ಸೌಂದರ್ಯ ಲಹರೀ ಶ್ಲೋಕ 96 – ಅರ್ಥ

ಸೌಂದರ್ಯ ಲಹರೀಯ ತೊಂಬತ್ತಾರನೆಯ ಶ್ಲೋಕದ ಪದಶಃ ಅರ್ಥ, ಕನ್ನಡ ಮತ್ತು ಇಂಗ್ಲಿಷ್ ವಿವರಣೆಯೊಂದಿಗೆ.

ಶ್ಲೋಕ 96, ಸೌಂದರ್ಯ ಲಹರೀ, ಜೀವನ ಸೂತ್ರ

ಸೌಂದರ್ಯ ಲಹರೀಯ ನೂರೂ ಶ್ಲೋಕಗಳು ಒಂದೇ ಪುಟದಲ್ಲಿ: ಕನ್ನಡ  ·  ದೇವನಾಗರಿ  ·  IAST

ಶ್ಲೋಕ (ಕನ್ನಡ)

ಕಲತ್ರಂ ವೈಧಾತ್ರಂ         ಕತಿಕತಿ ಭಜಂತೇ ನ ಕವಯಃ
ಶ್ರಿಯೋ ದೇವ್ಯಾಃ ಕೋ ವಾ         ನ ಭವತಿ ಪತಿಃ ಕೈರಪಿ ಧನೈಃ ।
ಮಹಾದೇವಂ ಹಿತ್ವಾ         ತವ ಸತಿ ಸತೀನಾಮಚರಮೇ
ಕುಚಾಭ್ಯಾಮಾಸಂಗಃ         ಕುರವಕತರೋರಪ್ಯಸುಲಭಃ ॥ 96 ॥

ಶ್ಲೋಕ (ದೇವನಾಗರಿ)

कलत्रं वैधात्रं        कतिकति भजन्ते न कवयः
श्रियो देव्याः को वा        न भवति पतिः कैरपि धनैः ।
महादेवं हित्वा        तव सति सतीनामचरमे
कुचाभ्यामासङ्गः        कुरवकतरोरप्यसुलभः ॥ 96 ॥

ಶ್ಲೋಕ (IAST)

kalatraṃ vaidhātraṃ        katikati bhajante na kavayaḥ
śriyo devyāḥ ko vā        na bhavati patiḥ kairapi dhanaiḥ |
mahādevaṃ hitvā        tava sati satīnāmacarame
kucābhyāmāsaṅgaḥ        kuravakatarorapyasulabhaḥ || 96 ||

ಪದಶಃ ಅರ್ಥ

  • ಕಲತ್ರಂ ವೈಧಾತ್ರಂ (कलत्रं वैधात्रं, kalatraṃ vaidhātraṃ) = ಬ್ರಹ್ಮನ ಪತ್ನಿ ಸರಸ್ವತಿಯನ್ನು (Brahma’s wife, Sarasvati)
  • ಕತಿ ಕತಿ (कति कति, kati kati) = ಎಷ್ಟೆಷ್ಟೋ (how many)
  • ಭಜಂತೇ ನ (भजन्ते न, bhajante na) = ಒಲಿಸಿಕೊಳ್ಳುವುದಿಲ್ಲ (do not win)
  • ಕವಯಃ (कवयः, kavayaḥ) = ಕವಿಗಳು (poets)
  • ಶ್ರಿಯಃ ದೇವ್ಯಾಃ (श्रियः देव्याः, śriyaḥ devyāḥ) = ಲಕ್ಷ್ಮೀದೇವಿಗೆ (of the goddess Lakshmi)
  • ಕಃ ವಾ ನ ಭವತಿ ಪತಿಃ (कः वा न भवति पतिः, kaḥ vā na bhavati patiḥ) = ಯಾರು ತಾನೇ ಒಡೆಯನಾಗುವುದಿಲ್ಲ (who does not become the master)
  • ಕೈಃ ಅಪಿ ಧನೈಃ (कैः अपि धनैः, kaiḥ api dhanaiḥ) = ಸ್ವಲ್ಪ ಹಣವಿದ್ದರೂ (with a little wealth)
  • ಮಹಾದೇವಂ ಹಿತ್ವಾ (महादेवं हित्वा, mahādevaṃ hitvā) = ಮಹಾದೇವನನ್ನು ಬಿಟ್ಟು (apart from Mahadeva)
  • ತವ (तव, tava) = ನಿನ್ನ (your)
  • ಸತಿ (सति, sati) = ಸತಿಯೇ (O faithful one)
  • ಸತೀನಾಂ ಅಚರಮೇ (सतीनाम् अचरमे, satīnām acarame) = ಪತಿವ್ರತೆಯರಲ್ಲಿ ಮೊದಲಿಗಳೇ (O first among faithful wives)
  • ಕುಚಾಭ್ಯಾಂ ಆಸಂಗಃ (कुचाभ्याम् आसङ्गः, kucābhyām āsaṅgaḥ) = ಸ್ತನಗಳ ಸ್ಪರ್ಶ (the touch of your breasts)
  • ಕುರವಕತರೋಃ ಅಪಿ (कुरवकतरोः अपि, kuravakataroḥ api) = ಕುರವಕ ಮರಕ್ಕೂ (even for the kuravaka tree)
  • ಅಸುಲಭಃ (असुलभः, asulabhaḥ) = ದೊರೆಯದು (is not to be had)

ಸಂಪೂರ್ಣ ಅರ್ಥ (ಕನ್ನಡ)

ಎಷ್ಟೆಷ್ಟೋ ಕವಿಗಳು ಬ್ರಹ್ಮನ ಪತ್ನಿ ಸರಸ್ವತಿಯನ್ನು ಒಲಿಸಿಕೊಳ್ಳುತ್ತಾರೆ. ಸ್ವಲ್ಪ ಹಣ ಗಳಿಸಿದವರೆಲ್ಲ ಲಕ್ಷ್ಮೀಪತಿಗಳೆನಿಸಿಕೊಳ್ಳುತ್ತಾರೆ. ಆದರೆ ಪತಿವ್ರತೆಯರಲ್ಲಿ ಮೊದಲಿಗಳಾದ ಸತಿಯೇ, ಮಹಾದೇವನನ್ನು ಬಿಟ್ಟು ಬೇರೆ ಯಾರಿಗೂ, ಸ್ತ್ರೀಯರ ಆಲಿಂಗನದಿಂದ ಹೂಬಿಡುತ್ತದೆ ಎನ್ನುವ ಕುರವಕ ಮರಕ್ಕೂ, ನಿನ್ನ ಸ್ತನಗಳ ಸ್ಪರ್ಶ ದೊರೆಯದು.

ಸಂಪೂರ್ಣ ಅರ್ಥ (ಇಂಗ್ಲಿಷ್)

How many poets win Sarasvati, the wife of Brahma, and who with a little wealth is not called a lord of Lakshmi? But you, faithful one, first among faithful wives, are touched by no one but Mahadeva; not even the kuravaka tree, which is said to flower at a woman’s embrace, may know the touch of your breasts.

ಶ್ಲೋಕ 96ರ ಸಾಂಪ್ರದಾಯಿಕ ವಿಧಿವಿಧಾನಗಳ ವಿವರಗಳುTraditional ritual details for shloka 96
ಫಲ (ಸಿದ್ಧಿ)Result
ಮನಸ್ಸಿನ ನೆಮ್ಮದಿ ಮತ್ತು ದಾಂಪತ್ಯದಲ್ಲಿ ಬಾಂಧವ್ಯPeace of mind, and closeness in marriage
ಬೀಜ ಮಂತ್ರBeeja mantra
ಕ್ಲೀಂ (ಮೂರು ಬಾರಿ)klīṃ (three times)
ಯಂತ್ರYantra
ಚಿನ್ನದ ತಗಡಿನ ಮೇಲೆ, ಅಥವಾ ಎಳ್ಳೆಣ್ಣೆಯ ಮೇಲೆ ಬರೆದ ಯಂತ್ರDrawn on a gold plate, or on sesame oil
क्लींक्लींक्लीं

ಪಾರಂಪರಿಕ ಚಿತ್ರದ ಆಧಾರದ ಮೇಲೆ ಪುನರ್ರಚಿತ ಯಂತ್ರದ ಚಿತ್ರ.

ದಿಕ್ಕುDirection
ಪೂರ್ವಾಭಿಮುಖವಾಗಿ ಕುಳಿತುSitting facing east
ಜಪJapa count
ದಿನಕ್ಕೆ 1000 ಬಾರಿ1000 times a dayಇನ್ನೊಂದು ಮೂಲದಲ್ಲಿ: 1008 ಬಾರಿAnother source: 1008 times
ಅವಧಿDuration
45 ದಿನ45 daysಇನ್ನೊಂದು ಮೂಲದಲ್ಲಿ: 3 ದಿನAnother source: 3 days
ನೈವೇದ್ಯNaivedya / offering
ಮೊಸರು ಮತ್ತು ಎಳ್ಳು ಬೆರೆಸಿದ ಅನ್ನ, ಬೆಲ್ಲ, ತೆಂಗಿನಕಾಯಿ, ಜೇನುತುಪ್ಪ ಮತ್ತು ಬಾಳೆಹಣ್ಣುRice mixed with curd and sesame, jaggery, coconut, honey and bananas

ಈ ವಿವರಗಳು ಮೂಲ ಸೌಂದರ್ಯ ಲಹರೀಯಲ್ಲಿ ಇಲ್ಲ ಎಂಬುದನ್ನು ಮೊದಲೇ ಹೇಳಿಬಿಡುತ್ತೇವೆ. ಪ್ರತಿ ಶ್ಲೋಕಕ್ಕೂ ಒಂದು ಯಂತ್ರ, ಒಂದು ಬೀಜ, ಒಂದು ಜಪಸಂಖ್ಯೆ ಮತ್ತು ಒಂದು ಫಲವನ್ನು ಜೋಡಿಸುವುದು ನಂತರದ ಶತಮಾನಗಳ ಪರಂಪರೆಯ ಪದ್ಧತಿ. ಅದಲ್ಲದೆ ಈ ವಿವರಗಳು ಒಂದು ಗ್ರಂಥದಿಂದ ಇನ್ನೊಂದಕ್ಕೆ ಸ್ವಲ್ಪ ಬದಲಾಗಿರುತ್ತವೆ. ಇದೊಂದು ಸಂಪ್ರದಾಯದ ದಾಖಲೆಯೇ ಹೊರತು ವೈದ್ಯಕೀಯ ಸಲಹೆಯಲ್ಲ.These details are not part of the original Soundarya Lahari, and we say so at the outset. Pairing each verse with a yantra, a seed syllable, a japa count and a result is a practice of the later tradition, and the details differ a little from one text to another. This is a record of a tradition, not medical advice.

ಆಧಾರ: ಹಲವು ಮೂಲಗಳು. ಭಿನ್ನತೆ ಇರುವಲ್ಲಿ ಎರಡೂ ಆವೃತ್ತಿಗಳನ್ನು ಇಲ್ಲಿ ಕೊಟ್ಟಿದ್ದೇವೆ.Sources: several. Where they differ, both versions are given here.

ಸೌಂದರ್ಯ ಲಹರೀಯ ನೂರೂ ಶ್ಲೋಕಗಳು ಒಂದೇ ಪುಟದಲ್ಲಿ: ಕನ್ನಡ  ·  ದೇವನಾಗರಿ  ·  IAST

ಹೊಸ ಬರಹ ಬಂದಾಗ ತಿಳಿಯಿರಿ

ಅನಗತ್ಯ ಸಂದೇಶ ಕಳುಹಿಸುವುದಿಲ್ಲ. ವಿವರಕ್ಕೆ ಗೌಪ್ಯತಾ ನೀತಿ ನೋಡಿ.

ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸ ಪ್ರಕಟವಾಗುವುದಿಲ್ಲ. ಅಗತ್ಯವಿರುವ ಕಡೆ * ಗುರುತಿದೆ

ಮೇಲಕ್ಕೆ