮಹಾಬಲಿಭಿರೀಶ್ವರನಾಮಮಂತ್ರೈಃ ।
ದಿವ್ಯಾಶ್ರಿತಂ ಭುಜಗಭೂಷಣಮುದ್ವಹಂತಿ
ಯೇ ಪಾದಪದ್ಮಮಿಹ ತೇ ಶಿವ ತೇ ಕೃತಾರ್ಥಾಃ ॥ 72 ॥
ಭೂದಾರ ಏವ ಕಿಮತಃ ಸುಮತೇ ಲಭಸ್ವ ।
ಕೇದಾರಮಾಕಲಿತಮುಕ್ತಿಮಹೌಷಧೀನಾಂ
ಪಾದಾರವಿಂದಭಜನಂ ಪರಮೇಶ್ವರಸ್ಯ ॥ 73 ॥
ಭೇದೋದ್ಯುಕ್ತೈರ್ದಿವ್ಯಗಂಧೈರಮಂದೈಃ ।
ಆಶಾಶಾಟೀಕಸ್ಯ ಪಾದಾರವಿಂದಂ
ಚೇತಃಪೇಟೀಂ ವಾಸಿತಾಂ ಮೇ ತನೋತು ॥ 74 ॥
ಸರ್ವೇಂಗಿತಜ್ಞಮನಘಂ ಧ್ರುವಲಕ್ಷಣಾಢ್ಯಮ್ ।
ಚೇತಸ್ತುರಂಗಮಧಿರುಹ್ಯ ಚರ ಸ್ಮರಾರೇ
ನೇತಃ ಸಮಸ್ತಜಗತಾಂ ವೃಷಭಾಧಿರೂಢ ॥ 75 ॥
ಕಾದಂಬಿನೀವ ಕುರುತೇ ಪರಿತೋಷವರ್ಷಮ್ ।
ಸಂಪೂರಿತೋ ಭವತಿ ಯಸ್ಯ ಮನಸ್ತಟಾಕ-
ಸ್ತಜ್ಜನ್ಮಸಸ್ಯಮಖಿಲಂ ಸಫಲಂ ಚ ನಾಽನ್ಯತ್ ॥ 76 ॥
ಸಕ್ತಾ ವಧೂರ್ವಿರಹಿಣೀವ ಸದಾ ಸ್ಮರಂತೀ ।
ಸದ್ಭಾವನಾಸ್ಮರಣದರ್ಶನಕೀರ್ತನಾದಿ
ಸಮ್ಮೋಹಿತೇವ ಶಿವಮಂತ್ರಜಪೇನ ವಿಂತೇ ॥ 77 ॥
ಸವಿನಯಾಂ ಸುಹೃದಂ ಸಮುಪಾಶ್ರಿತಾಮ್ ।
ಮಮ ಸಮುದ್ಧರ ಬುದ್ಧಿಮಿಮಾಂ ಪ್ರಭೋ
ವರಗುಣೇನ ನವೋಢವಧೂಮಿವ ॥ 78 ॥
ಶಂಭೋ ತೇನ ಕಥಂ ಕಠೋರಯಮರಾಡ್ವಕ್ಷಃಕವಾಟಕ್ಷತಿಃ ।
ಅತ್ಯಂತಂ ಮೃದುಲಂ ತ್ವದಂಘ್ರಿಯುಗಲಂ ಹಾ ಮೇ ಮನಶ್ಚಿಂತಯ-
ತ್ಯೇತಲ್ಲೋಚನಗೋಚರಂ ಕುರು ವಿಭೋ ಹಸ್ತೇನ ಸಂವಾಹಯೇ ॥ 79 ॥
ದ್ರಕ್ಷಾಯೈ ಗಿರಿಸೀಮ್ನಿ ಕೋಮಲಪದನ್ಯಾಸಃ ಪುರಾಭ್ಯಾಸಿತಃ ।
ನೋ ಚೇದ್ದಿವ್ಯಗೃಹಾಂತರೇಷು ಸುಮನಸ್ತಲ್ಪೇಷು ವೇದ್ಯಾದಿಷು
ಪ್ರಾಯಃ ಸತ್ಸು ಶಿಲಾತಲೇಷು ನಟನಂ ಶಂಭೋ ಕಿಮರ್ಥಂ ತವ ॥ 80 ॥
ಕಂಚಿದ್ಧ್ಯಾನಸಮಾಧಿಭಿಶ್ಚ ನತಿಭಿಃ ಕಂಚಿತ್ಕಥಾಕರ್ಣನೈಃ ।
ಕಂಚಿತ್ ಕಂಚಿದವೇಕ್ಷಣೈಶ್ಚ ನುತಿಭಿಃ ಕಂಚಿದ್ದಶಾಮೀದೃಶೀಂ
ಯಃ ಪ್ರಾಪ್ನೋತಿ ಮುದಾ ತ್ವದರ್ಪಿತಮನಾ ಜೀವನ್ ಸ ಮುಕ್ತಃ ಖಲು ॥ 81 ॥
ಘೋಣಿತ್ವಂ ಸಖಿತಾ ಮೃದಂಗವಹತಾ ಚೇತ್ಯಾದಿ ರೂಪಂ ದಧೌ ।
ತ್ವತ್ಪಾದೇ ನಯನಾರ್ಪಣಂ ಚ ಕೃತವಾಂಸ್ತ್ವದ್ದೇಹಭಾಗೋ ಹರಿಃ
ಪೂಜ್ಯಾತ್ಪೂಜ್ಯತರಃ ಸ ಏವ ಹಿ ನ ಚೇತ್ ಕೋ ವಾ ತದನ್ಯೋಽಧಿಕಃ ॥ 82 ॥
ನ ಭವತಿ ಸುಖಲೇಶಃ ಸಂಶಯೋ ನಾಸ್ತಿ ತತ್ರ ।
ಅಜನಿಮಮೃತರೂಪಂ ಸಾಂಬಮೀಶಂ ಭಜಂತೇ
ಯ ಇಹ ಪರಮಸೌಖ್ಯಂ ತೇ ಹಿ ಧನ್ಯಾ ಲಭಂತೇ ॥ 83 ॥
ಭವ ಮಮ ಗುಣಧುರ್ಯಾಂ ಬುದ್ಧಿಕನ್ಯಾಂ ಪ್ರದಾಸ್ಯೇ ।
ಸಕಲಭುವನಬಂಧೋ ಸಚ್ಚಿದಾನಂದಸಿಂಧೋ
ಸದಯ ಹೃದಯಗೇಹೇ ಸರ್ವದಾ ಸಂವಸ ತ್ವಮ್ ॥ 84 ॥
ನ ಚ ವನಮೃಗಯಾಯಾಂ ನೈವ ಲುಬ್ಧಃ ಪ್ರವೀಣಃ ।
ಅಶನಕುಸುಮಭೂಷಾವಸ್ತ್ರಮುಖ್ಯಾಂ ಸಪರ್ಯಾಂ
ಕಥಯ ಕಥಮಹಂ ತೇ ಕಲ್ಪಯಾನೀಂದುಮೌಲೇ ॥ 85 ॥
ಪಕ್ಷಿತ್ವಂ ನ ಚ ವಾ ಕಿಟಿತ್ವಮಪಿ ನ ಪ್ರಾಪ್ತಂ ಮಯಾ ದುರ್ಲಭಮ್ ।
ಜಾನೇ ಮಸ್ತಕಮಂಘ್ರಿಪಲ್ಲವಮುಮಾಜಾನೇ ನ ತೇಽಹಂ ವಿಭೋ
ನ ಜ್ಞಾತಂ ಹಿ ಪಿತಾಮಹೇನ ಹರಿಣಾ ತತ್ತ್ವೇನ ತದ್ರೂಪಿಣಾ ॥ 86 ॥
ವಸನಂ ಚರ್ಮ ಚ ವಾಹನಂ ಮಹೋಕ್ಷಃ ।
ಮಮ ದಾಸ್ಯಸಿ ಕಿಂ ಕಿಮಸ್ತಿ ಶಂಭೋ
ತವ ಪಾದಾಂಬುಜಭಕ್ತಿಮೇವ ದೇಹಿ ॥ 87 ॥
ಕರಸ್ಥಲಾಧಃಕೃತಪರ್ವತಾಧಿಪಃ ।
ಭವಾನಿ ತೇ ಲಂಘಿತಪದ್ಮಸಂಭವ-
ಸ್ತದಾ ಶಿವಾರ್ಚಾಸ್ತವಭಾವನಕ್ಷಮಃ ॥ 88 ॥
ವಿಧಿಭಿರ್ಧ್ಯಾನಸಮಾಧಿಭಿರ್ನ ತುಷ್ಟಃ ।
ಧನುಷಾ ಮುಸಲೇನ ಚಾಶ್ಮಭಿರ್ವಾ
ವದ ತೇ ಪ್ರೀತಿಕರಂ ತಥಾ ಕರೋಮಿ ॥ 89 ॥
ರಹಮುದ್ಯೋಗವಿಧಾಸು ತೇಽಪ್ರಸಕ್ತಃ ।
ಮನಸಾಕೃತಿಮೀಶ್ವರಸ್ಯ ಸೇವೇ
ಶಿರಸಾ ಚೈವ ಸದಾಶಿವಂ ನಮಾಮಿ ॥ 90 ॥
ದ್ವಿದ್ಯಾ ಹೃದ್ಯಾ ಹೃದ್ಗತಾ ತ್ವತ್ಪ್ರಸಾದಾತ್ ।
ಸೇವೇ ನಿತ್ಯಂ ಶ್ರೀಕರಂ ತ್ವತ್ಪದಾಬ್ಜಂ
ಭಾವೇ ಮುಕ್ತೇರ್ಭಾಜನಂ ರಾಜಮೌಲೇ ॥ 91 ॥
ದೌರ್ಭಾಗ್ಯದುಃಖದುರಹಂಕೃತಿದುರ್ವಚಾಂಸಿ ।
ಸಾರಂ ತ್ವದೀಯಚರಿತಂ ನಿತರಾಂ ಪಿಬಂತಂ
ಗೌರೀಶ ಮಾಮಿಹ ಸಮುದ್ಧರ ಸತ್ಕಟಾಕ್ಷೈಃ ॥ 92 ॥
ಕೋಮಲಘನಕಂಧರೇ ಮಹಾಮಹಸಿ ।
ಸ್ವಾಮಿನಿ ಗಿರಿಜಾನಾಥೇ
ಮಾಮಕಹೃದಯಂ ನಿರಂತರಂ ರಮತಾಮ್ ॥ 93 ॥
ತಾವೇವ ಕರೌ ಸ ಏವ ಕೃತಕೃತ್ಯಃ ।
ಯಾ ಯೇ ಯೌ ಯೋ ಭರ್ಗಂ
ವದತೀಕ್ಷೇತೇ ಸದಾರ್ಚತಃ ಸ್ಮರತಿ ॥ 94 ॥
ವತಿಕಠಿನಂ ತೇ ಮನೋ ಭವಾನೀಶ ।
ಇತಿ ವಿಚಿಕಿತ್ಸಾಂ ಸಂತ್ಯಜ
ಶಿವ ಕಥಮಾಸೀದ್ಗಿರೌ ತಥಾ ವೇಶಃ ॥ 95 ॥
ರಭಸಾದಾಕೃಷ್ಯ ಭಕ್ತಿಶೃಂಖಲಯಾ ।
ಪುರಹರ ಚರಣಾಲಾನೇ
ಹೃದಯಮದೇಭಂ ಬಧಾನ ಚಿದ್ಯಂತ್ರೈಃ ॥ 96 ॥
ಮದವಾನೇಷ ಮನಃಕರೀ ಗರೀಯಾನ್ ।
ಪರಿಗೃಹ್ಯ ನಯೇನ ಭಕ್ತಿರಜ್ಜ್ವಾ
ಪರಮ ಸ್ಥಾಣುಪದಂ ದೃಢಂ ನಯಾಮುಮ್ ॥ 97 ॥
ಸದ್ಭಿಃ ಸಂಸ್ತೂಯಮಾನಾಂ ಸರಸಗುಣಯುತಾಂ ಲಕ್ಷಿತಾಂ ಲಕ್ಷಣಾಢ್ಯಾಮ್ ।
ಉದ್ಯದ್ಭೂಷಾವಿಶೇಷಾಮುಪಗತವಿನಯಾಂ ದ್ಯೋತಮಾನಾರ್ಥರೇಖಾಂ
ಕಲ್ಯಾಣೀಂ ದೇವ ಗೌರೀಪ್ರಿಯ ಮಮ ಕವಿತಾಕನ್ಯಕಾಂ ತ್ವಂ ಗೃಹಾಣ ॥ 98 ॥
ಗತೌ ತಿರ್ಯಗ್ರೂಪಂ ತವ ಪದಶಿರೋದರ್ಶನಧಿಯಾ ।
ಹರಿಬ್ರಹ್ಮಾಣೌ ತೌ ದಿವಿ ಭುವಿ ಚರಂತೌ ಶ್ರಮಯುತೌ
ಕಥಂ ಶಂಭೋ ಸ್ವಾಮಿನ್ ಕಥಯ ಮಮ ವೇದ್ಯೋಽಸಿ ಪುರತಃ ॥ 99 ॥
ಸ್ತುತ್ಯಾನಾಂ ಗಣನಾಪ್ರಸಂಗಸಮಯೇ ತ್ವಾಮಗ್ರಗಣ್ಯಂ ವಿದುಃ ।
ಮಾಹಾತ್ಮ್ಯಾಗ್ರವಿಚಾರಣಪ್ರಕರಣೇ ಧಾನಾತುಷಸ್ತೋಮವ-
ದ್ಧೂತಾಸ್ತ್ವಾಂ ವಿದುರುತ್ತಮೋತ್ತಮಫಲಂ ಶಂಭೋ ಭವತ್ಸೇವಕಾಃ ॥ 100 ॥
॥ ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಾ ಶಿವಾನಂದಲಹರೀ ಸಂಪೂರ್ಣಾ ॥
ಶಿವಾನಂದ ಲಹರೀಯ ಬಗ್ಗೆ
ಶಿವಾನಂದ ಲಹರೀ ಎಂದರೆ ಶಿವಾನಂದದ ಅಲೆ. ಶಿವಾನಂದ ಎಂಬ ಪದವನ್ನು ಶಿವನಿಂದ ಹುಟ್ಟುವ ಆನಂದ ಎಂದೂ, ಶಿವನೇ ಆದ ಆನಂದ ಎಂದೂ ಅರ್ಥೈಸಬಹುದು. ಇದೊಂದು ನೂರು ಶ್ಲೋಕಗಳ ಭಕ್ತಿಸ್ತೋತ್ರ. ಇದನ್ನು ರಚಿಸಿದವರು ಆದಿ ಶಂಕರಾಚಾರ್ಯರು ಎಂದು ಪರಂಪರೆ ಹೇಳುತ್ತದೆ. ಆದರೆ ಶಂಕರರ ಹೆಸರಿನಲ್ಲಿರುವ ಹಲವು ಸ್ತೋತ್ರಗಳ ಕರ್ತೃತ್ವದ ಬಗ್ಗೆ ಆಧುನಿಕ ವಿದ್ವಾಂಸರಲ್ಲಿ ಒಮ್ಮತವಿಲ್ಲ ಎಂಬುದನ್ನೂ ಹೇಳಬೇಕು.
ಈ ತಾಣದಲ್ಲಿ ಈಗಾಗಲೇ ಇರುವ ಸೌಂದರ್ಯ ಲಹರೀಗೆ ಇದು ಜೊತೆಕೃತಿಯಂತೆ ಕಾಣುತ್ತದೆ. ಅಲ್ಲಿ ಜಗನ್ಮಾತೆಯ ರೂಪ ಮತ್ತು ಶಕ್ತಿಯ ವರ್ಣನೆ ಮುಖ್ಯ. ಇಲ್ಲಿ ಶಿವನನ್ನು ಹುಡುಕುವ ಭಕ್ತನ ಮನಸ್ಸೇ ಮುಖ್ಯ ವಿಷಯ. ಅದರ ಚಂಚಲತೆ, ಅದರ ಹಂಬಲ, ತನ್ನ ಕೊರತೆಗಳ ಬಗ್ಗೆ ಅದರ ಪ್ರಾಮಾಣಿಕ ಒಪ್ಪಿಗೆ ಇವೆಲ್ಲವೂ ಶ್ಲೋಕಗಳಲ್ಲಿ ಬರುತ್ತವೆ. ಮನಸ್ಸನ್ನು ಕೋತಿಗೆ, ಮದಿಸಿದ ಆನೆಗೆ ಹೋಲಿಸುವ ಶ್ಲೋಕಗಳೂ ಇಲ್ಲಿವೆ.
ರಚನೆ ಮತ್ತು ಛಂದಸ್ಸು
ಮೊದಲ ಇಪ್ಪತ್ತೇಳು ಶ್ಲೋಕಗಳು ಶಿಖರಿಣೀ ಛಂದಸ್ಸಿನಲ್ಲಿವೆ. ಸೌಂದರ್ಯ ಲಹರೀಯ ಛಂದಸ್ಸೂ ಇದೇ: ಪ್ರತಿ ಪಾದಕ್ಕೆ ಹದಿನೇಳು ಅಕ್ಷರಗಳು. ಇಪ್ಪತ್ತೆಂಟನೆಯ ಶ್ಲೋಕದಿಂದ ಮುಂದೆ ಹೆಚ್ಚಿನವು ಪ್ರತಿ ಪಾದಕ್ಕೆ ಹತ್ತೊಂಬತ್ತು ಅಕ್ಷರಗಳಿರುವ ಶಾರ್ದೂಲವಿಕ್ರೀಡಿತದಲ್ಲಿವೆ. ಕೊನೆಯ ಮೂವತ್ತರಷ್ಟು ಶ್ಲೋಕಗಳಲ್ಲಿ ಛಂದಸ್ಸು ಆಗಾಗ ಬದಲಾಗುತ್ತದೆ. ವಸಂತತಿಲಕ, ಮಾಲಿನೀ, ಆರ್ಯಾ ಮುಂತಾದ ಚಿಕ್ಕ ಛಂದಸ್ಸುಗಳು ಅಲ್ಲಿ ಕಾಣುತ್ತವೆ. ಪ್ರತಿ ಶ್ಲೋಕದ ಛಂದಸ್ಸನ್ನು ಅದರ ಅರ್ಥದ ಪುಟದ ವಿವರಣೆಯಲ್ಲಿ ತಿಳಿಸಿದ್ದೇವೆ.
ಶ್ಲೇಷ, ಅಂದರೆ ಒಂದೇ ಪದಕ್ಕೆ ಎರಡು ಅರ್ಥ ಬರುವಂತೆ ಬರೆಯುವ ಕಲೆ, ಈ ಕೃತಿಯ ಉದ್ದಕ್ಕೂ ಇದೆ. ಒಂದು ಚಿತ್ರವನ್ನು ಇಡೀ ಶ್ಲೋಕದುದ್ದಕ್ಕೂ ಬೆಳೆಸುವುದೂ ಇಲ್ಲಿನ ವಿಶೇಷ. ಹಾಗಾಗಿ ಅರ್ಥದ ಪುಟಗಳಲ್ಲಿ ಮುಖ್ಯ ಅರ್ಥವನ್ನು ಸಂಪೂರ್ಣ ಅರ್ಥದಲ್ಲಿ ಕೊಟ್ಟು, ಎರಡನೆಯ ಅರ್ಥವನ್ನು ವಿವರಣೆಯಲ್ಲಿ ಬಿಡಿಸಿದ್ದೇವೆ.
ಭಕ್ತಿಯ ಚಿತ್ರಗಳು
ಈ ಕೃತಿಯಲ್ಲಿ ಭಕ್ತಿಗೆ ಹಲವು ರೂಪಗಳು. ಎರಡನೆಯ ಶ್ಲೋಕದಲ್ಲಿ ಶಿವನ ಕಥೆಗಳು ನದಿಯಾಗಿ ಹರಿದು, ಬುದ್ಧಿಯ ಕಾಲುವೆಗಳ ಮೂಲಕ ಮನಸ್ಸಿನ ಸರೋವರಕ್ಕೆ ಇಳಿಯುತ್ತವೆ. ಅಲ್ಲಿ ನೆಲೆಸುವ ಅಲೆಯೇ ಶಿವಾನಂದ ಲಹರೀ. ಕೃತಿಯ ಹೆಸರು ಹುಟ್ಟುವುದೇ ಈ ಚಿತ್ರದಿಂದ. ಅರವತ್ತೆರಡನೆಯ ಶ್ಲೋಕದಲ್ಲಿ ಭಕ್ತಿ ತಾಯಿ. ಭಕ್ತನೆಂಬ ಮಗುವಿಗೆ ಅವಳು ಶಿವನ ಕಥೆಯ ಅಮೃತವನ್ನು ಮಾತೆಂಬ ಶಂಖದಿಂದ ಕುಡಿಸುತ್ತಾಳೆ, ರುದ್ರಾಕ್ಷಿ ಮತ್ತು ಭಸ್ಮದಿಂದ ರಕ್ಷೆ ಕಟ್ಟುತ್ತಾಳೆ, ಶಿವಧ್ಯಾನದ ಮಂಚದಲ್ಲಿ ಮಲಗಿಸುತ್ತಾಳೆ.
ಅರವತ್ತೆಂಟನೆಯ ಶ್ಲೋಕದಲ್ಲಿ ಭಕ್ತಿ ಒಂದು ಹಸು. ಶಿವನ ಪಾದಗಳೆಂಬ ಕೊಟ್ಟಿಗೆಯಲ್ಲಿ ಇರುವ ಅದು ಮತ್ತೆ ಮತ್ತೆ ಆನಂದದ ಅಮೃತವನ್ನು ಕರೆಯುತ್ತದೆ. ಶಿವನನ್ನು ಪಶುಪತಿ, ಅಂದರೆ ಪಶುಗಳ ಒಡೆಯ, ಎಂದು ಕರೆದು ತನ್ನ ಈ ಒಂದು ಹಸುವನ್ನು ಕಾಪಾಡು ಎಂದು ಭಕ್ತ ಬೇಡುತ್ತಾನೆ. ಎಪ್ಪತ್ತೇಳನೆಯ ಶ್ಲೋಕದಲ್ಲಿ ಶಿವನ ಪಾದಕ್ಕೆ ಅಂಟಿದ ಬುದ್ಧಿ ಗಂಡನಿಂದ ದೂರವಿರುವ ಹೆಂಡತಿಯಂತೆ ಸದಾ ಅವನನ್ನೇ ನೆನೆಯುತ್ತದೆ. ಎಂಬತ್ತನಾಲ್ಕನೆಯ ಶ್ಲೋಕದಲ್ಲಿ ಭಕ್ತ ತನ್ನ ಬುದ್ಧಿಯೆಂಬ ಕನ್ಯೆಯನ್ನೇ ಶಿವನಿಗೆ ಮದುವೆ ಮಾಡಿಕೊಡುತ್ತೇನೆ ಎನ್ನುತ್ತಾನೆ.
ಅರವತ್ತೊಂದನೆಯ ಶ್ಲೋಕ ಭಕ್ತಿ ಎಂದರೇನು ಎಂಬುದಕ್ಕೆ ಐದು ಹೋಲಿಕೆಗಳ ವ್ಯಾಖ್ಯೆ ಕೊಡುತ್ತದೆ. ಅಂಕೋಲ ಮರದ ಬೀಜಗಳು ಮತ್ತೆ ತಾಯಿಮರವನ್ನೇ ಸೇರುತ್ತವೆ ಎಂಬುದು ಹಳೆಯ ನಂಬಿಕೆ. ಸೂಜಿ ಅಯಸ್ಕಾಂತವನ್ನು ಸೇರುತ್ತದೆ, ಪತಿವ್ರತೆ ಪತಿಯನ್ನು ಸೇರುತ್ತಾಳೆ, ಬಳ್ಳಿ ಮರವನ್ನು ಸೇರುತ್ತದೆ, ನದಿ ಸಮುದ್ರವನ್ನು ಸೇರುತ್ತದೆ. ಹಾಗೆಯೇ ಮನಸ್ಸಿನ ವೃತ್ತಿ ಶಿವನ ಪಾದಗಳನ್ನು ಸೇರಿ ಸದಾ ಅಲ್ಲೇ ನಿಲ್ಲುವುದಕ್ಕೆ ಭಕ್ತಿ ಎಂದು ಹೆಸರು.
ಅರವತ್ತಮೂರನೆಯ ಶ್ಲೋಕ ಆ ಭಕ್ತಿಗೆ ಒಂದು ಉದಾಹರಣೆ ಕೊಡುತ್ತದೆ. ದಾರಿ ಸವೆಸಿದ ಚಪ್ಪಲಿ ಶಿವನ ಮೈಗೆ ಕುಂಚವಾಗುತ್ತದೆ, ಬಾಯಲ್ಲಿ ತಂದ ನೀರು ಅಭಿಷೇಕವಾಗುತ್ತದೆ, ರುಚಿ ನೋಡಿದ ಮಾಂಸದ ತುತ್ತು ನೈವೇದ್ಯವಾಗುತ್ತದೆ, ಕಾಡಿನ ಬೇಡ ಭಕ್ತರ ಶಿರೋಮಣಿಯಾಗುತ್ತಾನೆ. ಶ್ಲೋಕ ಹೆಸರು ಹೇಳುವುದಿಲ್ಲ. ಆದರೆ ಪರಂಪರೆ ಇದನ್ನು ಬೇಡರ ಕಣ್ಣಪ್ಪನ ಕಥೆಗೆ ಜೋಡಿಸುತ್ತದೆ. ಪೂಜೆಯ ನಿಯಮಗಳನ್ನು ಅರಿಯದ ಆ ಭಕ್ತನ ಪ್ರೀತಿಯನ್ನು ಶಿವ ಒಪ್ಪಿಕೊಂಡ ಕಥೆ ಕನ್ನಡಿಗರಿಗೆ ಬಹಳ ಪರಿಚಿತ.
ಈ ಪುಟದ ಬಗ್ಗೆ
ಇಲ್ಲಿನ ಪಾಠ sanskritdocuments.org ಆವೃತ್ತಿಯನ್ನು ಅನುಸರಿಸುತ್ತದೆ. ಅದನ್ನು stotranidhi.com ಪಾಠದೊಡನೆ ಹೋಲಿಸಿ ನೋಡಿದ್ದೇವೆ. ಐವತ್ತೇಳನೆಯ ಶ್ಲೋಕದಲ್ಲಿ ಸ್ವೋದರಪೂರಣಾಯ ಎಂದು ಮುದ್ರಿಸಿದ್ದೇವೆ. ಇನ್ನೊಂದು ಪಾಠದಲ್ಲಿ ಸ್ವೋದರಪೋಷಣಾಯ ಎಂದಿದೆ. ತೊಂಬತ್ತೈದನೆಯ ಶ್ಲೋಕದಲ್ಲಿ ವೇಶಃ ಎಂದು ಕೊಟ್ಟಿದ್ದೇವೆ. ವೇಶ್ಮಃ ಎಂಬ ಪಾಠವೂ ಇದೆ ಎಂಬುದನ್ನು ಗಮನಿಸಿದ್ದೇವೆ. ಮೂವತ್ತು, ಮೂವತ್ತೊಂದು, ಎಂಬತ್ತೆರಡು ಮತ್ತು ಎಂಬತ್ತೆಂಟನೆಯ ಶ್ಲೋಕಗಳಲ್ಲಿ ಸ್ವಾಮಿಂಸ್ತ್ರಿಲೋಕೀಗುರೋ ಮುಂತಾದ ಸಂಧಿಯ ನಿಯತ ರೂಪಗಳನ್ನು ಅನುಸರಿಸಿದ್ದೇವೆ.
ಮೊದಲ ಹತ್ತು ಶ್ಲೋಕಗಳಿಗೆ ಪದಶಃ ಅರ್ಥ, ಕನ್ನಡ ಮತ್ತು ಇಂಗ್ಲಿಷ್ ಸಂಪೂರ್ಣ ಅರ್ಥ, ವಿವರಣೆ ಮತ್ತು ಇಂದಿನ ಬದುಕಿಗೆ ಎಂಬ ಎರಡು ಚೌಕಗಳಿರುವ ಪುಟಗಳು ಸಿದ್ಧವಾಗಿವೆ. ಉಳಿದ ಶ್ಲೋಕಗಳ ಪುಟಗಳು ಒಂದೊಂದಾಗಿ ಸೇರುತ್ತಿವೆ.
ಆಧಾರ: ಹಲವು ಮೂಲಗಳು.
ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.





ಪ್ರತಿಕ್ರಿಯೆ ಬರೆಯಿರಿ