ಭಗವದ್ಗೀತೆ 2.47 ಅರ್ಥ: ಕರ್ಮಣ್ಯೇವಾಧಿಕಾರಸ್ತೇ

ಭಗವದ್ಗೀತೆಯ ಎರಡನೆಯ ಅಧ್ಯಾಯದ ನಲವತ್ತೇಳನೆಯ ಶ್ಲೋಕದ ಪದಶಃ ಅರ್ಥ, ಕನ್ನಡ ಮತ್ತು ಇಂಗ್ಲಿಷ್ ವಿವರಣೆಯೊಂದಿಗೆ.

ಶ್ಲೋಕ 2.47, ಭಗವದ್ಗೀತೆ, ಜೀವನ ಸೂತ್ರ

ಭಗವದ್ಗೀತೆಯ ಎರಡನೆಯ ಅಧ್ಯಾಯದ ಎಲ್ಲ ಶ್ಲೋಕಗಳು ಇಲ್ಲಿವೆ: ಸಾಂಖ್ಯ ಯೋಗ.

All verses of Chapter 2 in Kannada, Sanskrit or English IAST.

ಶ್ಲೋಕ (ಕನ್ನಡ)

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ।
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಽಸ್ತ್ವಕರ್ಮಣಿ ॥ 47 ॥

ಶ್ಲೋಕ (ದೇವನಾಗರಿ)

कर्मण्येवाधिकारस्ते मा फलेषु कदाचन।
मा कर्मफलहेतुर्भूर्मा ते सङ्गोऽस्त्वकर्मणि ॥ 47 ॥

ಶ್ಲೋಕ (English IAST)

karmaṇyevādhikāraste mā phaleṣu kadācana|
mā karmaphalaheturbhūrmā te saṅgo’stvakarmaṇi || 47 ||

ಪದಶಃ ಅರ್ಥ

  • ಕರ್ಮಣಿ ಏವ (कर्मणि एव, karmaṇi eva) = ಕರ್ಮದಲ್ಲಿ ಮಾತ್ರ (in action alone)
  • ಅಧಿಕಾರಃ (अधिकारः, adhikāraḥ) = ಅಧಿಕಾರ, ಹಕ್ಕು (the claim, the right)
  • ತೇ (ते, te) = ನಿನಗೆ (yours)
  • ಮಾ ಫಲೇಷು ಕದಾಚನ (मा फलेषु कदाचन, mā phaleṣu kadācana) = ಫಲಗಳಲ್ಲಿ ಎಂದೂ ಬೇಡ (never in the fruits)
  • ಮಾ ಕರ್ಮಫಲಹೇತುಃ ಭೂಃ (मा कर्मफलहेतुः भूः, mā karmaphalahetuḥ bhūḥ) = ಕರ್ಮಫಲವೇ ಪ್ರೇರಣೆಯಾಗುವವನಾಗಬೇಡ (do not be one whose motive is the fruit of action)
  • ಮಾ ತೇ ಸಂಗಃ ಅಸ್ತು ಅಕರ್ಮಣಿ (मा ते सङ्गः अस्तु अकर्मणि, mā te saṅgaḥ astu akarmaṇi) = ಕರ್ಮ ಮಾಡದಿರುವುದರಲ್ಲೂ ನಿನಗೆ ಅಂಟು ಬೇಡ (nor let there be attachment in you to inaction)

ಸಂಪೂರ್ಣ ಅರ್ಥ (ಕನ್ನಡ)

ಕರ್ಮದಲ್ಲಿ ಮಾತ್ರ ನಿನಗೆ ಅಧಿಕಾರ, ಅದರ ಫಲಗಳಲ್ಲಿ ಎಂದೂ ಅಲ್ಲ. ಕರ್ಮಫಲವೇ ನಿನ್ನ ಪ್ರೇರಣೆಯಾಗದಿರಲಿ. ಕರ್ಮ ಮಾಡದಿರುವುದರಲ್ಲೂ ನಿನಗೆ ಅಂಟು ಬೇಡ.

ಸಂಪೂರ್ಣ ಅರ್ಥ (ಇಂಗ್ಲಿಷ್)

Your claim is to the action alone, never to its fruits. Do not let the fruit of action be your motive, and do not be attached to inaction either.

ಶ್ಲೋಕ 2.47ರ ವಿವರಣೆContext and commentary on verse 2.47

ಗೀತೆಯ ಅತ್ಯಂತ ಪ್ರಸಿದ್ಧ ಶ್ಲೋಕ ಇದು, ಮತ್ತು ಅತ್ಯಂತ ತಪ್ಪಾಗಿ ಅರ್ಥೈಸಲ್ಪಡುವುದೂ ಇದೇ. ನಾಲ್ಕು ಪಾದಗಳಲ್ಲಿ ನಾಲ್ಕು ಬೇರೆ ಬೇರೆ ಮಾತುಗಳಿವೆ, ಮತ್ತು ನಾಲ್ಕನೆಯದೇ ಮೊದಲ ಮೂರನ್ನು ದುರುಪಯೋಗದಿಂದ ಕಾಪಾಡುತ್ತದೆ.

This is the most famous verse of the Gita, and the most misread. Its four quarters say four different things, and it is the fourth that protects the first three from misuse.

ಶಂಕರಾಚಾರ್ಯರ ವಿವರಣೆ ನೇರ: ಫಲದಲ್ಲಿ ಅಧಿಕಾರ ಬೇಡ ಎಂದರೆ ಫಲದ ತೃಷ್ಣೆ ಬೇಡ ಎಂದು. ಫಲದ ತೃಷ್ಣೆಯಿಂದ ಪ್ರೇರಿತನಾಗಿ ಕರ್ಮ ಮಾಡಿದರೆ ಅವನೇ ಆ ಫಲದ, ಅಂದರೆ ಮತ್ತೊಂದು ಜನ್ಮದ ಹೇತುವಾಗುತ್ತಾನೆ. ರಾಮಾನುಜಾಚಾರ್ಯರು ಇನ್ನೊಂದು ಪದರ ಸೇರಿಸುತ್ತಾರೆ: ಕರ್ಮ ಮಾಡುತ್ತಿರುವಾಗಲೂ ‘ನಾನೇ ಮಾಡುವವನು’ ಎಂಬ ಭಾವ ಬೇಡ, ಮತ್ತು ಅವರು ಅಕರ್ಮಣಿ ಸಂಗ ಎಂಬುದನ್ನು ಅರ್ಜುನನ ‘ನಾನು ಹೋರಾಡುವುದಿಲ್ಲ’ ಎಂಬ ಮಾತಿಗೇ ನೇರವಾಗಿ ಜೋಡಿಸುತ್ತಾರೆ.

Shankaracharya’s explanation is direct: to have no claim on the fruit means to have no craving for it. One who acts impelled by that craving becomes himself the cause of that fruit, which is another birth. Ramanujacharya adds a further layer: even while acting, do not carry the sense that you are the doer; and he ties attachment to inaction directly to Arjuna’s own words, I shall not fight.

ಮಧ್ವಾಚಾರ್ಯರ ನಿಲುವು ಇಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತದೆ. ‘ಸ್ವರ್ಗಕಾಮೋ ಯಜೇತ’ ಎಂಬಂಥ ಶ್ರುತಿಗಳಲ್ಲಿ ಕಾಮನೆಗೂ ವಿಧಿ ಇರುವಾಗ ಇಲ್ಲಿ ಅದನ್ನು ನಿಷೇಧಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಅವರು ಎತ್ತುತ್ತಾರೆ. ಫಲಗಳು ನಮ್ಮ ಸ್ವಾತಂತ್ರ್ಯದಿಂದ ಬರುವುದಿಲ್ಲ, ಕರ್ಮದಿಂದಲೇ ಬರುತ್ತವೆ, ಆದ್ದರಿಂದ ಇಲ್ಲಿ ನಿಷೇಧವಾಗುತ್ತಿರುವುದು ಫಲವಲ್ಲ, ಕಾಮನೆ ಮಾತ್ರ ಎಂಬುದು ಅವರ ಉತ್ತರ. ಶಾಸ್ತ್ರದಲ್ಲಿ ಫಲಗಳನ್ನು ಹೇಳುವುದು ಔಷಧಿಗೆ ಸಿಹಿ ಹಚ್ಚಿದಂತೆ, ಒಲಿಸಿಕೊಳ್ಳಲು ಮಾತ್ರ ಎಂಬ ಭಾಗವತದ ಸಾಲನ್ನು ಅವರು ಉದ್ಧರಿಸುತ್ತಾರೆ.

Madhvacharya’s position stands apart here. He raises the question of how desire can be forbidden when scripture itself says, let one who desires heaven perform the sacrifice. His answer is that fruits do not come at our will but follow from the act, so what is forbidden here is not the fruit but the craving. He quotes the Bhagavata’s line that scripture mentions fruits only to draw people in, as a medicine is sweetened.

ಅಧಿಕಾರ ಎಂಬ ಪದವನ್ನು ಗಮನಿಸಬೇಕು. ಅದು ಕರ್ತವ್ಯ ಮಾತ್ರವಲ್ಲ, ಹಕ್ಕು ಕೂಡ. ಕೆಲಸ ನಿನ್ನದು ಎಂಬ ಮಾತಿನಲ್ಲಿ ಒಂದು ಗೌರವ ಇದೆ.

The word adhikara deserves notice. It is not merely duty but a claim, a right. There is a certain dignity in being told that the work is yours.

ಆಧಾರ: ಹಲವು ಮೂಲಗಳು. ವ್ಯಾಖ್ಯಾನಕಾರರ ಅಭಿಪ್ರಾಯ ಭಿನ್ನವಾಗಿರುವಲ್ಲಿ ಎರಡೂ ಅರ್ಥಗಳನ್ನು ಇಲ್ಲಿ ಕೊಟ್ಟಿದ್ದೇವೆ.

Sources: several. Where commentators differ, both readings are given here.

ಇಂದಿನ ಬದುಕಿಗೆFor life today

‘ಫಲ ಬಯಸಬೇಡ’ ಎಂಬುದನ್ನು ‘ಫಲ ಬರದಿದ್ದರೂ ಪರವಾಗಿಲ್ಲ, ಹಾಗಾಗಿ ಎಚ್ಚರ ಬೇಡ’ ಎಂದು ತಿರುಚುವುದು ಸುಲಭ. ಶ್ಲೋಕದ ಕೊನೆಯ ಪಾದ ಆ ಬಾಗಿಲನ್ನು ಮುಚ್ಚುತ್ತದೆ. ಕೆಲಸ ಮಾಡದಿರುವುದರಲ್ಲೂ ಅಂಟು ಬೇಡ.

It is easy to twist do not seek the fruit into it does not matter how it turns out, so care less. The last quarter of the verse closes that door: do not be attached to inaction either.

ವೈದ್ಯರಿಗೆ ಈ ಶ್ಲೋಕ ದಿನದ ಕೆಲಸದಷ್ಟೇ ಹತ್ತಿರವಾದದ್ದು. ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಎಚ್ಚರದಿಂದ ಮಾಡುವುದು ನಮ್ಮ ಕೈಯಲ್ಲಿದೆ. ರೋಗಿ ಬದುಕುತ್ತಾರೋ ಇಲ್ಲವೋ ಎಂಬುದು ನಮ್ಮ ಕೈಯಲ್ಲಿ ಪೂರ್ತಿ ಇಲ್ಲ. ಈ ಎರಡನ್ನೂ ಬೇರ್ಪಡಿಸಿ ನೋಡದಿದ್ದರೆ ಕೆಲಸವೂ ಕೆಡುತ್ತದೆ, ಮನಸ್ಸೂ ಸವೆಯುತ್ತದೆ.

For a doctor this verse sits very close to the day’s work. Performing an operation with the greatest care is in our hands. Whether the patient lives is not wholly in our hands. Without keeping those two apart, the work suffers and the mind wears out.


ಭಗವದ್ಗೀತೆಯ ಎರಡನೆಯ ಅಧ್ಯಾಯದ ಎಲ್ಲ ಶ್ಲೋಕಗಳು ಒಂದೇ ಪುಟದಲ್ಲಿ: ಕನ್ನಡ  ·  ದೇವನಾಗರಿ  ·  English IAST


ಹೊಸ ಬರಹ ಬಂದಾಗ ತಿಳಿಯಿರಿ

ಅನಗತ್ಯ ಸಂದೇಶ ಕಳುಹಿಸುವುದಿಲ್ಲ. ವಿವರಕ್ಕೆ ಗೌಪ್ಯತಾ ನೀತಿ ನೋಡಿ.

ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.

ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸ ಪ್ರಕಟವಾಗುವುದಿಲ್ಲ. ಅಗತ್ಯವಿರುವ ಕಡೆ * ಗುರುತಿದೆ

ಮೇಲಕ್ಕೆ