ಮಹಾಮೃತ್ಯುಂಜಯ ಮಂತ್ರ ಕೇಳುವುದು ಏನನ್ನು? ದೀರ್ಘಾಯುಷ್ಯವನ್ನು ಎಂದು ನಾವು ಥಟ್ಟನೆ ಉತ್ತರ ಹೇಳಿಬಿಡುತ್ತೇವೆ. ಆದರೆ ಮಂತ್ರ ಆ ಮಾತನ್ನು ಎಲ್ಲಿಯೂ ಆಡಿಲ್ಲ.
ಶಿವರಾತ್ರಿಯ ರಾತ್ರಿ ಈ ಸಾಲನ್ನು ಲಕ್ಷಾಂತರ ಮನೆಗಳಲ್ಲಿ ಹೇಳುತ್ತಾರೆ. ಋಗ್ವೇದದ ಏಳನೇ ಮಂಡಲದಿಂದ ಬಂದ ಈ ಮಂತ್ರವನ್ನು ತ್ರ್ಯಂಬಕ ಮಂತ್ರ ಎಂದೂ ಕರೆಯುತ್ತಾರೆ.
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ । ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಽಮೃತಾತ್ ॥
ಸಾಲನ್ನು ಬಿಡಿಸಿ ನೋಡಿ. ಮೂರು ಕಣ್ಣಿನವನನ್ನು ಪೂಜಿಸುತ್ತೇವೆ, ಸುಗಂಧವುಳ್ಳವನನ್ನು, ಎಲ್ಲರನ್ನೂ ಪೋಷಿಸಿ ಬೆಳೆಸುವವನನ್ನು. ಇಲ್ಲಿಯವರೆಗೆ ಸ್ತುತಿ. ಬೇಡಿಕೆ ಬರುವುದು ಅದರ ನಂತರವೇ. ಆ ಬೇಡಿಕೆ ನಾವು ನಿರೀಕ್ಷಿಸುವಂಥದ್ದಲ್ಲ.
ಮೃತ್ಯೋರ್ಮುಕ್ಷೀಯ ಮಾ ಅಮೃತಾತ್. ಮೃತ್ಯುವಿನಿಂದ ಬಿಡುಗಡೆ ಸಿಗಲಿ, ಆದರೆ ಅಮೃತದಿಂದ ಬೇರ್ಪಡುವುದು ಬೇಡ.
ಸಾವು ಬಾರದಿರಲಿ ಎಂದು ಮಂತ್ರ ಕೇಳುತ್ತಿಲ್ಲ. ಸಾವಿನ ಹಿಡಿತದಿಂದ ಮನಸ್ಸು ಬಿಡುಗಡೆ ಪಡೆಯಲಿ ಎಂದು ಕೇಳುತ್ತಿದೆ.
ಹಣ್ಣಾದ ಕಾಯಿ ಮತ್ತು ಎಳೆಯ ಕಾಯಿ
ಮಂತ್ರದ ಜೀವಾಳ ಇರುವುದು ಒಂದು ಸಣ್ಣ ಉಪಮೆಯಲ್ಲಿ. ಉರ್ವಾರುಕಮಿವ ಬಂಧನಾತ್. ಸೌತೆಕಾಯಿ ತೊಟ್ಟಿನಿಂದ ಕಳಚಿಕೊಳ್ಳುವ ಹಾಗೆ.
ಬಳ್ಳಿಯಲ್ಲಿ ಎಳೆಯ ಕಾಯಿ ಇರುತ್ತದೆ. ಅದನ್ನು ಕೀಳಲು ಹೋದರೆ ಎರಡರಲ್ಲಿ ಒಂದು ಅನಾಹುತ ಆಗುತ್ತದೆ. ಕಾಯಿ ಒಡೆಯುತ್ತದೆ, ಇಲ್ಲವೇ ಬಳ್ಳಿ ಹರಿಯುತ್ತದೆ. ಕಾಯಿ ಇನ್ನೂ ತೊಟ್ಟು ಬಿಡಲು ಸಿದ್ಧವಾಗಿಲ್ಲ.
ಅದೇ ಕಾಯಿ ಹಣ್ಣಾದ ಮೇಲೆ ಕೈ ಸೋಕಿದರೆ ಸಾಕು. ತೊಟ್ಟು ತಾನಾಗಿಯೇ ಬಿಡುತ್ತದೆ. ಬಳ್ಳಿಗೂ ನೋವಿಲ್ಲ, ಕಾಯಿಗೂ ಗಾಯವಿಲ್ಲ.
ಅದು ಬಿದ್ದದ್ದು ಸತ್ತು ಹೋದದ್ದರಿಂದ ಅಲ್ಲ. ಪೂರ್ಣವಾದದ್ದರಿಂದ.
ಮಂತ್ರ ಕೇಳುತ್ತಿರುವುದು ಇದನ್ನೇ, ಅಂದರೆ ಪಕ್ವತೆಯನ್ನು. ಅದರಲ್ಲಿ ಬೇಗ ಹೋಗಬೇಕೆಂಬ ಆತುರವಾಗಲೀ ಹೋಗಲೇಬಾರದೆಂಬ ಹಟವಾಗಲೀ ಇಲ್ಲ.
ಎರಡು ಬಗೆಯ ಅಗಲಿಕೆ
ಈ ಉಪಮೆ ನನಗೆ ಯಾವ ಪುಸ್ತಕದಿಂದಲೂ ಅರ್ಥವಾಗಲಿಲ್ಲ. ವಾರ್ಡಿನಲ್ಲಿ ಅರ್ಥವಾಯಿತು.
ಕೆಲವು ಅಗಲಿಕೆಗಳಲ್ಲಿ ದುಃಖ ಇರುತ್ತದೆ, ಆದರೆ ಹರಿದುಹೋದ ಭಾವ ಇರುವುದಿಲ್ಲ. ಮಾಡಬೇಕಾದ್ದೆಲ್ಲ ಆಗಿದೆ, ಹೇಳಬೇಕಾದ್ದೆಲ್ಲ ಹೇಳಿಯಾಗಿದೆ, ಮಕ್ಕಳು ಪಕ್ಕದಲ್ಲಿದ್ದಾರೆ. ಇನ್ನು ಕೆಲವು ಅಗಲಿಕೆಗಳು ಬಳ್ಳಿಯನ್ನೇ ಹರಿದುಕೊಂಡು ಹೋದ ಹಾಗೆ ಇರುತ್ತವೆ. ಉಳಿದವರು ಎಷ್ಟು ವರ್ಷಗಳಾದರೂ ಆ ನೆನಪನ್ನು ಕೆದಕಲಾರರು.
ಈ ವ್ಯತ್ಯಾಸಕ್ಕೆ ಕಾರಣ ವಯಸ್ಸಿಗಿಂತ ಹೆಚ್ಚಾಗಿ ಪಕ್ವತೆ.
ಇಲ್ಲಿ ಒಂದು ಮಾತನ್ನು ಹೇಳಿಬಿಡಬೇಕು. ಈ ಮಂತ್ರ ಔಷಧಕ್ಕೆ ಬದಲಿಯಲ್ಲ, ಚಿಕಿತ್ಸೆಯನ್ನು ಮುಂದೂಡಲು ಕಾರಣವೂ ಅಲ್ಲ. ಕಾಯಿಲೆ ಇದ್ದಾಗ ವೈದ್ಯರ ಬಳಿ ಹೋಗುವುದೇ ಮೊದಲ ಕೆಲಸ. ಮಂತ್ರದ ಕೆಲಸ ಬೇರೆ. ಅದು ಮನಸ್ಸಿಗೆ ಸಂಬಂಧಿಸಿದ್ದು.
ಭಯದಿಂದ ಬಿಡುಗಡೆ
ಸಾವನ್ನು ಗೆಲ್ಲುವುದು ಎಂದರೆ ಸಾಯದೆ ಇರುವುದು ಎಂದು ನಾವು ತಿಳಿದಿದ್ದೇವೆ. ಮಂತ್ರದ ಪ್ರಕಾರ ಅದರ ಅರ್ಥ ಬದುಕಿರುವಷ್ಟು ದಿನ ಸಾವಿನ ಭಯವಿಲ್ಲದೆ ಇರುವುದು.
ಯೋಚಿಸಿ ನೋಡಿ. ನಾವು ಹೆದರುವುದು ಸಾವಿಗೋ, ಅಪೂರ್ಣವಾಗಿ ಉಳಿದುಹೋಗುವುದಕ್ಕೋ?
ಪೂರ್ಣವಾಗುವುದು ಎಂದರೆ ಹೇಳಬೇಕಾದ್ದನ್ನು ಹೇಳಿಬಿಡುವುದು, ಕ್ಷಮಿಸಬೇಕಾದ್ದನ್ನು ಕ್ಷಮಿಸಿಬಿಡುವುದು, ಮುಂದೂಡಿದ ಫೋನ್ ಕರೆಯನ್ನು ಇಂದೇ ಮಾಡಿಬಿಡುವುದು. ಅದಕ್ಕೆ ಹೆಚ್ಚು ವರ್ಷ ಬದುಕಬೇಕೆಂದಿಲ್ಲ.
ಬಳ್ಳಿಯಲ್ಲಿ ಹಣ್ಣಾಗುವುದು ಎಂದರೆ ಅದೇ.
ಓಂ ನಮಃ ಶಿವಾಯ.
ಇಂಗ್ಲಿಷ್ ಆವೃತ್ತಿ
Mahashivaratri. The night of stillness. The night when we turn to Lord Shiva’s infinite consciousness.
And on this night, there’s one invocation that stands above all others: the Mahamrityunjaya Mantra from the Rigveda (7.59.12).
You may also have heard it called the Tryambakam Mantra. What is easy to miss is that it does not ask for a longer life. It speaks of something deeper: existence itself, attachment and what it means to be free.
It doesn’t beg for immortality of flesh and bone. Instead, it seeks liberation from death’s grip on our minds. From the fear that binds us.
Let us go through this ancient verse.
The Mantra
1. Shloka in Kannada
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ ।
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಽಮೃತಾತ್ ॥
2. Shloka in Devanagari
ॐ त्र्यम्बकं यजामहे सुगन्धिं पुष्टिवर्धनम् ।
उर्वारुकमिव बन्धनान् मृत्योर्मुक्षीय माऽमृतात् ॥
3. Shloka in English IAST Format
om tryambakaṃ yajāmahe sugandhiṃ puṣṭivardhanam |
urvārukamiva bandhanān mṛtyormukṣīya mā’mṛtāt ||
Word-by-Word Meaning
Here is what each word means.
ಓಂ (Om): The primordial sound. It represents universal consciousness, everything that was, is, and will be.
ತ್ರ್ಯಂಬಕಂ (Tryambakaṃ): The Three-Eyed One. That is Shiva. His three eyes are the sun, the moon and fire, and they stand for wisdom.
ಯಜಾಮಹೇ (Yajāmahe): We worship. We honor. We meditate upon.
ಸುಗಂಧಿಂ (Sugandhiṃ): The Fragrant One. Think about this: the divine permeates existence like a fragrance you can’t quite place but always feel.
ಪುಷ್ಟಿವರ್ಧನಮ್ (Puṣṭivardhanam): The Nourisher. The one who sustains us, physically, mentally, spiritually.
ಉರ್ವಾರುಕಮ್ ಇವ (Urvārukam iva): Like a cucumber. Or a melon. (Why a cucumber or a melon? This is explained below.)
ಬಂಧನಾನ್ (Bandhanān): From bondage. From the binding stem.
ಮೃತ್ಯೋಃ (Mṛtyoḥ): From death. And from the fear that comes with it.
ಮುಕ್ಷೀಯ (Mukṣīya): May I be liberated.
ಮಾ ಅಮೃತಾತ್ (Mā amṛtāt): Not from immortality. Not from Moksha.
The Cucumber Metaphor (This Is Beautiful)
Here’s where this mantra gets really interesting.
“Urvārukamiva Bandhanān”: like a cucumber from its bondage.
Picture an unripe cucumber on the vine. It clings desperately. Try to pull it off, and you’ll damage the fruit or tear the vine. It’s not ready. It struggles.
But a ripe cucumber? It drops effortlessly. The connection just… releases.
It doesn’t fall because it’s dead. It falls because it’s complete.
What this mantra asks for is maturity (pakvata), not an escape or an early exit. The prayer is that we live fully, nourished by the divine, and when our time comes, when we’re truly ripe, we leave this physical vessel as naturally as that fruit drops from the vine.
There is no pain, clinging or fear in it.
It is simply completion.
What It All Means
In Kannada:
ನಾವು ಸುಗಂಧಯುಕ್ತನಾದ ಮತ್ತು ಎಲ್ಲರನ್ನೂ ಪೋಷಿಸಿ ಬೆಳೆಸುವ ಮುಕ್ಕಣ್ಣನನ್ನು (ಶಿವನನ್ನು) ಪೂಜಿಸುತ್ತೇವೆ. ಬಳ್ಳಿಯಿಂದ ಸೌತೆಕಾಯಿಯು (ಪಕ್ವವಾದಾಗ) ತನ್ನಷ್ಟಕ್ಕೆ ತಾನೇ ಕಳಚಿಕೊಳ್ಳುವಂತೆ, ನಾನು ಮೃತ್ಯುವಿನ (ಸಂಸಾರ) ಬಂಧನದಿಂದ ಮುಕ್ತನಾಗುವಂತಾಗಲಿ, ಆದರೆ ಅಮೃತತ್ವದಿಂದ (ಮೋಕ್ಷದಿಂದ) ಬೇರ್ಪಡದಿರಲಿ.
In English:
We worship the Three-Eyed One, Lord Shiva, who is fragrant and nourishes all beings. Just as a ripe cucumber comes away effortlessly from its stalk, may I be liberated from death and mortality, but never separated from immortality, from Moksha.
What This Means for You Today
Shivaratri is about mindfulness as much as ritual.
When you chant this mantra, you’re choosing to live fully while releasing the anxiety of the end. You’re acknowledging the inevitable without being paralysed by it.
This mantra guides us from fear of the temporary to awareness of the eternal. It reminds us that we’re not just bodies counting down to expiration. We’re consciousness itself, temporarily housed in this flesh.
True victory over death means being free from the fear of death while we are alive, rather than living forever.
That’s the gift of this ancient verse. That’s what Shiva offers us on this sacred night.
Om Namah Shivaya.
ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.




ಪ್ರತಿಕ್ರಿಯೆ ಬರೆಯಿರಿ