ಭಗವದ್ಗೀತೆ 5.10 ಅರ್ಥ: ಬ್ರಹ್ಮಣ್ಯಾಧಾಯ ಕರ್ಮಾಣಿ

ಭಗವದ್ಗೀತೆಯ ಐದನೆಯ ಅಧ್ಯಾಯದ ಹತ್ತನೆಯ ಶ್ಲೋಕದ ಪದಶಃ ಅರ್ಥ, ಕನ್ನಡ ಮತ್ತು ಇಂಗ್ಲಿಷ್ ವಿವರಣೆಯೊಂದಿಗೆ.

ಭಗವದ್ಗೀತೆ 5.10 ಅರ್ಥ: ಬ್ರಹ್ಮಣ್ಯಾಧಾಯ ಕರ್ಮಾಣಿ, ಭಗವದ್ಗೀತೆ, ಜೀವನ ಸೂತ್ರ

ಭಗವದ್ಗೀತೆಯ ಐದನೆಯ ಅಧ್ಯಾಯದ ಎಲ್ಲ ಶ್ಲೋಕಗಳು ಇಲ್ಲಿವೆ: ಕರ್ಮ ಸಂನ್ಯಾಸ ಯೋಗ.

All verses of Chapter 5 in Kannada, Sanskrit or English IAST.

ಶ್ಲೋಕ (ಕನ್ನಡ)

ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ।
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ ॥ 10 ॥

ಶ್ಲೋಕ (ದೇವನಾಗರಿ)

ब्रह्मण्याधाय कर्माणि सङ्गं त्यक्त्वा करोति यः।
लिप्यते न स पापेन पद्मपत्रमिवाम्भसा ॥ 10 ॥

ಶ್ಲೋಕ (English IAST)

brahmaṇyādhāya karmāṇi saṅgaṃ tyaktvā karoti yaḥ|
lipyate na sa pāpena padmapatramivāmbhasā || 10 ||

ಪದಶಃ ಅರ್ಥ

  • ಬ್ರಹ್ಮಣಿ ಆಧಾಯ ಕರ್ಮಾಣಿ (ब्रह्मणि आधाय कर्माणि, brahmaṇi ādhāya karmāṇi) = ಕರ್ಮಗಳನ್ನು ಬ್ರಹ್ಮನಲ್ಲಿ ಇಟ್ಟು (ಅರ್ಪಿಸಿ) (placing all actions in Brahman)
  • ಸಂಗಮ್ ತ್ಯಕ್ತ್ವಾ (सङ्गम् त्यक्त्वा, saṅgam tyaktvā) = ಆಸಕ್ತಿಯನ್ನು ಬಿಟ್ಟು (giving up attachment)
  • ಯಃ ಕರೋತಿ (यः करोति, yaḥ karoti) = ಯಾರು ಮಾಡುತ್ತಾನೋ (he who acts)
  • ಸಃ ಪಾಪೇನ ನ ಲಿಪ್ಯತೇ (सः पापेन न लिप्यते, saḥ pāpena na lipyate) = ಅವನಿಗೆ ಪಾಪ ಅಂಟುವುದಿಲ್ಲ (is not tainted by sin)
  • ಪದ್ಮಪತ್ರಮ್ ಇವ ಅಂಭಸಾ (पद्मपत्रम् इव अम्भसा, padmapatram iva ambhasā) = ನೀರು ತಾವರೆ ಎಲೆಗೆ ಅಂಟದಂತೆ (as a lotus leaf is not wetted by water)

ಸಂಪೂರ್ಣ ಅರ್ಥ (ಕನ್ನಡ)

ಕರ್ಮಗಳನ್ನು ಬ್ರಹ್ಮದಲ್ಲಿ ಅರ್ಪಿಸಿ, ಆಸಕ್ತಿಯನ್ನು ಬಿಟ್ಟು ಕರ್ಮ ಮಾಡುವವನಿಗೆ, ನೀರು ತಾವರೆ ಎಲೆಗೆ ಅಂಟದಂತೆ, ಪಾಪ ಅಂಟುವುದಿಲ್ಲ.

ಸಂಪೂರ್ಣ ಅರ್ಥ (ಇಂಗ್ಲಿಷ್)

He who acts placing all actions in Brahman and giving up attachment is not tainted by sin, as a lotus leaf is not wetted by water.

ಚಿಂತನ (Reflection)

ತತ್ತ್ವವನ್ನು ಅರಿಯದೆ ಕರ್ಮಯೋಗದಲ್ಲಿ ತೊಡಗಿರುವವನಿಗಾಗಿ ಈ ಶ್ಲೋಕ ಎನ್ನುತ್ತಾರೆ ಶಂಕರರು. ಇಲ್ಲಿ ‘ಬ್ರಹ್ಮ’ ಎಂದರೆ ಈಶ್ವರ. ಸೇವಕ ಒಡೆಯನಿಗಾಗಿ ದುಡಿಯುವಂತೆ ಇವನು ‘ಈಶ್ವರನಿಗಾಗಿ ಕರ್ಮ ಮಾಡುತ್ತೇನೆ’ ಎಂದು ತನ್ನ ಎಲ್ಲ ಕರ್ಮಗಳನ್ನೂ ಈಶ್ವರನಲ್ಲಿ ಇಡುತ್ತಾನೆ. ಮೋಕ್ಷವೆಂಬ ಫಲದ ಮೇಲಿನ ಆಸಕ್ತಿಯನ್ನೂ ಬಿಡುತ್ತಾನೆ. ಪಾಪ ಅವನಿಗೆ ಅಂಟುವುದಿಲ್ಲ; ಅವನ ಕರ್ಮದ ಫಲ ಒಂದೇ: ಚಿತ್ತಶುದ್ಧಿ.

This shloka is for one who does not know the truth and is engaged in the yoga of action, Shankara says. ‘Brahman’ here is the Lord. Such a man places all his actions in him, thinking ‘I act for the Lord’s sake’, as a servant works for his master. He gives up attachment even to the fruit that is liberation. Sin does not touch him, and his action has one fruit only: purity of mind.

ಶ್ರೀ ಶಂಕರ ಭಗವತ್ಪಾದರ ಭಗವದ್ಗೀತಾ ಭಾಷ್ಯ

Sri Shankara Bhagavatpada, Bhagavad Gita Bhashya

ಶ್ಲೋಕ 5.10ರ ವಿವರಣೆContext and commentary on verse 5.10

ಭಗವದ್ಗೀತೆಯ ಅತ್ಯಂತ ಪರಿಚಿತ ಉಪಮೆಗಳಲ್ಲಿ ಇದು ಒಂದು. ತಾವರೆ ಎಲೆ ನೀರಿನಲ್ಲೇ ಇರುತ್ತದೆ, ಆದರೂ ನೀರು ಅದರ ಮೇಲೆ ಹನಿಯಾಗಿ ಉರುಳಿ ಹೋಗುತ್ತದೆ. ತತ್ತ್ವ ಅರಿಯದವನಿಗೆ, ಇನ್ನೂ ‘ನಾನು ಮಾಡುತ್ತಿದ್ದೇನೆ’ ಎಂಬ ಭಾವ ಇರುವವನಿಗೆ, ಇಲ್ಲಿ ದಾರಿ ಸಿಗುತ್ತದೆ.

This is one of the Bhagavad Gita’s best known images. The lotus leaf lives in water, yet water rolls off it in drops. Here the way is shown for one who does not yet know the truth, who still feels ‘I am doing this’.

ಶಂಕರಾಚಾರ್ಯರಿಗೆ ‘ಬ್ರಹ್ಮ’ ಇಲ್ಲಿ ಈಶ್ವರ. ಸೇವಕ ಯಜಮಾನನಿಗಾಗಿ ಕೆಲಸ ಮಾಡುವಂತೆ, ‘ಅವನಿಗಾಗಿ ಮಾಡುತ್ತಿದ್ದೇನೆ’ ಎಂದು ಎಲ್ಲ ಕರ್ಮಗಳನ್ನೂ ಮಾಡುವುದು. ಮೋಕ್ಷದ ಫಲದಲ್ಲೂ ಆಸಕ್ತಿ ಇಲ್ಲದೆ ಮಾಡಿದ ಆ ಕರ್ಮಕ್ಕೆ ಉಳಿಯುವ ಫಲ ಒಂದೇ, ಮನಸ್ಸಿನ ಶುದ್ಧಿ. ಶ್ರೀಧರ ಸ್ವಾಮಿಗಳೂ ಪರಮೇಶ್ವರನಿಗೆ ಅರ್ಪಿಸುವುದು ಎಂದೇ ಅರ್ಥೈಸುತ್ತಾರೆ. ‘ಪಾಪ’ ಎಂದರೆ ‘ಬಂಧಿಸುವ ಪುಣ್ಯಪಾಪ ಎರಡೂ’ ಎಂದು ಅವರು ಸೇರಿಸುತ್ತಾರೆ.

For Shankara ‘Brahman’ here is the Lord. Just as a servant works for his master, one does all actions thinking ‘I do this for him’. Action done without attachment even to the fruit of liberation has only one result left, purity of mind. Sridhara Swami also reads it as offering to the Supreme Lord. By ‘sin’, he adds, is meant ‘the binding action of both merit and demerit’.

ರಾಮಾನುಜಾಚಾರ್ಯರ ಅರ್ಥ ವಿಶಿಷ್ಟವಾದದ್ದು. ಅವರಿಗೆ ಇಲ್ಲಿನ ‘ಬ್ರಹ್ಮ’ ಪ್ರಕೃತಿ. ಹದಿನಾಲ್ಕನೆಯ ಅಧ್ಯಾಯದ ‘ಮಮ ಯೋನಿರ್ಮಹದ್ಬ್ರಹ್ಮ’ ಎಂಬ ಮಾತನ್ನು ಅವರು ಆಧಾರವಾಗಿ ಕೊಡುತ್ತಾರೆ. ಇಂದ್ರಿಯಗಳ ರೂಪದಲ್ಲಿರುವ ಪ್ರಕೃತಿಯಲ್ಲೇ ಕರ್ಮಗಳನ್ನು ಇಟ್ಟು, ‘ನಾನು ಏನನ್ನೂ ಮಾಡುತ್ತಿಲ್ಲ’ ಎಂದು ಮಾಡುವವನು ಪ್ರಕೃತಿಯ ನಡುವೆ ಇದ್ದರೂ ಅದಕ್ಕೆ ಅಂಟುವುದಿಲ್ಲ.

Ramanuja’s reading is distinctive. For him ‘Brahman’ here is prakriti, and he cites ‘my womb is the great Brahman’ from the fourteenth chapter. One who places actions in prakriti, which exists in the form of the senses, and acts thinking ‘I do nothing at all’, is not tainted by it though he lives amid prakriti.

ಮಧ್ವಾಚಾರ್ಯರು ಇಲ್ಲಿ ಒಂದು ಸಣ್ಣ ಆದರೆ ಮುಖ್ಯ ಟಿಪ್ಪಣಿ ಕೊಡುತ್ತಾರೆ. ಭಗವದ್ಗೀತೆ ಫಲವನ್ನು ಮತ್ತೆ ಮತ್ತೆ ಹೇಳುವುದು, ಈ ಸಾಧನೆ ಕೇವಲ ಉಪಚಾರದ ಮಾತಲ್ಲ, ನಿಜವಾಗಿ ಪಾಲಿಸಬೇಕಾದದ್ದು ಎಂದು ತೋರಿಸಲು.

Madhva adds a small but important note. The Bhagavad Gita repeats the fruit again and again to show that this discipline is not a figure of speech but something actually to be observed.

ಆಧಾರ: ಹಲವು ಮೂಲಗಳು. ವ್ಯಾಖ್ಯಾನಕಾರರ ಅಭಿಪ್ರಾಯ ಭಿನ್ನವಾಗಿರುವಲ್ಲಿ ಎರಡೂ ಅರ್ಥಗಳನ್ನು ಇಲ್ಲಿ ಕೊಟ್ಟಿದ್ದೇವೆ.

Sources: several. Where commentators differ, both readings are given here.

ಇಂದಿನ ಬದುಕಿಗೆFor life today

ತಾವರೆ ಎಲೆಯ ಈ ಗುಣವನ್ನು ವಿಜ್ಞಾನವೂ ಅಧ್ಯಯನ ಮಾಡಿದೆ. ಎಲೆಯ ಮೇಲ್ಮೈಯ ಅತಿ ಸೂಕ್ಷ್ಮ ಉಬ್ಬುಗಳು ಮತ್ತು ಮೇಣದ ಪದರದಿಂದಾಗಿ ನೀರು ಹರಡದೆ ಗುಂಡಾಗಿ ಉರುಳುತ್ತದೆ, ಉರುಳುವಾಗ ಧೂಳನ್ನೂ ಒಯ್ಯುತ್ತದೆ. ಇದನ್ನು ‘ಲೋಟಸ್ ಎಫೆಕ್ಟ್’ ಎನ್ನುತ್ತಾರೆ.

Science has studied this property of the lotus leaf. Tiny bumps on the leaf’s surface and a waxy coating make water bead up and roll off instead of spreading, carrying dust away as it goes. It is called the ‘lotus effect’.

ಎಲೆ ನೀರನ್ನು ದೂರ ತಳ್ಳುವುದಿಲ್ಲ, ನೀರಿನಿಂದ ಓಡಿಹೋಗುವುದೂ ಇಲ್ಲ. ಅದರ ಮೇಲ್ಮೈ ಮಾತ್ರ ಬೇರೆ ರೀತಿ ಇದೆ. ಕೆಲಸದ ನಡುವೆ ನಮ್ಮ ಮನಸ್ಸಿನ ಮೇಲ್ಮೈಯನ್ನು ಹಾಗೆ ಬದಲಿಸುವುದೇ ಈ ಶ್ಲೋಕ ಹೇಳುವ ಸಾಧನೆ.

The leaf does not push the water away, nor does it flee from water. Only its surface is different. To change the surface of our mind in that way, in the middle of work, is the discipline this verse speaks of.


ಭಗವದ್ಗೀತೆಯ ಐದನೆಯ ಅಧ್ಯಾಯದ ಎಲ್ಲ ಶ್ಲೋಕಗಳು ಒಂದೇ ಪುಟದಲ್ಲಿ: ಕನ್ನಡ  ·  ದೇವನಾಗರಿ  ·  English IAST


ಹೊಸ ಬರಹ ಬಂದಾಗ ತಿಳಿಯಿರಿ

ಅನಗತ್ಯ ಸಂದೇಶ ಕಳುಹಿಸುವುದಿಲ್ಲ. ವಿವರಕ್ಕೆ ಗೌಪ್ಯತಾ ನೀತಿ ನೋಡಿ.

ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.

ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸ ಪ್ರಕಟವಾಗುವುದಿಲ್ಲ. ಅಗತ್ಯವಿರುವ ಕಡೆ * ಗುರುತಿದೆ


ಮೇಲಕ್ಕೆ