ಭಗವದ್ಗೀತೆ 3.7 ಅರ್ಥ: ಯಸ್ತ್ವಿಂದ್ರಿಯಾಣಿ ಮನಸಾ

ಭಗವದ್ಗೀತೆಯ ಮೂರನೆಯ ಅಧ್ಯಾಯದ ಏಳನೆಯ ಶ್ಲೋಕದ ಪದಶಃ ಅರ್ಥ, ಕನ್ನಡ ಮತ್ತು ಇಂಗ್ಲಿಷ್ ವಿವರಣೆಯೊಂದಿಗೆ.

ಶ್ಲೋಕ 3.7, ಭಗವದ್ಗೀತೆ, ಜೀವನ ಸೂತ್ರ

ಭಗವದ್ಗೀತೆಯ ಮೂರನೆಯ ಅಧ್ಯಾಯದ ಎಲ್ಲ ಶ್ಲೋಕಗಳು ಇಲ್ಲಿವೆ: ಕರ್ಮ ಯೋಗ.

All verses of Chapter 3 in Kannada, Sanskrit or English IAST.

ಶ್ಲೋಕ (ಕನ್ನಡ)

ಯಸ್ತ್ವಿಂದ್ರಿಯಾಣಿ ಮನಸಾ ನಿಯಮ್ಯಾರಭತೇಽರ್ಜುನ।
ಕರ್ಮೇಂದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇ ॥ 7 ॥

ಶ್ಲೋಕ (ದೇವನಾಗರಿ)

यस्त्विन्द्रियाणि मनसा नियम्यारभतेऽर्जुन।
कर्मेन्द्रियैः कर्मयोगमसक्तः स विशिष्यते ॥ 7 ॥

ಶ್ಲೋಕ (English IAST)

yastvindriyāṇi manasā niyamyārabhate’rjuna|
karmendriyaiḥ karmayogamasaktaḥ sa viśiṣyate || 7 ||

ಪದಶಃ ಅರ್ಥ

  • ಯಃ ತು (यः तु, yaḥ tu) = ಆದರೆ ಯಾರು (but he who)
  • ಇಂದ್ರಿಯಾಣಿ (इन्द्रियाणि, indriyāṇi) = ಇಂದ್ರಿಯಗಳನ್ನು (the senses)
  • ಮನಸಾ ನಿಯಮ್ಯ (मनसा नियम्य, manasā niyamya) = ಮನಸ್ಸಿನಿಂದ ನಿಯಂತ್ರಿಸಿ (having restrained with the mind)
  • ಆರಭತೇ (आरभते, ārabhate) = ಆರಂಭಿಸುತ್ತಾನೋ (begins)
  • ಅರ್ಜುನ (अर्जुन, arjuna) = ಓ ಅರ್ಜುನ (O Arjuna)
  • ಕರ್ಮೇಂದ್ರಿಯೈಃ (कर्मेन्द्रियैः, karmendriyaiḥ) = ಕರ್ಮೇಂದ್ರಿಯಗಳಿಂದ (with the organs of action)
  • ಕರ್ಮಯೋಗಮ್ (कर्मयोगम्, karmayogam) = ಕರ್ಮಯೋಗವನ್ನು (karma yoga)
  • ಅಸಕ್ತಃ (असक्तः, asaktaḥ) = ಅಂಟಿಲ್ಲದವನಾಗಿ (unattached)
  • ಸಃ ವಿಶಿಷ್ಯತೇ (सः विशिष्यते, saḥ viśiṣyate) = ಅವನು ಶ್ರೇಷ್ಠನಾಗುತ್ತಾನೆ (he excels)

ಸಂಪೂರ್ಣ ಅರ್ಥ (ಕನ್ನಡ)

ಆದರೆ ಅರ್ಜುನ, ಯಾರು ಮನಸ್ಸಿನಿಂದ ಇಂದ್ರಿಯಗಳನ್ನು ನಿಯಂತ್ರಿಸಿ, ಅಂಟಿಲ್ಲದವನಾಗಿ ಕರ್ಮೇಂದ್ರಿಯಗಳಿಂದ ಕರ್ಮಯೋಗವನ್ನು ಆರಂಭಿಸುತ್ತಾನೋ, ಅವನು ಶ್ರೇಷ್ಠನಾಗುತ್ತಾನೆ.

ಸಂಪೂರ್ಣ ಅರ್ಥ (ಇಂಗ್ಲಿಷ್)

But Arjuna, the one who restrains the senses with the mind and, unattached, sets out on karma yoga with the organs of action, he excels.

ಚಿಂತನ (Reflection)

ಇಲ್ಲಿ ಹೊಗಳಿಕೆ ಯಾರಿಗೆ? ಶಂಕರರು ಅವನನ್ನು ಎರಡು ಬಗೆಯಲ್ಲಿ ಗುರುತಿಸುತ್ತಾರೆ: ಕರ್ಮಕ್ಕೆ ಅಧಿಕಾರ ಉಳ್ಳವನು, ತಿಳಿಯದವನು. ಅವನು ಜ್ಞಾನೇಂದ್ರಿಯಗಳನ್ನು ಮನಸ್ಸಿನಿಂದ ಹಿಡಿತದಲ್ಲಿಟ್ಟು, ಮಾತು, ಕೈ ಮೊದಲಾದ ಕರ್ಮೇಂದ್ರಿಯಗಳಿಂದ ಶುರುಮಾಡುತ್ತಾನೆ. ಏನನ್ನು ಶುರುಮಾಡುತ್ತಾನೆ? ಕರ್ಮಯೋಗವನ್ನು. ‘ಅಸಕ್ತ’ ಎಂದರೆ ಫಲದ ಮೇಲೆ ಕಣ್ಣಿಡದವನು ಎಂದು ಶಂಕರರು ಓದುತ್ತಾರೆ. ಇಂಥವನು ಆ ಇನ್ನೊಬ್ಬನಿಗಿಂತ, ಅಂದರೆ ಹಿಂದಿನ ಶ್ಲೋಕದ ಸುಳ್ಳು ನಡತೆಯವನಿಗಿಂತ, ಮೇಲು ಎನ್ನುತ್ತಾರೆ ಅವರು.

Who is the man praised here? Shankara marks him in two ways: qualified for action, and unknowing. He holds the senses of knowledge in check with the mind and begins with the organs of action, speech and hands and the rest. What does he begin? Karma yoga. ‘Unattached’ Shankara reads as free of any design on the fruit. Such a man stands higher, he says, than the other: the man of false conduct in the verse before.

ಶ್ರೀ ಶಂಕರ ಭಗವತ್ಪಾದರ ಭಗವದ್ಗೀತಾ ಭಾಷ್ಯ

Sri Shankara Bhagavatpada, Bhagavad Gita Bhashya

ಶ್ಲೋಕ 3.7ರ ವಿವರಣೆContext and commentary on verse 3.7

ಹಿಂದಿನ ಶ್ಲೋಕದ ವಿರುದ್ಧ ಚಿತ್ರ ಇಲ್ಲಿದೆ. ಹಿಂದಿನವನು ಕೈಯನ್ನು ಕಟ್ಟಿ ಮನಸ್ಸನ್ನು ಬಿಟ್ಟಿದ್ದ, ಇವನು ಮನಸ್ಸನ್ನು ಹಿಡಿದು ಕೈಯನ್ನು ಬಿಟ್ಟಿದ್ದಾನೆ.

This is the mirror image of the previous verse. That man had bound his hands and let his mind go. This one has caught his mind and let his hands work.

ಅವನು ಯಾರಿಗಿಂತ ಶ್ರೇಷ್ಠ ಎಂಬಲ್ಲಿ ಆಚಾರ್ಯರ ನಡುವೆ ಗಮನಾರ್ಹ ಭೇದವಿದೆ. ಶಂಕರಾಚಾರ್ಯರ ಪ್ರಕಾರ ಅವನು ಹಿಂದಿನ ಶ್ಲೋಕದ ಮಿಥ್ಯಾಚಾರಿಗಿಂತ ಶ್ರೇಷ್ಠ. ರಾಮಾನುಜಾಚಾರ್ಯರ ಪ್ರಕಾರ ಅವನು ಜ್ಞಾನನಿಷ್ಠನಿಗಿಂತಲೂ ಶ್ರೇಷ್ಠ, ಏಕೆಂದರೆ ಅವನ ದಾರಿಯಲ್ಲಿ ಜಾರುವ ಸಾಧ್ಯತೆ ಕಡಿಮೆ.

There is a notable difference between the acharyas over whom he excels. For Shankara he excels the false actor of the previous verse. For Ramanuja he excels even the man standing in knowledge, because on his road a slip is far less likely.

ಶ್ರೀಧರ ಸ್ವಾಮಿಗಳು ಫಲ ಏನು ಎಂಬುದನ್ನೂ ಹೇಳುತ್ತಾರೆ: ಚಿತ್ತಶುದ್ಧಿಯಿಂದ ಅವನೇ ಜ್ಞಾನಿಯಾಗುತ್ತಾನೆ. ಎರಡು ದಾರಿಗಳು ಇಲ್ಲಿ ಒಂದಾಗುತ್ತವೆ.

Sridhara Swami adds what comes of it: through the purity of mind this very man becomes a knower. The two roads meet here.

ಆಧಾರ: ಹಲವು ಮೂಲಗಳು. ವ್ಯಾಖ್ಯಾನಕಾರರ ಅಭಿಪ್ರಾಯ ಭಿನ್ನವಾಗಿರುವಲ್ಲಿ ಎರಡೂ ಅರ್ಥಗಳನ್ನು ಇಲ್ಲಿ ಕೊಟ್ಟಿದ್ದೇವೆ.

Sources: several. Where commentators differ, both readings are given here.

ಇಂದಿನ ಬದುಕಿಗೆFor life today

ಇಂದ್ರಿಯಗಳನ್ನು ಕೊಲ್ಲುವುದಲ್ಲ, ದಿಕ್ಕು ತೋರಿಸುವುದು. ಇದು ಅಡಗಿಸುವಿಕೆಗೂ ಶಿಸ್ತಿಗೂ ಇರುವ ವ್ಯತ್ಯಾಸ. ಅಡಗಿಸಿದ್ದು ಅವಕಾಶ ಸಿಕ್ಕಾಗ ಸಿಡಿಯುತ್ತದೆ, ದಿಕ್ಕು ಸಿಕ್ಕಿದ್ದು ಕೆಲಸಕ್ಕೆ ಬರುತ್ತದೆ.

Not killing the senses but giving them a direction. This is the difference between suppression and discipline. What is suppressed bursts out when the chance comes; what is directed gets work done.

ಅಭ್ಯಾಸದ ಮೇಜಿನ ಮುಂದೆ ಕೂತು ಗಂಟೆ ಕಳೆದವನಿಗಿಂತ, ಮನಸ್ಸನ್ನು ಪುಸ್ತಕದ ಮೇಲೆ ನಿಲ್ಲಿಸಿ ಅರ್ಧ ಗಂಟೆ ಓದಿದವನು ಮುಂದೆ. ಅಳತೆ ಕೂತ ಸಮಯದ್ದಲ್ಲ, ನಿಂತ ಮನಸ್ಸಿನದು.

Half an hour of reading with the mind held on the page beats an hour spent sitting at the desk. The measure is not the time seated but the mind that stayed.


ಭಗವದ್ಗೀತೆಯ ಮೂರನೆಯ ಅಧ್ಯಾಯದ ಎಲ್ಲ ಶ್ಲೋಕಗಳು ಒಂದೇ ಪುಟದಲ್ಲಿ: ಕನ್ನಡ  ·  ದೇವನಾಗರಿ  ·  English IAST


ಹೊಸ ಬರಹ ಬಂದಾಗ ತಿಳಿಯಿರಿ

ಅನಗತ್ಯ ಸಂದೇಶ ಕಳುಹಿಸುವುದಿಲ್ಲ. ವಿವರಕ್ಕೆ ಗೌಪ್ಯತಾ ನೀತಿ ನೋಡಿ.

ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.

ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸ ಪ್ರಕಟವಾಗುವುದಿಲ್ಲ. ಅಗತ್ಯವಿರುವ ಕಡೆ * ಗುರುತಿದೆ


ಮೇಲಕ್ಕೆ