ಭಗವದ್ಗೀತೆ 1.25 ಅರ್ಥ: ಭೀಷ್ಮದ್ರೋಣಪ್ರಮುಖತಃ

ಭಗವದ್ಗೀತೆಯ ಮೊದಲನೆಯ ಅಧ್ಯಾಯದ ಇಪ್ಪತ್ತೈದನೆಯ ಶ್ಲೋಕದ ಪದಶಃ ಅರ್ಥ, ಕನ್ನಡ ಮತ್ತು ಇಂಗ್ಲಿಷ್ ವಿವರಣೆಯೊಂದಿಗೆ.

ಶ್ಲೋಕ 1.25, ಭಗವದ್ಗೀತೆ, ಜೀವನ ಸೂತ್ರ

ಭಗವದ್ಗೀತೆಯ ಮೊದಲನೆಯ ಅಧ್ಯಾಯದ ಎಲ್ಲ ಶ್ಲೋಕಗಳು ಇಲ್ಲಿವೆ: ಅರ್ಜುನ ವಿಷಾದ ಯೋಗ.

All verses of Chapter 1 in Kannada, Sanskrit or English IAST.

ಶ್ಲೋಕ (ಕನ್ನಡ)

ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ ।
ಉವಾಚ ಪಾರ್ಥ ಪಶ್ಯೈತಾನ್ಸಮವೇತಾನ್ಕುರೂನಿತಿ ॥ 25 ॥

ಶ್ಲೋಕ (ದೇವನಾಗರಿ)

भीष्मद्रोणप्रमुखतः सर्वेषां च महीक्षिताम् ।
उवाच पार्थ पश्यैतान्समवेतान्कुरूनिति ॥ 25 ॥

ಶ್ಲೋಕ (English IAST)

bhīṣmadroṇapramukhataḥ sarveṣāṃ ca mahīkṣitām |
uvāca pārtha paśyaitānsamavetānkurūniti || 25 ||

ಪದಶಃ ಅರ್ಥ

  • ಭೀಷ್ಮದ್ರೋಣಪ್ರಮುಖತಃ (भीष्मद्रोणप्रमुखतः, bhīṣmadroṇapramukhataḥ) = ಭೀಷ್ಮ ಮತ್ತು ದ್ರೋಣರ ಎದುರಿಗೆ (in front of Bhishma and Drona)
  • ಸರ್ವೇಷಾಮ್ (सर्वेषाम्, sarveṣām) = ಎಲ್ಲ (of all)
  • (च, ca) = ಮತ್ತು (and)
  • ಮಹೀಕ್ಷಿತಾಮ್ (महीक्षिताम्, mahīkṣitām) = ರಾಜರ (the rulers of the earth)
  • ಉವಾಚ (उवाच, uvāca) = ಹೇಳಿದನು (said)
  • ಪಾರ್ಥ (पार्थ, pārtha) = ಓ ಪಾರ್ಥ, ಪೃಥೆಯ ಮಗನೇ (O Partha, son of Pritha)
  • ಪಶ್ಯ (पश्य, paśya) = ನೋಡು (behold)
  • ಏತಾನ್ (एतान्, etān) = ಇವರನ್ನು (these)
  • ಸಮವೇತಾನ್ (समवेतान्, samavetān) = ಒಟ್ಟುಗೂಡಿರುವ (assembled)
  • ಕುರೂನ್ (कुरून्, kurūn) = ಕುರುಗಳನ್ನು (Kurus)
  • ಇತಿ (इति, iti) = ಎಂದು (thus)

ಸಂಪೂರ್ಣ ಅರ್ಥ (ಕನ್ನಡ)

ಭೀಷ್ಮ ದ್ರೋಣರ ಮತ್ತು ಎಲ್ಲ ರಾಜರ ಎದುರಿಗೆ ರಥ ನಿಲ್ಲಿಸಿ, ‘ಪಾರ್ಥ, ಇಲ್ಲಿ ಒಟ್ಟುಗೂಡಿರುವ ಈ ಕುರುಗಳನ್ನು ನೋಡು’ ಎಂದು ಹೇಳಿದನು.

ಸಂಪೂರ್ಣ ಅರ್ಥ (ಇಂಗ್ಲಿಷ್)

in front of Bhishma, Drona and all the rulers of the earth, and said: Partha, behold these Kurus gathered here.

ಶ್ಲೋಕ 1.25ರ ವಿವರಣೆContext and commentary on verse 1.25

ಇಡೀ ಮೊದಲ ಅಧ್ಯಾಯದಲ್ಲಿ ಕೃಷ್ಣನ ಬಾಯಿಂದ ಬರುವ ಮಾತು ಇದೊಂದೇ: ಪಾರ್ಥ, ಪಶ್ಯೈತಾನ್ ಸಮವೇತಾನ್ ಕುರೂನ್. ರಥವನ್ನು ಎಲ್ಲಿ ನಿಲ್ಲಿಸಿದನು ಎಂಬುದೂ ಗಮನಾರ್ಹ: ಭೀಷ್ಮ ಮತ್ತು ದ್ರೋಣರ ನೇರ ಎದುರಿಗೆ. ಅರ್ಜುನನಿಗೆ ಅತ್ಯಂತ ಪ್ರಿಯರಾದ ಅಜ್ಜ ಮತ್ತು ಗುರು ಇವರಿಬ್ಬರೇ. ಈ ಜಾಗದ ಆಯ್ಕೆಯಲ್ಲೇ ಕೃಷ್ಣನ ಉದ್ದೇಶ ಅಡಗಿದೆ ಎಂದು ಹಲವು ವ್ಯಾಖ್ಯಾನಕಾರರು ಅಭಿಪ್ರಾಯಪಡುತ್ತಾರೆ.

This is the only sentence Krishna speaks in the whole first chapter: Partha, pashyaitan samavetan kurun. Where he halts the chariot matters too: directly in front of Bhishma and Drona, the grandfather and the teacher Arjuna loves most. Many commentators see Krishna’s purpose in this very choice of place.

ಎರಡು ಪದಗಳನ್ನು ಬಿಡಿಸಿ ನೋಡಬಹುದು. ಪಾರ್ಥ ಎಂದರೆ ಪೃಥೆಯ, ಅಂದರೆ ಕುಂತಿಯ ಮಗ. ಕುಂತಿ ಕೃಷ್ಣನ ತಂದೆ ವಸುದೇವನ ತಂಗಿ. ಹಾಗಾಗಿ ಈ ಸಂಬೋಧನೆಯಲ್ಲೇ ಒಂದು ಬಂಧುತ್ವದ ನೆನಪಿದೆ. ಅದಲ್ಲದೆ ಕೃಷ್ಣ ಎದುರಿನವರನ್ನು ಧಾರ್ತರಾಷ್ಟ್ರರು ಎನ್ನುವುದಿಲ್ಲ, ಕುರುಗಳು ಎನ್ನುತ್ತಾನೆ. ಪಾಂಡವರೂ ಕುರುವಂಶದವರೇ. ಆ ಒಂದು ಪದ ಎರಡೂ ಕಡೆಯವರನ್ನು ಒಂದೇ ಕುಟುಂಬವಾಗಿ ತೋರಿಸುತ್ತದೆ.

Two words can be unpacked. Partha means the son of Pritha, that is, of Kunti. Kunti is the sister of Krishna’s father Vasudeva, so the address itself carries a reminder of kinship. Besides, Krishna does not call those opposite the sons of Dhritarashtra. He calls them Kurus. The Pandavas are Kurus too. That one word shows both sides as a single family.

ಆಧಾರ: ಹಲವು ಮೂಲಗಳು. ವ್ಯಾಖ್ಯಾನಕಾರರ ಅಭಿಪ್ರಾಯ ಭಿನ್ನವಾಗಿರುವಲ್ಲಿ ಎರಡೂ ಅರ್ಥಗಳನ್ನು ಇಲ್ಲಿ ಕೊಟ್ಟಿದ್ದೇವೆ.

Sources: several. Where commentators differ, both readings are given here.

ಇಂದಿನ ಬದುಕಿಗೆFor life today

ದುರ್ಯೋಧನ ‘ನಮ್ಮವರು, ಅವರು’ ಎಂದು ಎಣಿಸಿದ. ಅರ್ಜುನ ‘ದುರ್ಬುದ್ಧಿಯ ಕಡೆಯವರು’ ಎಂದ. ಕೃಷ್ಣ ಒಂದೇ ಪದ ಬಳಸಿದ: ಕುರುಗಳು. ಕರೆಯುವ ಹೆಸರು ಬದಲಾದರೆ ನೋಡುವ ರೀತಿಯೂ ಬದಲಾಗುತ್ತದೆ.

Duryodhana counted ours and theirs. Arjuna said the men of the evil-minded one. Krishna used one word: Kurus. When the name changes, the way we see changes too.

ಆಸ್ತಿಯ ವ್ಯಾಜ್ಯದಲ್ಲಿ ಎದುರು ನಿಂತವರನ್ನು ‘ಎದುರು ಪಾರ್ಟಿ’ ಎಂದು ಕರೆಯುವುದಕ್ಕೂ ‘ಅಣ್ಣ’ ಎಂದು ಕರೆಯುವುದಕ್ಕೂ ವ್ಯತ್ಯಾಸವಿದೆ. ಎರಡನೆಯ ಪದ ಹೋರಾಟವನ್ನು ಕಷ್ಟಗೊಳಿಸುತ್ತದೆ, ಆದರೆ ಸತ್ಯಕ್ಕೆ ಹತ್ತಿರವಾಗಿರುತ್ತದೆ.

In a property dispute, calling the person opposite the other party is different from calling him elder brother. The second word makes the fight harder, but it is closer to the truth.


ಭಗವದ್ಗೀತೆಯ ಮೊದಲನೆಯ ಅಧ್ಯಾಯದ ಎಲ್ಲ ಶ್ಲೋಕಗಳು ಒಂದೇ ಪುಟದಲ್ಲಿ: ಕನ್ನಡ  ·  ದೇವನಾಗರಿ  ·  English IAST


ಹೊಸ ಬರಹ ಬಂದಾಗ ತಿಳಿಯಿರಿ

ಅನಗತ್ಯ ಸಂದೇಶ ಕಳುಹಿಸುವುದಿಲ್ಲ. ವಿವರಕ್ಕೆ ಗೌಪ್ಯತಾ ನೀತಿ ನೋಡಿ.

ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.

ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸ ಪ್ರಕಟವಾಗುವುದಿಲ್ಲ. ಅಗತ್ಯವಿರುವ ಕಡೆ * ಗುರುತಿದೆ

ಮೇಲಕ್ಕೆ